HOSANAGARA | ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಭಾರೀ ಮಳೆ, ಹೊಸನಗರ ತಾಲೂಕಿನ ಮೂಲೆಗದ್ದೆ ಮಠದ ಬಳಿ ರಸ್ತೆಗೆ ಬೃಹತ್ ಮರ ಅಡ್ಡಲಾಗಿ ಬಿದ್ದ ಪರಿಣಾಮ ಸಾಗರ, ಮಾಸ್ತಿಕಟ್ಟೆ, ಕುಂದಾಪುರ ರಸ್ತೆ ಸಂಚಾರ ಕೆಲಕಾಲ ಸ್ಥಗಿತಗೊಂಡಿತು.

ರಾಷ್ಟ್ರೀಯ ಹೆದ್ದಾರಿ 766ಸಿಯಲ್ಲಿ ಈ ಘಟನೆ ನಡೆದಿದ್ದು ಮಂಗಳೂರು, ಉಡುಪಿ, ಕುಂದಾಪುರ ತೆರಳಲು ವಾಹನ ಸವಾರರು ಪರದಾಡಬೇಕಾಯಿತು.

ಗಂಟೆಗಟ್ಟಲೇ ವಾಹನಗಳು ನಿಂತಲೇ ನಿಂತಿದ್ದವು, ಅರಣ್ಯಾಧಿಕಾರಿಗಳು ಮರ ತೆರವು ಕಾರ್ಯಾಚರಣೆ ನಡೆಸಿದರು.
ಬೆಳಗಿನಜಾವ ನಾಲ್ಕು ಗಂಟೆಯಿಂದ ವಾಹನಗಳು ನಿಂತಲೇ ನಿಂತಿದ್ದವು, ರಸ್ತೆ ಸಂಚಾರ ಸ್ಥಗಿತ ಹಿನ್ನಲೆಯಲ್ಲಿ ಬದಲಿ ರಸ್ತೆ ಹುಡುಕಿ ವಾಹನಗಳು ಚಲಾಯಿಲಿದ ಘಟನೆ ನಡೆದಿದೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

