ನಾವೆಂದಿಗೂ ಯಶಸ್ವಿನ ಬಗ್ಗೆ ಕನಸು ಕಾಣುತ್ತ ಕೂರಬಾರದು ; ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು

Written by Mahesha Hindlemane

Published on:

ರಿಪ್ಪನ್‌ಪೇಟೆ ; ನಾವೆಂದಿಗೂ ಯಶಸ್ವಿನ ಬಗ್ಗೆ ಕನಸು ಕಾಣುತ್ತ ಕೂರಬಾರದು ಯಶಸ್ಸು ಸಾಧಿಸುವ ಬಗ್ಗೆ ನಿರಂತರ ಕೆಲಸ ಮಾಡುವವರಾಗಬೇಕೆಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮಳವಳ್ಳಿ ಶ್ರೀಮಹಾಲಿಂಗೇಶ್ವರ ಮತ್ತು ಬಸವಣ್ಣ ದೇವಸ್ಥಾನಲ್ಲಿ  ಶ್ರೀಮಾಲಿಂಗೇಶ್ವರ ಮತ್ತು ಬಸವಣ್ಣ ದೇವರುಗಳ ಪ್ರತಿಷ್ಠಾ  ವರ್ಧಂತಿ ಮಹೋತ್ಸವದ ಅಂಗವಾಗಿ  ಕಲಾಹೋಮ ಮತ್ತು ರುದ್ರಾಭಿಷೇಕ ಧಾರ್ಮಿಕ ಕಾರ್ಯಕ್ರಮ ಮತ್ತು ಧರ್ಮ ಸಭೆಯ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿ, ಎಲ್ಲರೂ ಜಗತ್ತೇ ಬದಲಾಗಿದೆ ಎಂದು ಹೇಳುತ್ತಾರೆ. ಆದರೆ ಯೋಚಿಸಿ ಮೆಣಸಿನ ಖಾರ ಬದಲಾಗಿಲ್ಲ, ಮಾವಿನಹಣ್ಣಿನ ಸಿಹಿ ಬದಲಾಗಿಲ್ಲ, ಎಲೆಗಳ ಹಸಿರು ಬಣ್ಣ ಬದಲಾಗಿಲ್ಲ, ಬದಲಾಗಿದ್ದು ಮನುಷ್ಯರ ಮಾನವೀಯತೆ ಹಾಗಾಗಿ ಗುರು-ಹಿರಿಯರಿಗೆ ಗೌರವಿಸಿ ಆದರಣೀಯ ಬದುಕನ್ನು ಸಾಗಿಸುವುದೇ ನಿಜವಾದ ಜೀವ ಆದ್ದರಿಂದ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬರಬೇಕೆಂದರು.

ಶ್ರೀಮಹಾಲಿಂಗೇಶ್ವರ ಮತ್ತು ಬಸವಣ್ಣ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ನಾಗರಾಜ್‌ಗೌಡ, ಗೌರವಾಧ್ಯಕ್ಷ ಚನ್ನಪ್ಪಗೌಡ, ಗ್ರಾಮ ಪಂಚಾಯಿತ್ ಸದಸ್ಯ ಚಂದ್ರಶೇಖರ ಮಳವಳ್ಳಿ, ಮಳವಳ್ಳಿ ಗ್ರಾಮಸ್ಥರು ಹಾಜರಿದ್ದರು.

ಚಂದ್ರಶೇಖರ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

Leave a Comment