ಶಿವಮೊಗ್ಗ ಕೇಂದ್ರ ಕಾರಾಗೃಹದೊಳಗೆ ನಿಷೇಧಿತ ವಸ್ತು ಎಸೆದ ಪ್ರಕರಣ : ಐವರ ಬಂಧನ

Written by Koushik G K

Published on:

ಶಿವಮೊಗ್ಗದ ಸೋಗಾನೆ ಪ್ರದೇಶದಲ್ಲಿರುವ ಕೇಂದ್ರ ಕಾರಾಗೃಹದೊಳಗೆ ಗಾಂಜಾ, ಮೊಬೈಲ್ ಫೋನ್, ಸಿಗರೇಟು ಹಾಗೂ ಲೈಟರ್ ಸೇರಿದಂತೆ ನಿಷೇಧಿತ ವಸ್ತುಗಳನ್ನು ಎಸೆದ ಪ್ರಕರಣವನ್ನು ತುಂಗಾನಗರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ದಿನಾಂಕ 01-02-2026ರಂದು ಬೆಳಗಿನ ಜಾವ, ಅಪರಿಚಿತರು ಕಪ್ಪು ಬಣ್ಣದ ಗಮ್ ಟೇಪಿನಿಂದ ಗಾಂಜಾ, ಮೊಬೈಲ್ ಫೋನ್, ಸಿಗರೇಟು ಹಾಗೂ ಲೈಟರ್ ಅನ್ನು ಪ್ಯಾಕ್ ಮಾಡಿ ಕಾರಾಗೃಹದ ಒಳಗೆ ಎಸೆದಿದ್ದರು. ಈ ಬಗ್ಗೆ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಪರಮೇಶ್ ಎಚ್.ಎ. ಅವರು ನೀಡಿದ ದೂರಿನ ಆಧಾರದಲ್ಲಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆಯ ಮಾಹಿತಿ ಪಡೆದ ಪೊಲೀಸರು, ಕಾರಾಗೃಹದೊಳಗೆ ಎಸೆದಿದ್ದ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡು ತೀವ್ರ ತನಿಖೆ ನಡೆಸಿದರು. ತನಿಖೆಯ ವೇಳೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎ.ಜಿ. ಕಾರಿಯಪ್ಪ ಹಾಗೂ ರಮೇಶ್ ಕುಮಾರ್, ಪೊಲೀಸ್ ಉಪಾಧೀಕ್ಷಕರಾದ ಬಾಬು ಅಂಜನಪ್ಪ ಅವರ ಮಾರ್ಗದರ್ಶನದಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಕೆ.ಟಿ. ಗುರುರಾಜ್, ಪಿಎಸ್ಐಗಳಾದ ಗಾದಿಲಿಂಗಪ್ಪ ಗೌಡರ್, ರಘುವೀರ, ಶ್ರೀಮತಿ ಮಂಜಮ್ಮ ಹಾಗೂ ಠಾಣಾ ಸಿಬ್ಬಂದಿಗಳ ನಿರಂತರ ಶ್ರಮದಿಂದ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರ ವಿವರಗಳು ಹೀಗಿವೆ:

  • ಮೊಹಮ್ಮದ್ ಖಲಂದರ್ @ ಕಲ್ಲು (23 ವರ್ಷ), ಸೂಳೆಬೈಲ್, ಶಿವಮೊಗ್ಗ
  • ಅಬ್ದುಲ್ ಮುನಾಫ್ @ ಮುನ್ನಾ (30 ವರ್ಷ), ಬೊಮ್ಮನಕಟ್ಟೆ, ಶಿವಮೊಗ್ಗ
  • ವಿಜಯ್ (19 ವರ್ಷ), ಕೋಟೆಗಂಗೂರು, ಶಿವಮೊಗ್ಗ
  • ಪರಶುರಾಮ್ (19 ವರ್ಷ), ಬೊಮ್ಮನಕಟ್ಟೆ, ಶಿವಮೊಗ್ಗ

ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಬೈಕ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ನಾಲ್ವರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಈ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

ಹಸಿವು ಮುಕ್ತ ದೇಶವನ್ನಾಗಿಸುವ ಮಹತ್ವಾಕಾಂಕ್ಷಿ ಮನ್ರೇಗಾ ಯೋಜನೆಗೆ ಕೇಂದ್ರ ಸರ್ಕಾರ ಕತ್ತರಿ ; ಬೇಳೂರು ಗೋಪಾಲಕೃಷ್ಣ

Leave a Comment