Udupi – Chikkamagaluru Loksabha Constituency | ಬೆಳಗ್ಗೆ 9 ಗಂಟೆ ಹೊತ್ತಿಗೆ ಶೇ.12.89 ಮತದಾನ

0 44

ಚಿಕ್ಕಮಗಳೂರು : ಲೋಕಸಭಾ ಚುನಾವಣೆಯ ಕಾವು ಜೋರಾಗಿದ್ದು ರಾಜ್ಯದಲ್ಲಿ ಇಂದು ನಡೆದ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು ಅದರಂತೆ ಮತದಾರರು ಬೆಳಿಗ್ಗೆಯಿಂದಲೇ ಉತ್ಸಾಹದಿಂದ ಮತಗಟ್ಟೆಗೆ ಬಂದು ಮತದಾನ ಮಾಡುತ್ತಿದ್ದಾರೆ. ಅದರಂತೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆಯ ಹೊತ್ತಿಗೆ 12.89% ಮತದಾನವಾಗಿದೆ ಎಂದು ಹೇಳಲಾಗಿದೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೆತ್ರದ ಮತದಾನ ಪ್ರಕ್ರಿಯೆ ಕಾಫಿನಾಡಿನಲ್ಲಿ ಬಿರುಸು ಪಡೆದುಕೊಂಡಿದ್ದು, ಬೆಳಿಗೆಯಿಂದಲೇ ಜನರು ಉತ್ಸುಕರಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಶೃಂಗೇರಿ ವಿಧಾನಸಭಾ‌ ಕ್ಷೇತ್ರದಲ್ಲಿ ಶೇ.13.7, ಮೂಡಿಗೆರೆ ಶೇ.11.35, ಚಿಕ್ಕಮಗಳೂರು ಶೇ.11.02, ತರೀಕೆರೆ ಶೇ.9.69 ಹಾಗೂ ಹಾಸನ ಲೋಕಸಭಾ ವ್ಯಾಪ್ತಿಯ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.8.51ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದರು.

Leave A Reply

Your email address will not be published.

error: Content is protected !!