ಸೊರಬ ; ಆತ ವೀಳ್ಯದೆಲೆ ವ್ಯಾಪಾರಿ. ಹೀಗೆ ಕಷ್ಟ ಬಂದಾಗ 5 ಸಾವಿರ ರೂಪಾಯಿ ಸಾಲ ಪಡೆದಿದ್ದ. ಐದು ಸಾವಿರಕ್ಕೆ ಸಾಕಷ್ಟು ಬಡ್ಡಿಯೂ ಕಟ್ಟಿದ್ದ. ಆದರೆ, 5 ಸಾವಿರಕ್ಕೆ ಬಡ್ಡಿ ಸೇರಿ 9 ಸಾವಿರ ರೂ. ಆಗಿತ್ತು. ಜತೆಗೆ ಸಾಲ ಕೊಟ್ಟವನ ದೌರ್ಜನ್ಯ, ಅವಮಾನದಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹೌದು, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಿರೇಎಡಗೋಡು ಗ್ರಾಮದ ಮಹೇಶಪ್ಪ (48) ವೀಳ್ಯದೆಲೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಹೀಗೆ ಕಷ್ಟ ಬಂದಾಗ ಗ್ರಾಮದ ಒಬ್ಬನಿಂದ 5 ಸಾವಿರ ಕೈ ಸಾಲ ತಗೊಂಡಿದ್ದ. 5 ಸಾವಿರಕ್ಕೆ ಬಡ್ಡಿ ಸೇರಿ 9 ಸಾವಿರ ಸಾಲ ತೀರಿಸಲಾಗದೆ ಸಾಲಗಾರನ ಕಾಟಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಾಲ ಕೊಟ್ಟ ವ್ಯಕ್ತಿ ಬಡ್ಡಿ ಸಮೇತ 9 ಸಾವಿರ ರೂ. ಕೊಡುವಂತೆ ಕೇಳಿದ್ದ. ಸಾಲ ಹಿಂದಿರುಗಿಸದ ಕಾರಣ ಮಹೇಶಪ್ಪ ಬಳಿ ಇದ್ದ ಬೈಕ್ ಅನ್ನು ಎತ್ತಿಕೊಂಡು ಹೋಗಿದ್ದ. ಇದರಿಂದ ಅವಮಾನ ತಾಳಲಾರದೇ ಮಹೇಶಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.