ಸಾಗರ ; ಶರಾವತಿ ಹಿನ್ನೀರಿನಲ್ಲಿ ಈಜುವ ವೇಳೆ ಪಶುವೈದ್ಯಾಧಿಕಾರಿ ನೀರು ಪಾಲಾಗಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹಕ್ರೆಯ ಬಾಳೆಗೆರೆಯ ಸಮೀಪ ಭಾನುವಾರ ನಡೆದಿದೆ.
ಸೊರಬ ತಾಲೂಕಿನ ಹೊರಬೈಲಿನ ನಿವಾಸಿಯಾಗಿರುವ ಡಾ.ಸುನಿಲ್ (38) ನೀರು ಪಾಲಾದ ಪಶುವೈದ್ಯ.
ಕುಟುಂಬ ಸಮೇತರಾಗಿ ಶರಾವತಿ ಹಿನ್ನೀರಿಗೆ ಪ್ರವಾಸಕ್ಕೆ ತೆರಳಿದ್ದಾಗ ಅವಘಡ ಸಂಭವಿಸಿದೆ. ಹಿನ್ನೀರಿನಲ್ಲಿ ಸುಮಾರು 20 ಮೀಟರ್ ದೂರ ಈಜಲು ವೈದ್ಯ ಸುನಿಲ್ ಹೋಗಿದ್ದಾರೆ. ಆದರೆ, ಹಿಂದಿರುಗಿ ಬರಲು ಪ್ರಯತ್ನಿಸುವಾಗ ಆಯಾಸದಿಂದ ಸಾಧ್ಯವಾಗಿರಲಿಲ್ಲ.
ಪಶು ವೈದ್ಯ ಡಾ. ಸುನಿಲ್ ಶವವನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸಾಗರ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ವೈದ್ಯೆ ಆಗಿರುವ ಪತ್ನಿ, ಇಬ್ಬರು ಮಕ್ಕಳು ಮತ್ತು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





