ಆಸ್ತಿ ಮತ್ತು ಭೂಮಿ ನೊಂದಣಿಯಲ್ಲಿ ಹೊಸ ನಿಯಮ ಜಾರಿಗೆ!

Written by Koushik G K

Published on:

New rules implemented in property and land registration :ದೇಶಾದ್ಯಂತ ಆಸ್ತಿ ಮತ್ತು ಭೂಮಿ ನೊಂದಣಿ ಹೊಸ ನಿಯಮವನ್ನು ಜಾರಿಗೆ ತಂದಿದೆ. ಭಾರತದ ಆಸ್ತಿ ಮತ್ತು ಭೂಮಿ ನೊಂದಣಿ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರಲು ಭಾರತ ಸರ್ಕಾರ ಮುಂಚೂಣಿಯಲ್ಲಿದೆ. 1908ರಲ್ಲಿ ಜಾರಿಗೆ ಬಂದ 117 ವರ್ಷಗಳ ಹಳೆಯ ನೊಂದಣಿ ಕಾಯೆ ರದ್ದಾಗಲಿದೆ, ಅದರ ಬದಲು 2025ರ ಹೊಸ ಆಸ್ತಿ ನೊಂದಣಿ ಕಾನೂನು ಜಾರಿಗೆ ಬರಲಿದ್ದು, ಆನ್ಲೈನ್ ನೊಂದಣಿ ದೇಶಾದ್ಯಂತ ಕಡ್ಡಾಯವಾಗಲಿದೆ.

WhatsApp Group Join Now
Telegram Group Join Now
Instagram Group Join Now

ಹೊಸ ಕಾನೂನಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಅದೇನೆಂದರೆ ಆಸ್ತಿ ಖರೀದಿ ಮಾರಾಟದಲ್ಲಿ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದರೂ ಇದರ ಬದಲು ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಮುಂತಾದ ದಾಖಲೆಗಳನ್ನು ಉಪಯೋಗಿಸಲು ಅನುಮತಿ ಇದೆ.ಎಲ್ಲಾ ಭೂಮಿ, ಮನೆ ಮತ್ತು ಇತರ ಆಸ್ತಿಗಳ ವಹಿವಾಟುಗಳನ್ನು ಆನ್ಲೈನ್ ಮೂಲಕ ನೊಂದಣಿ ಮಾಡಿಸಬೇಕು ಇ –ರೆಕಾರ್ಡ್ಗಳು ಮಾತ್ರ ಮಾನ್ಯಮಾಡಲಾಗುತ್ತದೆ ಕಾಗದದ ದಾಖಲೆಗಳು ಮುಖ್ಯವಾಗುವುದಿಲ್ಲ. ಮಾರಾಟ ಒಪ್ಪಂದ, ಮಾರಾಟ ಪ್ರಮಾಣಪತ್ರ, ಪವರ್ ಆಫ್ ಅಟಾರ್ನಿ, ಗಿರವಿ ದಾಖಲೆಗಳು ಮುಂತಾದವುಗಳ ನೊಂದಣಿ ಕಡ್ಡಾಯವಾಗಿರುತ್ತದೆ.ಈ ರೀತಿ ನೊಂದಣಿ ಮಾಡುವುದರಿಂದ ನಕಲಿ ನೊಂದಣಿ, ವಂಚನೆ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ಡಿಜಿಟಲ್ ಲಾಕರ್ನಲ್ಲಿ ರಕ್ಷಿಸಲ್ಪಡುತ್ತದೆ.

ಭೂ ಸಂಪನ್ಮೂಲ ಇಲಾಖೆ ಈ ಹೊಸ ಮಸೂದೆಯ ಕರಡನ್ನು ಸಾರ್ವಜನಿಕರ ಪರಿಶೀಲನೆಗೆ ಬಿಡುಗಡೆ ಮಾಡಿದೆ. ಸರ್ಕಾರಿ ವೆಬ್ಸೈಟ್ನಲ್ಲಿ ಸಲಹೆಗಳು ಮತ್ತು ಪ್ರತಿಕ್ರಿಯೆಗಳನ್ನು ಸಲ್ಲಿಸಬಹುದು. ಈ ನಿಯಮದಿಂದ ಆಸ್ತಿ ವಹಿವಾಟುಗಳು ಸುರಕ್ಷಿತ, ವೇಗವಾಗಿ ಮತ್ತು ಭ್ರಷ್ಟಾಚಾರಮುಕ್ತವಾಗಲಿವೆ. ಈ ಹೊಸ ನಿಯಮದಿಂದ ಆನ್ಲೈನ್ ನೊಂದಣಿಗೆ ರಿಜಿಸ್ಟ್ರರ್ ಕಚೇರಿಗೆ ಹೋಗುವ ಅಗತ್ಯವಿಲ್ಲ, ಬಯೋಮೆಟ್ರಿಕ್ ಪರಿಶೀಲನೆ ಇರುವುದರಿಂದ ಮೋಸ ಮಾಡುವುದು ಕಡಿಮೆಯಾಗುತ್ತದೆ ಮತ್ತು ಯಾವುದೇ ಆಸ್ತಿಯ ಬಗ್ಗೆ ಕೂಲಂಕುಶವಾಗಿ ಅದರ ಮಾಲೀಕತ್ವವನ್ನು ಸುಲಭವಾಗಿ ತಿಳಿದುಕೊಳ್ಳಬಹುದು. 2025ರಿಂದ ಈ ನಿಯಮಗಳು ಜಾರಿಗೆ ಬಂದರೆ ಆಸ್ತಿಯಲ್ಲಿ ಅವ್ಯವಹಾರಗಳು, ಭ್ರಷ್ಟಚಾರ ನಡೆಯುವುದಿಲ್ಲ.

ರೈತರಿಗೆ ಮಿನಿ ಟ್ರ್ಯಾಕ್ಟರ್, ಪಾಲಿಹೌಸ್, ಹನಿ ನೀರಾವರಿ ಸಹಾಯಧನಕ್ಕೆ ಅರ್ಜಿ ಆಹ್ವಾನ!

ರೈತರಿಗೋಸ್ಕರ ಬರೋಬ್ಬರಿ ಶೇ 90ರಷ್ಟು ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ಸೆಟ್ ವಿತರಣೆ!ಇಂದೇ ಅಪ್ಲೈ ಮಾಡಿ

FASTag ವಾರ್ಷಿಕ ಪಾಸ್ : ಏನಿದು? ಪ್ರಸ್ತುತ ಬಳಕೆದಾರರ ಮೇಲೆ ಎಫೆಕ್ಟ್ ಆಗುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

Leave a Comment