ರಿಪ್ಪನ್‌ಪೇಟೆ ; ಸಚಿವ ಸಂಪುಟದಲ್ಲಿ ಮಂಡಿಸಿರುವ ಜಾತಿಗಣತಿ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಈಗಾಗಲೇ ನೀಡಲಾದ ಅವೈಜ್ಞಾನಿಕ ವರದಿಯನ್ನು ತಿರಸ್ಕರಿಸಿ ಮರು ಗಣತಿ ಮಾಡುವಂತೆ ಹೊಸನಗರ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಉಮೇಶ ಮಾಣಿಕೆರೆ ಮತ್ತು ರಿಪ್ಪನ್‌ಪೇಟೆ ವೀರಶೈವ ಸಮಾಜದ ಉಪಾಧ್ಯಕ್ಷ ಜಿ.ಎಂ.ದುಂಡರಾಜಗೌಡ ಗವಟೂರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇಲ್ಲಿನ ಶಿವಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಜಾತಿ ಗಣತಿ ವರದಿ ಅತ್ಯಂತ ಅವೈಜ್ಞಾನಿಕವಾಗಿದೆ. ಸಾಕಷ್ಟು ನ್ಯೂನತೆ ಮತ್ತು ತಾರತಮ್ಯಗಳಿಂದ ಮಾಡಿದಂತಾಗಿ. ಆದ್ದರಿಂದ ಹೊಸದಾಗಿ ಜಾತಿಗಣತಿ ಮರುಗಣತಿ ಮಾಡಿ ಮತ್ತೊಮ್ಮೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ರಾಜ್ಯ ಸರ್ಕಾರ ನಡೆಸಿರುವ ಜಾತಿಗಣತಿ ಬಗ್ಗೆ ನಮ್ಮ ಸಮುದಾಯದಲ್ಲಿನ ಸಂಖ್ಯೆ ಗಣನೀಯವಾಗಿ ಕಡಿಮೆ ತೋರಿಸಲಾಗಿದೆ. ಆದರೆ ಈ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ವೀರಶೈವ ಲಿಂಗಾಯಿತ ಸಮುದಾಯದಲ್ಲಿ ಇರುವುದು ಆದರೆ ವರದಿಯಲ್ಲಿ ಅತಿ ಕಡಿಮೆ ಪ್ರಮಾಣ ದಾಖಲಿಸಿದ್ದು ಇದು ಸಮುದಾಯವನ್ನು ಒಡೆಯುವ ಹುನ್ನಾರವಾಗಿದೆ. ತಕ್ಷಣ ಸರ್ಕಾರ ಈಗ ಪ್ರಕಟಿಸಿರುವ ವರದಿಯನ್ನು ಮರು ಸಮೀಕ್ಷೆ ನಡೆಸುವಂತೆ ಆಗ್ರಹಿಸಿದರು.
ನಮ್ಮ ಸಮುದಾಯದ ಎಲ್ಲಾ ಮಠಾಧೀಶರು ಮತ್ತು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಅಭಿಪ್ರಾಯವೂ ಇದೆ ಆಗಿದೆ. ಈ ಜಾತಿಗಣತಿಯನ್ನು ಮರು ಪರಿಶೀಲನೆ ಮಾಡಬೇಕು ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಸರ್ಕಾರದ ವಿರುದ್ದ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ವೇದಾಂತಪ್ಪಗೌಡ, ಉಪಾಧ್ಯಕ್ಷ ಡಿ.ಎಸ್.ಕರುಣೇಶ್ವರ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಲೀಲಾ ಉಮಾಶಂಕರ, ಸ್ವಾಮಿಗೌಡರು ನೆವಟೂರು, ಜಿ.ಡಿ.ಮಲ್ಲಿಕಾರ್ಜುನ, ಕುಮಾರಸ್ವಾಮಿ ದೂನ, ತೀರ್ಥೇಶ್, ಪಾತ್ರೆ ನಿಂಗಪ್ಪ, ನಾಗಭೂಷಣ ಬೆಳಂದೂರು, ಪರಮೇಶ ಕಮದೂರು ಇನ್ನಿತರರು ಹಾಜರಿದ್ದರು.