CHIKKAMAGALURU / SHIVAMOGGA | ಮಲೆನಾಡಿನಾದ್ಯಂತ ಕಳೆದೊಂದು ವಾರದಿಂದ ಸುರಿಯುತ್ತಿದ್ದ ಮಳೆ ಅಬ್ಬರ ಕೊಂಚ ತಗ್ಗಿದ್ದು ಮಳೆಗೆ ಮುಂಜಾಗ್ರತಾ ಕ್ರಮವಾಗಿ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಮಳೆ ತಗ್ಗಿದ್ದರಿಂದ ಇಂದಿನಿಂದ ಶಾಲೆಗಳು ಪುನರಾರಂಭಗೊಂಡಿವೆ. ತಗ್ಗು ಪ್ರದೇಶಗಳಲ್ಲಿ ನೆರೆ ಹಾವಳಿಯಿಂದ ಜನ ತತ್ತರಿಸಿ ಹೋಗಿದ್ದರು. ಮಳೆ ಕಡಿಮೆಯಾಗಿದ್ದರಿಂದ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಕೃಷಿ ಚಟುವಟಿಕೆಗಳು ಸಹ ಗರಿಗೆದರಿದ್ದು ರೈತರು ಜಮೀನುಗಳತ್ತ ಮುಖ ಮಾಡಿದ್ದಾರೆ. ಭತ್ತದ ನಾಟಿ ಕಾರ್ಯ ಎಲ್ಲೆಡೆ ಬಿರುಸುಗೊಂಡಿದೆ.
ಇನ್ನೂ ಸೋಮವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ದಾಖಲಾದ ಮಳೆ ವಿವರ ಹೀಗಿದೆ.
ಚಿಕ್ಕಮಗಳೂರು ಜಿಲ್ಲೆ :
- ಸೀತೂರು (ಎನ್.ಆರ್.ಪುರ) : 92 mm
- ಕೊಪ್ಪ ಗ್ರಾಮೀಣ (ಕೊಪ್ಪ) : 73 mm
- ಬಣಕಲ್ (ಮೂಡಿಗೆರೆ) : 70.5 mm
- ಹರಿಹರಪುರ (ಕೊಪ್ಪ) : 64 mm
- ಬಿಂತ್ರವಳ್ಳಿ (ಕೊಪ್ಪ) : 63.5 mm
- ಹೊರನಾಡು (ಕಳಸ) : 59 mm
- ಕಿರುಗುಂದ (ಮೂಡಿಗೆರೆ) : 53 mm
- ಕೂತಗೋಡು (ಶೃಂಗೇರಿ) : 50 mm
- ಬೆಟ್ಟಗೆರೆ (ಮೂಡಿಗೆರೆ) : 49.5 mm
- ಹೇರೂರು (ಕೊಪ್ಪ) : 47 mm
ಶಿವಮೊಗ್ಗ ಜಿಲ್ಲೆ :
- ಮಾಸ್ತಿಕಟ್ಟೆ (ಹೊಸನಗರ) : 104 mm
- ಹುಲಿಕಲ್ (ಹೊಸನಗರ) : 98.4 mm
- ಕಲ್ಮನೆ (ಸಾಗರ) : 91.5 mm
- ಚಕ್ರಾನಗರ (ಹೊಸನಗರ) : 91 mm
- ಕಂಡಿಕಾ (ಸಾಗರ) : 84 mm
- ಕಾರ್ಗಲ್ (ಸಾಗರ) : 82.4 mm
- ಯಡೂರು (ಹೊಸನಗರ) : 78 mm
- ಹೆಚ್ಚೆ (ಸೊರಬ) : 77 mm
- ಹುಂಚ (ಹೊಸನಗರ) : 76.4 mm
- ಸೊನಲೆ (ಹೊಸನಗರ) : 73 mm
- ಹೊಸಬಾಳೆ (ಸೊರಬ) : 69.5 mm
- ಮಾಣಿ (ಹೊಸನಗರ) : 68 mm
- ಭೀಮನಕೋಣೆ (ಸಾಗರ) : 67 mm
- ಬಿದನೂರುನಗರ (ಹೊಸನಗರ) : 62 mm
- ಮುಟುಗುಪ್ಪೆ (ಸೊರಬ) : 61 mm
- ಸುಳಗೋಡು (ಹೊಸನಗರ) : 58 mm
- ಬೆನ್ನೂರು (ಸೊರಬ) : 56.5 mm
- ಮೇಲಿನಬೆಸಿಗೆ (ಹೊಸನಗರ) : 52.5 mm
- ರಿಪ್ಪನ್‌ಪೇಟೆ (ಹೊಸನಗರ) : 28.4 mm
- ಹೊಸನಗರ (ಹೊಸನಗರ) : 18 mm