Ripponpete

ಮೂಗುಡ್ತಿಯಲ್ಲಿ ವಿಕಸಿತ ಭಾರತ ಸಂಕಲ್ಪ ಸಮಾವೇಶ | ಭಾರತ ದೇಶ ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವುದರ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಿ ; ಆರಗ ಜ್ಞಾನೇಂದ್ರ

ರಿಪ್ಪನ್‌ಪೇಟೆ ; ಕಾರ್ಯಕರ್ತರಲ್ಲಿ ಜಾಗೃತಿ ಹೆಚ್ಚಿಸಬೇಕು. ರಾಷ್ಟ್ರ ಮಟ್ಟದ ಅಭ್ಯುದಯಕ್ಕಾಗಿ ರೈತ ನಾಗರೀಕರ ಮನಸ್ಸಿನಲ್ಲಿ ಗಟ್ಟಿಯಾಗಿ ನಲೆಗೊಳಿಸುವುದು ಅಗತ್ಯವಾಗಿದೆ. ಮೋದಿಜಿಯವರ 11 ವರ್ಷದ ಕೇಂದ್ರದ ಸರ್ಕಾರದ ಜನಹಿತ ಕಾರ್ಯಕ್ರಮಗಳನ್ನು ಮತದಾರರ ಮನೆ ಬಾಗಿಲಿಗೆ ಮುಟ್ಟಿಸುವಲ್ಲಿ ಕಾರ್ಯಕರ್ತರ ಶ್ರಮ ಅಗತ್ಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಕರೆ ನೀಡಿದರು.

WhatsApp Group Join Now
Telegram Group Join Now
Instagram Group Join Now

ಮೂಗುಡ್ತಿಯಲ್ಲಿ ಬಿಜೆಪಿ ಮಂಡಲ ಹುಂಚ ರಿಪ್ಪನ್‌ಪೇಟೆ ಬಿಜೆಪಿ ಮಹಾಶಕ್ತಿ ಕೇಂದ್ರದ ಆಶ್ರಯದಲ್ಲಿ ಅಯೋಜಿಸಲಾದ “ವಿಕಸಿತ ಭಾರತ ಸಂಕಲ್ಪ ಸಮಾವೇಶ’’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪುಡಾರಿಗಳನ್ನು ಸಾಕುತ್ತದೆ.ಬಿಜೆಪಿ ಕಾರ್ಯಕರ್ತರನ್ನು ಬೆಳೆಸುತ್ತದೆ.
ಸಂವಿಧಾನ ಶಿಲ್ಪಿ ಡಾ ಬಿ.ಆರ್.ಆಂಬೇಡ್ಕರ್ ಅವರ ಆಶೋತ್ತರಗಳನ್ನ ಕಾರ್ಯಗರ್ತಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವದ ಬಿಜೆಪಿ ಇತಿಹಾಸದ ನೈಜ ಚಿತ್ರಣವನ್ನು ಸವಿಸ್ತಾರವಾಗಿ ವಿವರಿಸುವ ಕೆಲಸ ಮಾಡುತ್ತಿದೆ. ದೇಶದ ರಕ್ಷಣೆ ಸುವ್ಯವಸ್ಥೆ ಭದ್ರತೆಗಾಗಿ ಆಗಬೇಕಿದ್ದ ತುರ್ತು ಪರಿಸ್ಥಿತಿ ಸಂವಿಧಾನ ವಿರೋಧವಾಗಿ 1975 ರಲ್ಲಿ ಏರಿದ್ದ ಭ್ರಷ್ಟದುರಾಡಳಿತದಿಂದ ನಿಜವಾದ ದೃಷ್ಟಿಕೋನದಲ್ಲಿ ನೋಡದೇ ರಾಜಕೀಯ ಜಾತಿ ಕನ್ನಡಕದಲ್ಲಿ ನೋಡಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಸ್ವಾರ್ಥಕ್ಕಾಗಿ ಬಳಸಿಕೊಂಡ ತುರ್ತು ಪರಿಸ್ಥಿತಿ ಹೇರಿಕೆ ಕರಾಳ ದಿನವಷ್ಟೇ ಅಲ್ಲ ದೇಶದ ದುರಂತದ ದಿನಗಳು ಎಂದರು.

ನಾನು ವಿದ್ಯಾರ್ಥಿಯಾಗಿ ಶಿವಮೊಗ್ಗದಲ್ಲಿ ಓದುತ್ತಿದ್ದಾಗ ಗೋಪಿ ಸರ್ಕಲ್‌ನಲ್ಲಿ ತುರ್ತು ಪರಿಸ್ಥಿತಿಯ ಕುರಿತು ಮಾತನಾಡಿ ಕೊನೆಯಲ್ಲಿ `ಭಾರತ್ ಮಾತಾಕೀ’ ಎಂದು ಹೇಳಿದರು ಆಗ ಭಾಷಣವನ್ನು ಕೇಳಿಸಿಕೊಂಡು ಅಲ್ಲಿಯೇ ನಿಂತಿದ್ದ ನಾನು ಓರ್ವ ಜೈ ಎಂದು ಕೂಗಿದೆ ಆಗ ಹಿಂದೆ ಇದ್ದ ಪೊಲಿಸರು ನನ್ನನ್ನು ಹಿಡಿದೆಳೆದು ಜೀಪ್‌ನಲ್ಲಿ ತುಂಬಿಕೊಂಡು ಜೈಲಿಗೆ ಕಳುಹಿಸಿದರು ಎಂದು ತಮ್ಮ ತುರ್ತು ಪರಿಸ್ಥಿತಿಯಲ್ಲಿನ ಅನುಭವವನ್ನು ಕಾರ್ಯಕರ್ತರ ಮುಂದೆ ಬಿಚ್ಚಿಟ್ಟರು.

ಸ್ವಾತಂತ್ರ್ಯ ಹೋರಾಟ ಬ್ರಿಟೀಷರೆ ದೇಶ ಬಿಟ್ಟು ತೊಲಗಿ ಎಂದು ಹೇಳುವುದರೊಂದಿಗೆ ಹೋರಾಟ ಮಾಡಿದವರನ್ನು ಮರೆಯಬಾರದು. ದೇಶಭಕ್ತರನ್ನ ಜೈಲಿಗೆ ಕಳುಹಿಸಿದರು. ಆಗ ದಿನಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗದಂತೆ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವನ್ನು ಮಾಡಿದ ಕೇಂದ್ರದ ಕಾಂಗ್ರೆಸ್ ಸರ್ಕಾರ ದುರಾಡಳಿತದ ಬಗ್ಗೆ ಯುವ ಜನರಲ್ಲಿ ಮನವರಿಕೆ ಮಾಡಿ ಇಂದಿನ ಕೇಂದ್ರ ಬಿಜೆಪಿ ನರೇಂದ್ರ ಮೋದಿಜಿಯವರ ಸರ್ಕಾರದ ಜನಹಿತ ಕಾರ್ಯ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕರ್ತರು ಮುಂದಾಗಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಶಿವಮೊಗ್ಗ ಬಿಜೆಪಿ ಮುಖಂಡ ಹರಿಕೃಷ್ಣ ಬಾನುಪ್ರಕಾಶ ಮಾತನಾಡಿ, ಭಾರತ ದೇಶದ ಮತದಾರ ಸಂಘಟನೆಯ ಸಂಕಲ್ಪವನ್ನು ಮಾಡುವ ಕೆಲಸ ಮಾಡಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಳೆದ 11 ವರ್ಷಗಳ ಅಧಿಕಾರಾವಧಿಯಲ್ಲಿ ದೇಶವನ್ನು ಅಭ್ಯುದಯದತ್ತ ಕೊಂಡೊಯ್ದಿದ್ದಾರೆ. ಜನ ಮಾನಸದಲ್ಲಿ ಉಳಿಯುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತ ನಡೆದಷ್ಟು ಕಾಲ ಹಿಂದೂ ವಿರೋಧಿ ನೀತಿಯನ್ನು ತೋರಿಸಿದ್ದು ದೇಶದ ಸಮಗ್ರತೆಗೆ ದಕ್ಕೆ ತಂದಿದೆ. 2029 ರ ಮಹಾಚುನಾವಣೆಯ ವೇಳೆಗೆ ಯುವ ಸಮೂಹದಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಬೆಂಬಲಿಸುವ ಮೂಲಕ ದೇಶದ ರಕ್ಷಣೆಗೆ ಮುಂದಾಗಿ ಎಂದು ಹೇಳಿ 2047 ರೊಳಗೆ ಪ್ರಪಂಚದ ವಿಶ್ವ ಗುರುವಾಗವೇಕು. ಆಧ್ಯಾತ್ಮಿಕ ಸುಸಂಸ್ಕೃತ ದೇಶವಾಗಬೇಕೆಂಬ ಆಶಯವಾಗಿದೆ‌. ಆ ಕಾರಣದಿಂದ ನಮ್ಮ ಕಾರ್ಯಕರ್ತರು ಮತದಾರರಿಗೆ ಆರ್ಥ ಮಾಡಿಸುವ ಕೆಲಸ ಮಾಡಬೇಕಾಗಿದೆ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರದ ಕೇವಲ ಹನ್ನೊಂದು ವರ್ಷದಲ್ಲಿ ಹತ್ತು ಹಲವು ಅಭಿವೃದ್ದಿ ಕಾರ್ಯಗಳನ್ನು ಅನುಷ್ಟಾನಗೊಳಿಸುವ ಅಭಿವೃದ್ದಿಪಡಿಸಲಾಗಿದೆ. ಸರ್ಕಾರದ ಸಾಧನೆಗಳು ಬರಿ ಸಾಧನೆಗಳಾಗದೆ ಸಾಧನೆಗಳು ಜನರಲ್ಲಿ ಮಾತಾಗಬೇಕು ಎಂದು ಹೇಳಿ, 11 ವರ್ಷದ ಮೋದಿಜಿಯವರ ಸಾಧನೆಗಳ ಬಗ್ಗೆ ಮತದಾರರಿಗೆ ತಲುಪಿಸುವ ಮೂಲಕ ಕೇಂದ್ರ ಸರ್ಕಾರ ಜಾತಿಗಣತಿ ಮಾಡುವುದರ ಜೊತೆ ಜಾತಿ ಜನಗಣತಿ ಮಾಡುತ್ತಿರುವುದು ಸ್ವಾಗರ್ತಾಹವಾಗಿದೆ, 1931 ರಲ್ಲಿ ನಡೆದಿದ್ದ ಜಾತಿಗಣತಿ ಮಾಡಿದು ಈಗ ನಮ್ಮ ಕೇಂದ್ರಸರ್ಕಾರ ಗಣತಿ ಕಾರ್ಯಕ್ಕೆ ಮುಂದಾಗಿರುವುದರ ಬಗ್ಗೆ ಕೇಂದ್ರ ಸರ್ಕಾರವನ್ನು ಅಭಿನಂದಿಸಿದರು ಇಂದೇ ನಿರ್ಣಾಯ ಮಾಡಿ ಕೇಂದ್ರಕ್ಕೆ ಕಳುಹಿಸುವುದಾಗಿ ಹೇಳಿ, ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ 12 ಸಾವಿರ ಮನೆಗಳನ್ನು ಮಂಜೂರು ಮಾಡಿಸಲಾಗಿತ್ತು. ಅಲ್ಲದೆ ಮನೆಗೆ 5 ಲಕ್ಷ ರೂ. ಕೊಡುತ್ತಿದ್ದು ಈಗಿನ ಸರ್ಕಾರ ಕೇವಲ 1.20 ಲಕ್ಷ ರೂ ಎನ್.ಆರ್.ಇ.ಜಿ. ಯೋಜನೆಯಡಿ 30 ಸಾವಿರ ಒಟ್ಟು 1.50 ಲಕ್ಷ ರೂ ಹಣ ಕೊಡುತ್ತೇವೆ ಎಂದು ಹೇಳಿದ್ದಾರೆ. ಅದರಲ್ಲೂ ಅವರ ಪಕ್ಷದ ಶಾಸಕ ಬಿ.ಆರ್.ಪಾಟೀಲ್‌ರವರೇ ಬಹಿರಂಗವಾಗಿ ವಸತಿ ಯೋಜನೆಯಲ್ಲಿ ಮನೆ ಮಂಜೂರು ಮಾಡಿಸಲು ಲಂಚ ಕೊಡಬೇಕು ಎಂದು ಆರೋಪಿಸಿದ್ದಾರೆ. ಹಾಗಾದರೆ ಭ್ರಷ್ಟಾಚಾರ ಯಾವ ಮಟ್ಟಕ್ಕೆ ಬಂದಿದೆ ಎಂದು ತಾವುಗಳೇ ಊಹಿಸಿಕೊಳ್ಳಿ ಎಂದ ಅವರು, ಕಾಂಗ್ರೆಸ್ ಪುಡಾರಿಗಳನ್ನು ಹುಟ್ಟುಹಾಕುತ್ತದೆ ಬಿಜೆಪಿ ಕಾರ್ಯಕರ್ತ ಬೆಳೆಸುತ್ತಿದೆ ಎಂದು ಹೇಳಿದರು.

ಹುಂಚ ವಲಯ ಬಿಜೆಪಿ ಅಧ್ಯಕ್ಷ ವಿನಾಯಕ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಜಿಲ್ಲಾ ಬಿಜೆಪಿ ಮುಖಂಡರಾದ ಗಣಪತಿ ಬೆಳಗೋಡು, ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ನವೀನ್ ಹೆದ್ದೂರು, ಆರ್.ಟಿ.ಗೋಪಾಲ್, ಎಂ.ಸುರೇಶಸಿಂಗ್, ನಾಗರತ್ನ ಸಂತೋಷ ಇನ್ನಿತರರು ಹಾಜರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]