ಮುಂಗಾರು ಮಳೆಯಾರ್ಭಟ ; ಒಂದೇ ಮಳೆಗೆ ತುಂಬಿ ಹರಿಯುತ್ತಿರುವ ಮಲೆನಾಡಿನ ಕೆರೆ-ಕಟ್ಟೆಗಳು, ಅಡಿಕೆ ತೋಟಕ್ಕೆ ನುಗ್ಗಿದ ನೀರು !

Written by Mahesh Hindlemane

Published on:

ರಿಪ್ಪನ್‌ಪೇಟೆ ; ಬುಧವಾರ ಮಧ್ಯಾಹ್ನದಿಂದ ಎಡಬಿಡದೆ ಸುರಿದ ಭಾರಿ ಮಳೆಯಿಂದಾಗಿ ಇಲ್ಲಿನ ಕೆರೆ-ಕಟ್ಟೆಗಳು ಮತ್ತು ಕುಮದ್ವತಿ ಶರ್ಮಿನಾವತಿ ನದಿಗಳು ನೀರು ತುಂಬಿ ಹರಿಯಲಾರಂಭಿಸಿವೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕೆಂಚನಾಲ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಆಲವಳ್ಳಿಯ ಕಲ್ಲುಕೆರೆ ಮತ್ತು ಮಾದಾಪುರ ಗವಟೂರು ಬಳಿಯ ಶರ್ಮಿಣಾವತಿ ನದಿ ಹಾಗೂ ಕಲ್ಲೂರು, ಹೊಳೆನಕೊಪ್ಪ, ಕಗ್ಗಲಿಜಡ್ಡು ಮತ್ತು ಮೂಗುಡ್ತಿ, ಅರಸಾಳು ರಿಪ್ಪನ್‌ಪೇಟೆ, ಹುಗುಡಿ, ಅಮೃತ, ಹಿಂಡ್ಲೆಮನೆ, ಹುಂಚ, ಕೋಡೂರು, ಹರತಾಳು, ಕರಿಗೆರಸು, ಬೆಳ್ಳೂರು, ಕೆಂಚನಾಲ, ಬಾಳೂರು, ಚಿಕ್ಕಜೇನಿ, ಹೆದ್ದಾರಿಪುರ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳಲ್ಲಿ ಬುಧವಾರ ಸುರಿದ ಭಾರಿ ಮಳೆಯಿಂದಾಗಿ ಗುಡ್ಡದ ನೀರು ಚರಂಡಿ ತುಂಬಿ ರಸ್ತೆಯ ಮೇಲೆ ಉಕ್ಕಿ ಹರಿದ ಪರಿಣಾಮ ಮತ್ತು ಕೆರೆ ಕಟ್ಟೆಗಳು ತುಂಬಿದ್ದು ಇದರಿಂದಾಗಿ ಎಲ್ಲೆಂದರಲ್ಲಿ ಜಲಾವೃತಗೊಂಡಿತು.

ಭಾರಿ ಮಳೆಯಿಂದಾಗಿ ಇಲ್ಲಿನ ಹಲವು ಚರಂಡಿಗಳು ನೀರು ನುಗ್ಗಿ ಸ್ವಚ್ಚಗೊಳಿಸಿದ್ದು ಜಮೀನುಗಳು ಸಂಪೂರ್ಣ ಜಲಾವೃತ್ತವಾಗಿದ್ದು ಶುಂಠಿ ಬೆಳೆಯ ಮೇಲೆ ನೀರು ನುಗ್ಗಿ ಶುಂಠಿ ಕೊಚ್ಚಿ ಹೋಗಿರವ ಬಗ್ಗೆ ವರದಿಯಾಗಿದೆ. ಇನ್ನೂ ಊರಿನಲ್ಲಿನ ಕಸವು ಸಹ ಭಾರಿ ಮಳೆಯಿಂದಾಗಿ ನೀರು ಹರಿದ ಪರಿಣಾಮ ಸ್ವಚ್ಚಗೊಂಡಿದೆ.

ಆಲವಳ್ಳಿಯ ಕಲ್ಲುಕೆರೆ ತುಂಬಿ ಹರಿಯುತ್ತಿದ್ದು ಕೆರೆ ನೀರು ಕೋಡಿಯ ಮೂಲಕ ಉಕ್ಕಿ ಹರಿಯುತ್ತಾ ಅಡಿಕೆ ತೋಟಗಳಿಗೆ ನುಗ್ಗಿ ಸಾಕಷ್ಟು ಹಾನಿಯಾಗಿದೆ. ಇದೇ ರೀತಿ ಹುಗುಡಿಯಲ್ಲಿ ಸಹ ಶರ್ಮಿಣಾವತಿ ಉಕ್ಕಿ ಹರಿದು ಅಡಿಕೆ ತೋಟಗಳಿಗೆ ನುಗ್ಗಿ ಸಾಕಷ್ಟು ಹಾನಿಯಾಗಿದೆ ಎನ್ನಲಾಗಿದೆ.

Leave a Comment