Ripponpete

ಅಮೇರಿಕಾದ ಚಿಕಾಗೋದಲ್ಲಿ ವಿಶ್ವ ಜೈನಧರ್ಮ ಸಮಾವೇಶ-2025 | ಅಹಿಂಸಾ ಭಾವವು ಮಾನವೀಯ ಮೌಲ್ಯ ವೃದ್ಧಿಗೊಳಿಸಲಿದೆ ; ಹೊಂಬುಜಶ್ರೀ

ರಿಪ್ಪನ್‌ಪೇಟೆ : ಪರಸ್ಪರ ವಾತ್ಸಲ್ಯ ಮಯ ಜೀವನ ನಿರ್ವಹಣೆಯ ಮೂಲಕ ವಿಶ್ವಮೈತ್ರಿ ಸಹೋದರತ್ವ ವರ್ಧಿಸಲಿ, ಆ ನಿಟ್ಟಿನಲ್ಲಿ ಅಹಿಂಸಾ ಭಾವವು ಮಾನವೀಯ ಮೌಲ್ಯಗಳನ್ನು ಉದ್ದೀಪನ ಬೇಕು ಎಂದು ಹೊಂಬುಜ ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಸದಾಶಯ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Instagram Group Join Now

ಅವರು ಅಮೇರಿಕಾದ ಚಿಕಾಗೋ ನಗರದಲ್ಲಿ ಜುಲೈ 03 ರಿಂದ 06ರವರೆಗೆ ಆಯೋಜಿಸಿದ್ದ ‘ವಿಶ್ವ ಜೈನಧರ್ಮ ಸಮ್ಮೇಳನ’ದಲ್ಲಿ ಭಾಗವಹಿಸಿ ಜೈನ ಧರ್ಮದ ಸಂದೇಶ ಸಾರಿದರು.

ವಿಶ್ವ ಶಾಂತಿಯನ್ನು ಬಯಸುವ ಜೈನ ಧರ್ಮದ ಉಪದೇಶಗಳು ಸರ್ವಕಾಲಕ್ಕೂ ಪ್ರಸ್ತುತ ಸೇವಾ ಮನೋಧ ರ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನವ ಸಮಾಜದಲ್ಲಿ ಸುಖ ಸಂತಸ ಉಂಟಾಗುವುದು. ದೇಶ ದೇಶಗಳು ಅನ್ಯೋನ್ಯತೆಯಿಂದಿರಬೇಕಲ್ಲದೇ, ವೈರತ್ವ ಬೆಳೆಸಬಾರದು ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಹಿಂದಿನಿಂದಲೂ ಹೊಂಬುಜ ಮಠದ ಪೂರ್ವ ಭಟ್ಟಾರಕರಾಗಿದ್ದ ಕೀರ್ತಿಶೇಷ ಸ್ವಸ್ತಿಶ್ರೀ ಹೇಮರತ್ನ ಸಾಗರ, ದೇವೇಂದ್ರಕೀರ್ತಿ ಭಟ್ಟಾರಕರು ಅಮೇರಿಕಾ ದೇಶದಲ್ಲಿ ಅನೇಕ ಪ್ರವಚನಗಳನ್ನು ನೀಡಿ, ಜೈನಧರ್ಮ ಪ್ರಸಾರ, ಪ್ರಭಾವನೆ ಮಾಡಿರುವುದನ್ನು ಸ್ಮರಿಸಿದರು.


ಈ ಸಂದರ್ಭದಲ್ಲಿ ಗುರು ಆಚಾರ್ಯ ಡಾ. ಲೋಕೇಶ್ ಮುನಿ, ಧರ್ಮಸ್ಥಳದ ಸುರೇಂದ್ರ ಕುಮಾರ್ ಅನಿತಾ ಸುರೇಂದ್ರ ಕುಮಾರ್‌ ಇದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!