ತೀರ್ಥಹಳ್ಳಿ ; ಸಾಲಬಾಧೆಯಿಂದ ಮನನೊಂದು ಯುವ ರೈತನೋರ್ವ ವಾರಾಹಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಮರ ಬಳಿ ನಡೆದಿದೆ.
ಕೈಮರ ಸಮೀಪದ ಹಾಗಲಮನೆ ವಾಸಿ ಕೌಶಿಕ್ (30) ಆತ್ಮಹತ್ಯಗೆ ಶರಣಾದ ದುರ್ದೈವಿ. ಅವಿವಾಹಿತನಾಗಿದ್ದ ಕೌಶಿಕ್ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದ. ಮಾಗರವಲ್ಲಿ ಸೊಸೈಟಿ, ಮೈಕ್ರೋ ಫೈನಾನ್ಸ್ ಸೇರಿದಂತೆ ಹಲವು ಕಡೆ ಬಡ್ಡಿಗೆ ಸಾಲ ಪಡೆದಿದ್ದ ಈ ಯುವಕ ಸಾಲದ ಕಿರುಕುಳಕ್ಕೆ ಬೇಸತ್ತು ಹಾಗೂ ಈ ಬಾರಿ ಅಡಿಕೆಗೆ ಬಂದಿರುವ ಎಲೆಚುಕ್ಕಿ ರೋಗದಿಂದ ಕಂಗೆಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.