ರಿಪ್ಪನ್‌ಪೇಟೆ ; ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಸರ್ವೇ ನಂ 40 ಮತ್ತು 42/2 ಹಾಗೂ 57 ಇನ್ನಿತರ ಜಮೀನಿಗೆ ಸಂಪರ್ಕ ಕಲ್ಪಿಸುವ ಸಂಪರ್ಕದ ರಸ್ತೆಯನ್ನು ಒತ್ತುವರಿ ನೆಪದಲ್ಲಿ ರಸ್ತೆಗೆ ಮಣ್ಣು ಹಾಕಿ ಬಂದ್ ಮಾಡುವ ಮೂಲಕ ರೈತರಿಗೆ ಕೃಷಿ ಚಟುವಟಿಕೆಗೆ ಹೋಗಿ ಬಾರದಂತೆ ತಡೆಮಾಡಿದ್ದಾರೆಂಬ ದೂರಿನ ಮೇರೆಗೆ ಅರಸಾಳು ಗ್ರಾಮ ಪಂಚಾಯ್ತಿ ಆಭಿವೃದ್ದಿ ಆಧಿಕಾರಿಗಳು ಮತ್ತು ಗ್ರಾಮಾಡಳಿತ ಹಾಗೂ ಪಿಎಸ್‌ಐ ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ಜಮೀನು ಕೃಷಿ ಚಟುವಟಿಕೆಗೆ ಮುಕ್ತಗೊಳಿಸಿದ್ದಾರೆ.
ಈ ಕೂಡಲೇ ಬಂದ್ ಮಾಡಲಾದ ಸಂಪರ್ಕ ರಸ್ತೆಯನ್ನು ತೆರವುಗೊಳಿಸಿ ರೈತರಿಗೆ ಈ ಹಿಂದಿನಂತೆ ಕೃಷಿ ಚಟುವಟಿಕೆಗೆ ಜನ-ಜಾನುವಾರುಗಳಿಗೆ ಓಡಾಡಲು ಅನುಕೂಲ ಮಾಡಿಕೊಟ್ಟ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ರಕ್ಷಣಾಧಿಕಾರಿಗಳಿಗೆ, ತಹಶೀಲ್ದಾರ್ ಮತ್ತು ಪಿಎಸ್‌ಐರಿಗೆ ತಮ್ಮಡಿಕೊಪ್ಪ ಗ್ರಾಮದ ರೈತರಾದ ಪರಶೋಜಿರಾವ್, ಶ್ರೀನಿವಾಸರಾವ್, ಅನಿಲ್‌ಕುಮಾರ್, ಹರ್ಷ, ಕೃಷ್ಣೋಜಿರಾವ್, ಅಭಿನಂದಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.