ಅಬ್ಬರ ಮುಗಿಸಿದ ‘ಪುಷ್ಯ’, ಲಿಂಗನಮಕ್ಕಿ ಜಲಾಶಯ ಭರ್ತಿಗೆ 5 ಅಡಿ ನೀರು ಬಾಕಿ !

Written by malnadtimes.com

Published on:

HOSANAGARA | ಅಬ್ಬರದಿಂದ ಸುರಿದು ಅನಾಹುತಗಳನ್ನು ಸೃಷ್ಟಿ ಮಾಡಿದ ಪುಷ್ಯ ಮಳೆ ಇಂದು ಕೊನೆಗೊಳ್ಳಲಿದ್ದು ನಾಳೆಯಿಂದ ಆಶ್ಲೇಷ ಮಳೆ ಪ್ರಾರಂಭವಾಗಲಿದೆ. ನಿನ್ನೆಯಿಂದ ಮಳೆ ಪ್ರಮಾಣ ತಗ್ಗಿದ್ದು ನೆರೆ ಭೀತಿ ಎದುರಿಸುತ್ತಿದ್ದ ಜನರು ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದ್ದಾರೆ. ಎಂದಿನಂತೆ ಶಾಲಾ, ಕಾಲೇಜುಗಳು ಸಹ ಪುನರಾರಂಭಗೊಂಡಿವೆ‌.

WhatsApp Group Join Now
Telegram Group Join Now
Instagram Group Join Now

ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಅತಿವೃಷ್ಠಿ ಸಂತ್ರಸ್ಥರ ಸ್ಥಿತಿ ಅಧೋಗತಿಗೆ ಬಂದಿದೆ ; ಶಾಸಕ ಆರಗ ಜ್ಞಾನೇಂದ್ರ

ಗುರುವಾರ ಬೆಳಿಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲೂಕಿನ ಹಲವೆಡೆ ದಾಖಲಾದ ಮಳೆ ವಿವರ ಹೀಗಿದೆ.

ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?

  • ಹುಲಿಕಲ್ : 171.2 mm
  • ಮಾಸ್ತಿಕಟ್ಟೆ : 160 mm
  • ಯಡೂರು : 123 mm
  • ಮಾಣಿ : 107 mm
  • ಚಕ್ರಾನಗರ : 75 mm
  • ಕಾರ್ಗಲ್ (ಸಾಗರ) : 70.6 mm
  • ಸಾವೇಹಕ್ಲು : 66 mm
  • ರಿಪ್ಪನ್‌ಪೇಟೆ : 43.2 mm
  • ಹೊಸನಗರ : 24.2 mm
  • ಹುಂಚ : 21 mm
  • ಅರಸಾಳು : 12.8 mm

ಧರೆ ಕುಸಿತದಿಂದ ಸಂಪರ್ಕ ಕಡಿತಗೊಳ್ಳುವ ಆತಂಕ, ಘಟನಾ ಸ್ಥಳಕ್ಕೆ ಮಾಜಿ ಸಚಿವ ಕಿಮ್ಮನೆ ಭೇಟಿ, ಪರಿಶೀಲನೆ

ಲಿಂಗನಮಕ್ಕಿ ಜಲಾಶಯ :

1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯ ಗುರುವಾರ ಬೆಳಗ್ಗೆ 8:00 ಗಂಟೆಗೆ 1814 ಅಡಿ ತಲುಪಿದ್ದು ಜಲಾಶಯ ಭರ್ತಿಗೆ ಕೇವಲ 5 ಅಡಿ ನೀರು ಮಾತ್ರ ಅವಶ್ಯಕತೆ ಇದ್ದ ಕಾರಣ ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ಇಂದು 5 ಗೇಟ್‌ಗಳ ಮೂಲಕ 10,000 ಕೂಸೆಕ್ ನೀರನ್ನು ಹೊರಬಿಡುವ ಸಾಧ್ಯತೆ ಇರುವ ಕಾರಣ ನದಿ ಪಾತ್ರದ ಕೆಳಭಾಗದ ಜನರು ತಮ್ಮಲ್ಲಿರುವ ಜಾನುವಾರ ಸಹಿತ ಸುರಕ್ಷಿತ ಸ್ಥಳಕ್ಕೆ ಧಾವಿಸಬೇಕೆಂದು ಎಚ್ಚರಿಸಿದ್ದಾರೆ.

Leave a Comment