ಕಡೆಗದ್ದೆ, ಬಸವಾಪುರ ಸುತ್ತಮುತ್ತ ಮತ್ತೆ ಕಾಡಾನೆ ಹಾವಳಿ ; ಆತಂಕದಲ್ಲಿ ರೈತರು

Written by malnadtimes.com

Published on:

RIPPONPETE ; ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಡೆಗದ್ದೆ, ಬಸವಾಪುರ, ಹಾರೋಹಿತ್ತಲು, ಮಚ್ಚಲಿಜಡ್ಡು, ಕೋಣನಜಡ್ಡು, ಸುತ್ತಮುತ್ತಲಿನಲ್ಲಿ ಗ್ರಾಮಗಳಲ್ಲಿ ಮತ್ತೆ ಕಾಡಾನೆ ಕಾಣಿಸಿಕೊಂಡು ರೈತರ ಜಮೀನಿಗೆ ನುಗ್ಗಿ ಬಾಳೆ, ಅಡಿಕೆ ಬೆಳೆಯನ್ನು ನಾಶಗೊಲಿಸಿರುವ ಘಟನೆ ಎರಡ್ಮೂರು ದಿನಗಳಿಂದ ನಡೆಯುತ್ತಿದ್ದು ರೈತರ ಆತಂಕಕ್ಕೆ ಕಾರಣವಾಗಿದೆ.

WhatsApp Group Join Now
Telegram Group Join Now
Instagram Group Join Now

ಮೇ ತಿಂಗಳಲ್ಲಿ ಬಸವಾಪುರ ಗ್ರಾಮದಲ್ಲಿ ದರಗೆಲೆ ತರಲು ಹೋದ ಕೂಲಿ ಕಾರ್ಮಿಕನನ್ನು ಬಲಿ ಪಡೆದಿದ್ದ ಆನೆಯಿಂದಾಗಿ ಈ ಭಾಗದಲ್ಲಿನ ರೈತರು ಹಗಲು, ರಾತ್ರಿ ಹೀಗೆ ಊರಿನಲ್ಲಿ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದ್ದು ವಿದ್ಯಾರ್ಥಿಗಳು ಸಹ ಶಾಲೆ, ಕಾಲೇಜ್‌ಗೆ ಬಂದು ಹೋಗುವುದೇ ಕಷ್ಟಕರವಾಗಿದೆ. ಪುನಃ ಈಗ ಮೂರ್ನಾಲ್ಕು ದಿನಗಳಿಂದ ಅಲ್ಲಲ್ಲಿ ಆನೆ ಹೊಲ-ಗದ್ದೆಗೆ ನುಗ್ಗಿ ಬಾಳೆ ಅಡಿಕೆ ಬೆಳೆಯನ್ನು ನಾಶಗೊಳಿಸಿರುವುದು ಕಂಡ ರೈತ ನಾಗರೀಕರನ್ನು ಇನ್ನೂ ಭಯಗೊಳ್ಳುವಂತೆ ಮಾಡಿದೆ.

ಇನ್ನಾದರೂ ಅರಣ್ಯ ಇಲಾಖೆ ಆನೆಯನ್ನು ಕೂಡಲೇ ಸ್ಥಳಾಂತರ ಮಾಡಿ ರೈತರ ಆತಂಕವನ್ನು ದೂರ ಮಾಡುವಂತೆ ಆಗ್ರಹಿಸಿದ್ದಾರೆ.


ನಾಗರಹಾವನ್ನು ಸುರಕ್ಷಿತವಾಗಿ ಸೆರೆಹಿಡಿದ ಉರಗ ತಜ್ಞ ಗಂಗಾಧರ

RIPPONPETE ; ಇಲ್ಲಿನ ತೀರ್ಥಹಳ್ಳಿ ರಸ್ತೆಯ ಮನೆಯೊಂದರ ಬಳಿ ಕಾಣಿಸಿಕೊಂಡ ಬೃಹತ್ ಗಾತ್ರದ ನಾಗರಹಾವನ್ನು ಉರಗ ತಜ್ಞ ಗಂಗಾಧರ ಹಿಡಿದು ಕಾಡಿಗೆ ಬಿಟ್ಟರು.

ವಾಸದ ಮನೆಯ ಬಳಿ ಕಾಣಿಸಿಕೊಂಡ ಬೃಹತ್ ಗಾತ್ರದ ನಾಗರಹಾವನ್ನು ಕಂಡ ಮಕ್ಕಳು ಭಯಭೀತರಾಗಿದ್ದು ತಕ್ಷಣ ಉರಗ ತಜ್ಞ ಗಂಗಾಧರ ಇವರನ್ನು ಕರೆಯಿಸಿ ಹಾವನ್ನು ಹಿಡಿಸಿ ಕಾಡಿಗೆ ಬಿಡುವ ಮೂಲಕ ಮಕ್ಕಳಲ್ಲಿನ ಭಯವನ್ನು ದೂರಗೊಳಿಸಿದರು.

Leave a Comment