ಹೊಸನಗರ ; ಇಲ್ಲಿನ ಹಳೇ ಸಾಗರ ರಸ್ತೆಯಲ್ಲಿರುವ ಶ್ರೀ ಗುರುರಾಯರ ಬೃಂದಾವನದಲ್ಲಿ 354ನೇ ಆರಾಧನಾ ಮಹೋತ್ಸವವನ್ನು ಸೋಮವಾರ ಏರ್ಪಡಿಸಲಾಗಿದ್ದು ಭಕ್ತ ಸಾಗರವೇ ಹರಿದು ಬಂದಿತು.
ಭಾನುವಾರ ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರದಲ್ಲಿ ದೇವಸ್ಥಾನ ಸುಂದರವಾಗಿ ಕಾಣುವುದರ ಜೊತೆಗೆ ರಸ್ತೆಯ ಇಕ್ಕೆಲಗಳಲ್ಲಿ ತೋರಾಣದಿಂದ ಸಿಂಗರಿಸಿ ಹೂವುಗಳನ್ನು ಹಾಕಿ ಸುಂದರವಾಗಿ ಕಾಣುವಂತೆ ದೇವಸ್ಥಾನವನ್ನು ಮಾಡಲಾಗಿತ್ತು.
ಸೋಮವಾರ ಬೆಳಿಗ್ಗೆ ಎಂದಿನಂತೆ 6ಗಂಟೆಗೆ ಅಷ್ಟೋತ್ತರ, 11ಗಂಟೆಗೆ ಪಂಚಾಮೃತಾಭಿಷೇಕ, ಅಲಂಕಾರ ಪೂಜೆ ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ ನಡೆದ ನಂತರ ಗಾಯತ್ರಿ ಮಂದಿರದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಇಷ್ಟು ವರ್ಷಗಳಿಗಿಂತ ಈ ವರ್ಷ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗಿದ್ದು ಅದು ಅಲ್ಲದೇ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಳೆರಾಯನ ಅಬ್ಬರ ಹೆಚ್ಚಾಗಿದ್ದರೂ ಮಳೆಗೆ ಭಕ್ತಾಧಿಗಳು ಹೆದರದೆ ದೇವರ ಪೂಜೆ ಹಾಗೂ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ಗುರುರಾಯರ ಆರಾಧನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಅಭಿನಂದನೆ:
ಹೊಸನಗರದ ಹಳೇ ಸಾಗರದ ದಾರಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನದಲ್ಲಿ ನಡೆದ ರಾಯರ 354ನೇ ಆರಾಧನಾ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು ಸುರಿವ ಮಳೆಯಲ್ಲಿಯೂ ಭಕ್ತಾಧಿಗಳು ಆಗಮಿಸಿ ರಾಯರ ಪ್ರಸಾದ ಸ್ವೀಕರಿಸಿದ ಭಕ್ತ ವೃಂದಕ್ಕೂ ಯಶಸ್ವಿಯಾಗಲು ಸಹಕರಿಸಿದ ಆಡಳಿತ ಮಂಡಳಿಯ ಎಲ್ಲ ನಿರ್ದೆಶಕ ಸದಸ್ಯರಿಗೂ ರಾಘವೇಂದ್ರ ಸ್ವಾಮಿ ಬೃಂದಾವನ ಸಮಿತಿಯ ಅಧ್ಯಕ್ಷ ವಿಜೇಂದ್ರ ಶೇಟ್ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೃಂದಾವನ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಕಂಚುಗಾರ್, ಅಧ್ಯಕ್ಷ ವಿಜೇಂದ್ರ ಶೇಟ್, ಪ್ರಧಾನ ಆರ್ಚಕ ಟಿ.ಆರ್. ಪ್ರಸನ್ನಭಟ್, ಉಪಾಧ್ಯಕ್ಷ ಚಂದ್ರಶೇಖರ ಶೇಟ್, ಕಾರ್ಯದರ್ಶಿ ರಾಧಕೃಷ್ಣ, ಸಹಕಾರ್ಯದರ್ಶಿ ರಂಗನಾಥ್ ಎನ್, ಖಜಾಂಚಿ ವಾಸುದೇವ ಪಿ, ನಿರ್ದೇಶಕರಾದ ಜಿ. ವಾದಿರಾಜ್ ಭಟ್, ಸದಾಶಿವ ಶ್ರೇಷ್ಠಿ, ರವಿ ಶೇಟ್, ಹರೀಶ್ ಕೆ.ಆರ್, ಸುದೇಶ್ ಕಾಮತ್, ಗಣೇಶ್ ಶೇಟ್, ಧನಂಜಯ ಮಂಡಾನಿ, ಹೆಚ್.ಎಂ ನಿತ್ಯಾನಂದ ನಾಯ್ಕ್, ಶ್ರೀಧರ ಮಂಡಾನಿ, ಮುರುಳಿದರ ಹತ್ವಾಲ್, ಗೌತಮ್ ಕುಮಾರ ಸ್ವಾಮಿ ಜಿ.ಟಿ ಈಶ್ವರಪ್ಪ, ಮೀಲ್ ಈಶ್ವರ ಗೌಡ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.