ರಿಪ್ಪನ್‌ಪೇಟೆ ; ಗರ್ತಿಕೆರೆ, ಬೈರಾಪುರ, ಹರತಾಳು ರಾಘವೇಂದ್ರಸ್ವಾಮಿ ಮಠದಲ್ಲಿ ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಶ್ರದ್ದಾಭಕ್ತಿಯಿಂದ ಜರುಗಿತು.
ಇಂದು ಬೆಳಗ್ಗೆ 9 ಗಂಟೆ ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಅಂಗವಾಗಿ ಪುಣ್ಯಾರಾಧನೆ, ವಿಶೇಷ ಪೂಜೆ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ ಹೋಮ ಇನ್ನಿತರ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿತು. ನಂತರ ಬಂದ ಭಕ್ತ ಸಮೂಹಕ್ಕೆ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು.

170ನೇ ವರ್ಷದ ಗುರುಜಯಂತೋತ್ಸವ ಮತ್ತು ಓಣಂ ಹಬ್ಬದ ಕಾರ್ಯಕ್ರಮ
ರಿಪ್ಪನ್‌ಪೇಟೆ : ಬ್ರಹ್ಮಶ್ರೀ ನಾರಾಯಣಗುರುಗಳು ಜಾತೀಯತೆ, ಅಸ್ಪ್ರಶ್ಯತೆ, ಶೋಷಣೆ ಇನ್ನಿತರ ಸಾಮಾಜಿಕ ಪಿಡುಗುಗಳ ವಿರುದ್ದ ಹೋರಾಡಿದ ಸಾತ್ವಿಕ ಸಂತರು ಅವರ ಆದರ್ಶ ತತ್ವಗಳು ಇಂದಿನ ಮನುಕುಲಕ್ಕೆ ಮಾರ್ಗದರ್ಶಿಯಾಗಲಿ ಎಂದು ನಿಟ್ಟೂರು ಶ್ರೀನಾರಾಯಣಗುರು ಮಹಾಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀನಾರಾಯಣ ಮಿಷನ್ ಟ್ರಸ್ಟ್ ರಿಪ್ಪನ್‌ಪೇಟೆ ಶಾಖೆಯವರು ರಿಪ್ಪನ್‌ಪೇಟೆಯ ಕರ್ನಾಟಕ ಪ್ರಾಂತೀಯ ಹಿಂದು ರಾಷ್ಟ್ರಸೇನಾ ಸಮಿತಿಯ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಶ್ರೀನಾರಾಯಣಗುರುಗಳ 170ನೇ ಗುರು ಜಯಂತೋತ್ಸವ ಮತ್ತು ಓಣಂ ಹಬ್ಬದ ಆಯೋಜಿಸಲಾದ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿ ಸರ್ವ ಪ್ರಾಣಿಗಳಲ್ಲೂ ದಯೆ ತೋರಬೇಕು ಎಂಬ ಶ್ರೇಷ್ಟ ಸಿದ್ದಾಂತವನ್ನು ಬೋಧಿಸಿ ಅದರಂತೆ ಬದುಕಿದವರು ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ಹೇಳಿದರು.
ಶ್ರೀನಾರಾಯಣ ಮಿಷನ್ ಟ್ರಸ್ಟ್‌ನ ಅಧ್ಯಕ್ಷ ಸೋಮಶೇಖರ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿ.ಪಂ.ಮಾಜಿ ಸದಸ್ಯ ಬಂಡಿ ರಾಮಚಂದ್ರ, ಎಸ್.ಎನ್.ಎಂ.ಟಿ ಜಿಲ್ಲಾಧ್ಯಕ್ಷ ದಿನೇಶ ಕೆ, ಎಸ್.ಎನ್.ಎಂ.ಟಿ ಕಾರ್ಯದರ್ಶಿ ಕೆ. ಅನಿಲ್‌ಕುಮಾರ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಎನ್.ಸತೀಶ್, ಕ.ಪ್ರ.ಹಿಂ.ರಾ.ಸೇ ಸಮಿತಿ ಅಧ್ಯಕ್ಷ ಸುಧೀಂದ್ರ ಪೂಜಾರಿ, ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎನ್.ಪಿ.ರಾಜು, ಎಸ್.ಎನ್.ಜಿ. ಅಧ್ಯಕ್ಷ ಸಂತೋಷ ಡಿ.ಪಿ, ಎಸ್.ಎನ್.ಎಂ.ಟಿ ರಿಪ್ಪನ್‌ಪೇಟೆ ಶಾಖೆಯ ಕಾರ್ಯದರ್ಶಿ ಚಂದ್ರಕುಮಾರ್, ಎಸ್.ಎನ್.ಎಂ.ಟಿ ಖಜಾಂಚಿ ಸತೀಶ್ ಟಿ ಭಾಗವಹಿಸಿದ್ದರು.

