Ripponpete

ಮೋದಿ ಆಡಳಿತದ 12 ವರ್ಷಗಳ ಅಭೂತ ಪೂರ್ವ ಸಾಧನೆ ; ಡಾ. ಧನಂಜಯ ಸರ್ಜಿ

ರಿಪ್ಪನ್‌ಪೇಟೆ ; ಪ್ರಧಾನಿ ನರೇಂದ್ರಮೋದಿ ಅವರು ದೇಶದಲ್ಲಿ ದೀರ್ಘಾಕಾಲದ ಪ್ರಧಾನಿ ಎನ್ನುವ ಕೀರ್ತಿಗೆ ಪಾತ್ರರಾಗಿರುವ ಹಿನ್ನಲೆಯಲ್ಲಿ ಆರಂಭಿಸಲಾಗಿರುವ ಬೂತ್ ಮಟ್ಟದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಕೋಡೂರು ಗ್ರಾಮದ ಬೇಹಳ್ಳಿ ಕಿರಣ್‌ಕುಮಾರ್ ಅಬ್ಬಿ ಅವರ ನಿವಾಸದಲ್ಲಿ ಬುಧವಾರ ರಾತ್ರಿ ವಾಸ್ತವ್ಯ ಮಾಡಿದರು.

WhatsApp Group Join Now
Telegram Group Join Now
Instagram Group Join Now

ಭಾರತದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರಮೋದಿಯವರು ದೇಶದ ಪ್ರಧಾನಿಯಾಗಿ 12 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾ ಓಬಿಸಿ ಮೋರ್ಚಾದ ವಿಧಾನಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ ಅವರ ವಿಶೇಷ ಸಂಪರ್ಕ ಅಭಿಯಾನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಹೊಸನಗರ ಮಂಡಲದ ಮಾರುತಿಪುರ ಮಹಾಶಕ್ತಿ ಕೇಂದ್ರದ ಬೇಹಳ್ಳಿ ಗ್ರಾಮದಲ್ಲಿನ ಅಬ್ಬಿ ಕಿರಣ್ ಅವರ ನಿವಾಸದಲ್ಲಿ ಕಳೆದ 12 ವರ್ಷಗಳ ಐತಿಹಾಸಿಕ ಜನಕಲ್ಯಾಣ ಕಾರ್ಯಕ್ರಮಗಳು ವಿಕಸಿತ ಭಾರತದ ಸಂಕಲ್ಪದ ಕುರಿತ ನಡೆದ ಸಭೆಯಲ್ಲಿ ಮಾತನಾಡಿ, ಅಧಿಕಾರ ನಡೆಸುತ್ತಿರುವ ಮೋದಿ ಅವರ ಜನಪರ ಹಾಗೂ ಅಭಿವೃದ್ದಿ ಮತ್ತು ವಿಶ್ವಮಟ್ಟದಲ್ಲಿ ಹಲವಾರು ರಾಷ್ಟ್ರಗಳಿಗೆ ನೆರವು ನೀಡಿದ್ದರಿಂದಾಗಿ ಇಂದು ನಮ್ಮ ದೇಶವನ್ನು ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಅಗ್ರಗಣ್ಯ ನಾಯಕರಾಗಿದ್ದಾರೆಂದರು.

ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರ ದಾಖಲೆಯನ್ನು ಸರಿಗಟ್ಟಿಹೊಸ ಇತಿಹಾಸ ಸೃಷ್ಟಿಸಿದ್ದಾರೆ. ದೇಶಕ್ಕೆ ಅಂತರಿಕ ಹಾಗೂ ಬಾಹ್ಯವಾಗಿ ಎಷ್ಟೇ ತೊಂದರೆಗಳು ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಿ ದೇಶವನ್ನು ವಿಶ್ವಗುರುವನ್ನಾಗಿ ಇಡೀ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಮೋದಿ ವರಿಗೆ ಸಲ್ಲಬೇಕು ಎಂದು ಮೋದಿಜಿಯವರ ನೇರ ದಿಟ್ಟ ಸಮರ್ಥ ಆಡಳಿತ ವೈಖರಿಯನ್ನು ಪ್ರಶಂಸಿಸಿದರು.

ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರದ ವಿಶ್ವಾಸ ವಿಕಾಸ ಜನರ ಕಲ್ಯಾಣ ಸಾರ್ವಜನಿಕರ ಸೇವಾ ಸಂಕಲ್ಪದ ಕುರಿತು ಸಮಗ್ರವಾಗಿ ಸಾರ್ವಜನಿಕರ ಮನಮುಟ್ಟುವಂತೆ ವಿವರಿಸಿದ ಅವರು ಕೇವಲ ಆಭಿವ್ಯಕ್ತಿಯಲ್ಲ ಬದಲಾಗಿ ಸೂಕ್ಷ್ಮ ವ್ಯಕ್ತಿಯ ಹೃದಯದಿಂದ ಹೊರಹೊಮ್ಮಿದ ದ್ವನಿಯಾಗಿ ದೇಶದ ಬಡವರ ರೈತರ ಮತ್ತು ಮಧ್ಯಮ ವರ್ಗದ ಜನರ ಮನಮುಟ್ಟಿದ್ದಾರೆಂದು ಬಣ್ಣಿಸಿದರು.

ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ಕಿಸಾನ್ ಯೋಜನೆಯ ಮೂಲಕ ರೈತರ ಆರ್ಥಿಕ ಸ್ಥಿತಿಯನ್ನು ಸುಸ್ಥಿತಿಗೆ ತರುವ ಪ್ರಯತ್ನ ಮಾಡಿದರು. ಮೋದಿ ಆಡಳಿತಕ್ಕಷ್ಟೇ ಸೀಮಿತವಾಗದೆ ಕ್ರೀಡೆಗೆ ಉತ್ತೇಜನ ನೀಡಿ ಕ್ರೀಡಾ ಸ್ಪೂರ್ತಿ ನೀಡಿ ಸೋಲು ಗೆಲುವನ್ನು ಸಮಾನ ದೃಷ್ಟಿಯಲ್ಲಿ ಕಂಡವರಾಗಿದ್ದಾರೆ. ಹಾಗೆಯೇ ಗಗನ ಯಾತ್ರಿಗಳಿಗೂ ಅಷ್ಟೇ ಪ್ರೋತ್ಸಾಹ ನೀಡಿ ವಿಜ್ಞಾನಿಗಳಿಗೂ ಹೆಚ್ಚಿನ ಮಹತ್ವ ನೀಡಿದರು. ಸಂಘ ಪರಿವಾರದ ಹಿರಿಯರ ನಿರೀಕ್ಷೆಯಂತೆ ನರೇಂದ್ರ ಮೋದಿ ಚುನಾವಣೆಯಲ್ಲಿ ಆಯ್ಕೆಯಾಗಿ 12 ವರ್ಷಗಳ ಕಾಲ ಜನಪರ ಅಡಳಿತ ನಿರ್ವಹಿಸುತ್ತಾ ಬಂದಿದ್ದು ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ಭಾರತ ದೇಶವು ಅಭಿವೃದ್ದಿಯತ್ತ ಸಾಗುವಂತೆ ಮಾಡಿದ ಕೀರ್ತಿ ಮೋದಿಜಿಯವರದಾಗಿದೆ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಮಾಜಿ ಶಾಸಕ ಬಿ.ಸ್ವಾಮಿರಾವ್, ನಿಕಟ ಪೂರ್ವ ಜಿಲ್ಲಾ ಬಿಜೆಪಿ ಆಧ್ಯಕ್ಷ ಟಿ.ಡಿ.ಮೇಘರಾಜ್, ಬಿಜೆಪಿ ಮಂಡಲ ಅಧ್ಯಕ್ಷ ಎನ್.ಸತೀಶ್, ಬಿಜೆಪಿ ಮುಖಂಡರಾದ ಬಿ.ಯುವರಾಜ್, ಎನ್.ಆರ್.ದೇವಾನಂದ, ಉಮೇಶ್‌ ಕಂಚುಗಾರ್, ಅಬ್ಬಿ ಕಿರಣ್ ಶ್ರೀದೇವಿ ಕಿರಣ್, ಆಲವಳ್ಳಿ ವೀರೇಶ್, ಎ.ಟಿ.ನಾಗರತ್ನಮ್ಮ, ಪದ್ಮಿನಿ, ಸುಧಾಕರ್, ಆರ್.ಟಿ.ಗೋಪಾಲ, ಎ.ವಿ.ಮಲ್ಲಿಕಾರ್ಜುನ, ಕುಮಾರನಾಯ್ಡು, ಗಣೇಶ ಬಿಳಕಿ, ಬೆಳಗೋಡು ಗಣಪತಿ, ನಾಗಾರ್ಜುನಸ್ವಾಮಿ, ಹರೀಶ್, ತಿಮ್ಮಪ್ಪ ಕಳೂರು, ಎಂ.ಸುರೇಶ್‌ಸಿಂಗ್, ದೇವೇಂದ್ರಪ್ಪಗೌಡ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುಂದರೇಶ್, ಕಾರ್ಯದರ್ಶಿ ಜಿ.ಡಿ.ಮಲ್ಲಿಕಾರ್ಜುನ, ಬುಕ್ಕಿವರೆ ರಾಜೇಶ್, ಬೂತ್ ಅಧ್ಯಕ್ಷರು ಇನ್ನಿತರ ಪಕ್ಷದ ಮುಖಂಡರು ಹಾಜರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!