ಹೊಸನಗರ : ಶ್ರೀ ಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಮಾರ್ಚ್ ಅಂತ್ಯಕ್ಕೆ ₹ 3.87 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿ ಸುಧಾ ಹೇಳಿದರು.
ಸಾಗರದ ಪ್ರತಿಷ್ಟಿತ ಶ್ರೀ ಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ 111ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ವರದಹಳ್ಳಿ ರಸ್ತೆಯ ಈಡಿಗರ ಸಮುದಾಯ ಭವನದಲ್ಲಿ ನಡೆದಿದ್ದು ಈ ಸಭೆಯಲ್ಲಿ ಅವರು ತಿಳಿಸಿದರು.
ಮಾರ್ಚ್ ಅಂತ್ಯದ ವೇಳೆಗೆ ಬ್ಯಾಂಕ್‌ನ ಒಟ್ಟು ಸದಸ್ಯರ ಸಂಖ್ಯೆ 9351 ಇದ್ದು, ಷೇರು ಬಂಡವಾಳವು ₹ 1548.98 ಲಕ್ಷಗಳಿದ್ದು, ಸಹ ಸದಸ್ಯರ ಷೇರು ಬಂಡವಾಳವು ₹ 112.33 ಲಕ್ಷ ಇರುತ್ತದೆ. ಒಟ್ಟು ₹ 1661.32 ಲಕ್ಷದಷ್ಟು ಷೇರು ಬಂಡವಾಳ ಇರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಪ್ರತಿ ವರ್ಷದಂತೆ ಬ್ಯಾಂಕ್ ಈ ವರ್ಷವೂ ಕೂಡ ಆಡಿಟ್ ವರದಿಯಲ್ಲಿ ‘ಎ’ ಶ್ರೇಣಿಯಲ್ಲಿದೆ ಎಂದು ತಿಳಿಸಿದ ಅವರು, 2026ರ ಮಾರ್ಚ್ ಅಂತ್ಯಕ್ಕೆ ₹ 28629.09 ಲಕ್ಷ ಠೇವಣಿಗಳನ್ನು ಪಡೆದಿದ್ದು, ₹ 18675.31 ಲಕ್ಷ ಸಾಲ ವಿವಿಧ ಸಾಲಗಳನ್ನು ನೀಡಲಾಗಿದೆ. ಷೇರು ಲಾಭಾಂಶ ಶೇ. 11% ನೀಡಲು ಸಭೆ ಅನುಮೋದನೆ ನೀಡಿದೆ ಎಂದರು.
ಕಾರ್ಯಕ್ರಮವನ್ನು ಬ್ಯಾಂಕ್‌ನ ಅಧ್ಯಕ್ಷೆ ಸರಸ್ವತಿ ನಾಗರಾಜ್ ಉದ್ಘಾಟಿಸಿದರು.
ಪ್ರತಿಭಾ ಪುರಸ್ಕಾರ :
ಎಸ್.ಎಸ್.ಎಲ್.ಸಿ., ದ್ವಿತೀಯ ಪಿ.ಯು.ಸಿ., ಇಂಜಿನಿಯರಿಂಗ್‌ನಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿಭಾ ಪುರಸ್ಕಾರವನ್ನು ಸದಸ್ಯರ 7 ಮಕ್ಕಳಿಗೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಷೇರುದಾರರು ಉಪಸ್ಥಿತರಿದ್ದು, ಬ್ಯಾಂಕ್‌ನ ಅಭಿವೃದ್ಧಿಯನ್ನು, ಸಿಗುವ ತ್ವರಿತ ಸೇವೆಯನ್ನು ಶ್ಲಾಘಿಸಿದರು.
ಬ್ಯಾಂಕ್‌ನ ಉಪಾಧ್ಯಕ್ಷ ವೈ. ಮೋಹನ್, ನಿರ್ದೇಶಕರಾದ ಎಸ್. ಗಜಾನನ ಜೋಯಿಸ್, ದಳವಾಯಿ ಜಿ ಬಸಲಿಂಗಪ್ಪ, ಬ್ಯಾಂಕ್‌ನ ನಿರ್ದೇಶಕರಾದ ಕೃಷ್ಣಮೂರ್ತಿ ಭಂಡಾರಿ, ವಿ. ಗುರು, ವಿನಾಯಕ ರಂಗಧೋಳ್, ನಾರಾಯಣ, ಎಸ್.ಎಂ. ರಮೇಶ್, ಕೆ. ಶ್ರೀನಿವಾಸ್, ಮಾಸ್ಟರ್ ಶಂಕರ್, ಮಧು ಮಾಲತಿ, ಹೆರಾಲ್ಡ್ ರೋಡ್ರಿಗಸ್, ಎಸ್.ಎಸ್. ಶ್ರೀರಾಮ್, ಬ್ಯಾಂಕ್‌ನ ಎ.ಸಿ.ಇ.ಓ. ಎಲ್. ತೇಜಸ್ವಿ, ಶಿವಮೊಗ್ಗ ಶಾಖಾ ವ್ಯವಸ್ಥಾಪಕಿ ಚೇತನ ಕಾಮತ್, ಹೊಸನಗರ ಶಾಖಾ ವ್ಯವಸ್ಥಾಪಕ ರಾಘವೇಂದ್ರ ಎಂ.ಜಿ. ಸಾಗರ ಶಾಖಾ ವ್ಯವಸ್ಥಾಪಕ ಶಶಿಕುಮಾರ್ ಕೆ.ಎಸ್. ಹಾಗೂ ಸಿಬ್ಬಂದಿ ವರ್ಗದವರು, ಪಿಗ್ಮಿ ಸಂಗ್ರಹಕಾರರು ಹಾಗೂ ಇತರರು ಹಾಜರಿದ್ದರು.
ಸಿಇಓ ಕೆ.ವಿ. ಸುಧಾ ಪ್ರಾರ್ಥಿಸಿದರು. ಮಾಡಿದರು. ನಿರ್ದೇಶಕ ಎಸ್. ಗಜಾನನ ಜೋಯ್ಸ್ ಸ್ವಾಗತಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯವಾಯಿತು.

