ಮನೆ ಮೇಲೆ ಮರ ಬಿದ್ದ ಚಾವಣಿಗೆ ಹಾನಿ | ಘಟನಾ ಸ್ಥಳಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ, ವೈಯಕ್ತಿಕ ಧನ ಸಹಾಯ

Written by malnadtimes.com

Updated on:

HOSANAGARA | ಮುಂಗಾರು ಪೂರ್ವ ಮಳೆ (Monsoon Rain) ಹಾಗೂ ಗಾಳಿಯ ರಭಸಕ್ಕೆ ಮನೆ ಮೇಲೆ ಮರ (Tree) ಬಿದ್ದು ಹಾನಿಯಾದ (Rain Damage) ಘಟನೆ ತಾಲೂಕಿನ ನೀರೇರಿ (Neereri) ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ನಿವಾಸಿ ಶಂಕರಪ್ಪ ಎಂಬುವವರ ಮನೆಯ ಸಮೀಪದಲ್ಲಿದ್ದ ಬೃಹದಾಕಾರದ ಕಾಡುಜಾತಿ ಮರ, ಗಾಳಿ ಮಳೆ ಬಂದ ವೇಳೆ ಬುಡಸಮೇತ ಮನೆ ಮೇಲೆ ಉರುಳಿ ಬಿದ್ದಿದೆ. ಬಿದ್ದ ರಭಸಕ್ಕೆ ಮನೆಯ ಒಂದು ಭಾಗದ ಚಾವಣಿಗೆ ಹಾನಿಯಾಗಿದೆ. ಸಮೀಪದಲ್ಲಿಯೇ ವಿದ್ಯುತ್ ತಂತಿ ಹಾದು ಹೋಗಿದ್ದು, ಕೂದಲೆಳೆಯ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದೆ. ಅಲ್ಲದೇ, ಕುಟುಂಬದ ಸದಸ್ಯರೆಲ್ಲವೂ ಜಮೀನು ಕೆಲಸಕ್ಕೆ ತೆರಳಿದ ವೇಳೆ ಘಟನೆ ನಡೆದ ಕಾರಣಕ್ಕೆ ಪ್ರಾಣಾಪಾಯವಾಗಿಲ್ಲ.

ಹೊಸನಗರ ತಾಲೂಕಿನ ಮಾರುತಿಪುರ ಸಮೀಪದ ನೀರೇರಿಯಲ್ಲಿ ಮರ ಬಿದ್ದು ವಾಸದ ಮನೆಗೆ ಹಾನಿಯಾದ ಸ್ಥಳಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿದರು.

ಶಾಸಕ ಬೇಳೂರು ಭೇಟಿ:
ವಿಷಯ ತಿಳಿದು ಘಟನಾ ಸ್ಥಳಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿ ಕುಟುಂಬದ ಸದಸ್ಯರ ಜೊತೆ ಸಮಾಧಾನದ ಮಾತುಗಳನ್ನಾಡಿದರು. ಸರ್ಕಾರದಿಂದ ದೊರೆಯುವ ಪರಿಹಾರ ಆದಷ್ಟು ಬೇಗನೆ ದೊರೆಯಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವಹಿಸುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು. ವಸತಿ ಯೋಜನೆಯಡಿ ಲಭ್ಯವಾದಲ್ಲಿ ಮನೆ ಅನುದಾನ ಒದಗಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ತಿಳಿಸಿದ ಅವರು ನೊಂದ ಕುಟುಂಬಕ್ಕೆ ವೈಯಕ್ತಿಕ ಧನ ಸಹಾಯ ಮಾಡಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಗ್ರಾಪಂ ಅಧ್ಯಕ್ಷೆ ದೀಪಿಕಾ ಕೃಷ್ಣ, ಸದಸ್ಯ ಎಚ್.ಬಿ.ಚಿದಂಬರ, ಚಂದ್ರಪ್ಪ, ಪ್ರಕಾಶ, ಪ್ರಮುಖರಾದ ಸಿದ್ದವೀರಪ್ಪಗೌಡ, ಎಸ್.ಕೆ.ರಾಜು, ಸಣ್ಣಕ್ಕಿ ಮಂಜು, ಮತ್ತಿತರರು ಇದ್ದರು.

Leave a Comment