Ripponpete

ಯೋಗದಿಂದ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯ : ಡಾ. ನಟರಾಜ್

ರಿಪ್ಪನ್‌ಪೇಟೆ : ಯೋಗದಿಂದ ವೈಯಕ್ತಿಕ ಅರೋಗ್ಯ ಜೊತೆಗೆ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಯೋಗ ಗುರು ಡಾ. ನಟರಾಜ್ ಹೇಳಿದರು.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆಯ ಸಾಗರ ರಸ್ತೆಯಲ್ಲಿರುವ ಒಕ್ಕಲಿಗರ ಸಭಾಭವನದಲ್ಲಿ ಮಹಾಶಕ್ತಿಕೇಂದ್ರವರು ಆಯೋಜಿಸಲಾದ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಆರೋಗ್ಯಕರ ವೃದ್ದಾಪ್ಯಕ್ಕಾಗಿ ಯೋಗ ಎಂಬುದು ಸತ್ಯಂತ ಆರ್ಥಪೂರ್ಣವಾಗಿದೆ. ಯೌವ್ವನ ಹಾಗೂ ಮಧ್ಯ ವಯಸ್ಸಿನಲ್ಲಿ ಇರುವಾಗ ನಾವು ದೈಹಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದಿಲ್ಲ‌. ಆದರೆ ವಯಸ್ಸಾದ ನಂತರ ಎದುರಾಗುವ ಹತ್ತು ಹಲವು ಆರೋಗ್ಯ ಸಮಸ್ಯೆಗಳಿಂದಾಗಿ ನೆಮ್ಮದಿ ಕಳೆದುಕೊಳ್ಳುತ್ತೇವೆ. ವೃದ್ದಾಪ್ಯದಲ್ಲಿ ಬರುವ ರೋಗಗಳಿಗಾಗಿ ಇಡೀ ಜೀವನದ ಗಳಿಕೆಯನ್ನು ಆಸ್ಪತ್ರೆಗಳಿಗೆ ವ್ಯಯಿಸುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಇದರ ಬದಲು ಆರಂಭದಲ್ಲಿ ಪ್ರತಿನಿತ್ಯ ಯೋಗ ಹಾಗೂ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವಂತಾಗಬೇಕು. ಯೋಗ ದೇಹ ಮನಸ್ಸು ಮತ್ತು ಆತ್ಮದ ನಡುವೆ ಸಮತೋಲನ ಸಾಧಿಸುವ ಪ್ರಾಚೀನ ಭಾರತೀಯ ಜೀವನ ಪದ್ದತಿಯಾಗಿದೆ ಎಂದರು.

ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುಂದರೇಶ್, ಪ್ರಧಾನ ಕಾರ್ಯದರ್ಶಿ ಜಿ.ಡಿ.ಮಲ್ಲಿಕಾರ್ಜುನ, ಜಿಲ್ಲಾ ಸಮಿತಿಯ ಸದಸ್ಯ ಎಂ.ಸುರೇಶ್‌ಸಿಂಗ್, ನಾಗರತ್ನ ದೇವರಾಜ್, ಉಮಾಸುರೇಶ್, ಸುಧೀಂದ್ರ ಪೂಜಾರಿ, ಸುಧೀರ್ ಪಿ., ಶೋಭಾ ವಿಶ್ವನಾಥಶೆಟ್ಟಿ, ಶುಭ ಶಶಿಧರ ಪೈ, ರಾಮಚಂದ್ರ, ಕೆ.ಬಿ.ಹೂವಪ್ಪ, ಅನಂತಮೂರ್ತಿ ಜವಳಿ, ಬ್ಯಾಂಕ್ ರತ್ನಾಕರ್, ದೇವೇಂದ್ರಪ್ಪಗೌಡ ನೆವಟೂರು, ಪ್ರಕಾಶ್ ಆಟೋ, ಬಾಲಚಂದ್ರರಾವ್, ವೈ.ಜೆ.ಕೃಷ್ಣ, ಸುಹಾಸ್, ಡಿ.ಈ.ರವಿಭೂಷಣ, ಇನ್ನಿತರರು ಪಾಲ್ಗೊಂಡಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!