CHIKKAMAGALURU ; ಡಿ.12 ರಿಂದ ಡಿ. 14 ರವರೆಗೆ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಮತ್ತು ಜಿಲ್ಲೆಯಾದ್ಯಂತ ಭಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂಪರ ಸಂಘಟನೆಗಳ ವತಿಯಿಂದ ದತ್ತ ಜಯಂತಿ ಕಾರ್ಯಕ್ರಮದ ಆಚರಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಠಿಯಿಂದ ಡಿಸೆಂಬರ್ 13 ರ ಬೆಳಿಗ್ಗೆ 6.00 ಗಂಟೆಯಿಂದ ಡಿಸೆಂಬರ್ 14 ರ ರಾತ್ರಿ 11.00 ಗಂಟೆವರೆಗೆ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಕರ್ನಾಟಕ ಅಬಕಾರಿ ಅಧಿನಿಯಮ 1965 ವಿಧಿ 21ರಂತೆ ಎಲ್ಲಾ ನಮೂನೆ ಮದ್ಯದಂಗಡಿಗಳನ್ನು (ಸಿಎಲ್-2, 4, 6ಎ, 7, 9, 11, 14 ಇತ್ಯಾದಿ ಎಲ್ಲಾ ತರಹದ) (ಕೆ ಎಸ್ ಬಿ ಸಿ ಎಲ್ ಹೊರತು ಪಡಿಸಿ) ಮುಚ್ಚುವಂತೆಯೂ ಹಾಗೂ ಮದ್ಯ, ಬೀಯರ್, ಮದ್ಯಸಾರ ಇತ್ಯಾದಿ ಅಬಕಾರಿ ಪದಾರ್ಥಗಳ ಸಾಗಾಣಿಕೆ, ಶೇಖರಣೆ, ತಯಾರಿಕೆ, ಸರಬರಾಜು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಆದೇಶ ಹೊರಡಿಸಿದ್ದಾರೆ.
Related Post