ಹೊಸನಗರ

BAMS ; ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಡಾ. ಸಂಜನಾ ಎಸ್ ರಾವ್ ಕೋಡೂರು

ಹೊಸನಗರ ; ಡಾ. ಸಂಜನಾ ಎಸ್ ರಾವ್‌ರವರು ಆರೂರು ಲಕ್ಷ್ಮಿನಾರಾಯಣ ರಾವ್ ಸ್ಮಾರಕ ಆಯುರ್ವೇದ ಮಹಾ ವಿಶ್ವವಿದ್ಯಾನಿಲಯ ಕೊಪ್ಪ (ಚಿಕ್ಕಮಗಳೂರು) ಅಧೀನದಲ್ಲಿ ಬಿಎಎಂಎಸ್ ಪದವಿಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಇವರು ಹೊಸನಗರ ತಾಲ್ಲೂಕು ಕೋಡೂರು ಗ್ರಾಮದ ಶಶಿಧರ ಎಸ್ ರಾವ್ ಹಾಗೂ ದೀಪಾ ಎಸ್ ರಾವ್‌ರವರ ಪುತ್ರಿಯಾಗಿದ್ದಾರೆ.

ಮೌಲಿಕ ಸಿದ್ಧಾಂತ ಮತ್ತು ಅಷ್ಟಾಂಗ ಹೃದಯದಲ್ಲಿ ಪ್ರಥಮ ರ‍್ಯಾಂಕ್, ಚರಕ ಪೂರ್ವಾರ್ಧದಲ್ಲಿ ಪ್ರಥಮ ರ‍್ಯಾಂಕ್, ಶಲ್ಯತಂತ್ರದಲ್ಲಿ ಪ್ರಥಮ ರ‍್ಯಾಂಕ್, ಕ್ರಿಯಾ ಶಾರೀರದಲ್ಲಿ ದ್ವಿತೀಯ ರ‍್ಯಾಂಕ್, ಸಂಸ್ಕೃತದಲ್ಲಿ 4ನೇ ರ‍್ಯಾಂಕ್, ದ್ರವ್ಯಗುಣಂ 6ನೇ ರ‍್ಯಾಂಕ್, ರೋಗ ನಿದಾನ ಮತ್ತು ವಿಕೃತಿ ವಿಜ್ಞಾನದಲ್ಲಿ 7ನೇ ರ‍್ಯಾಂಕ್ ಪಡೆದಿದ್ದು ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದ ಅಧೀನದಲ್ಲಿ ಬಿಎಎಂಎಸ್‌ನಲ್ಲಿ ಒಟ್ಟು 5 ಚಿನ್ನದ ಪದಕವನ್ನು ಪಡೆದಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
https://play.google.com/store/apps/details?id=com.adikemarket.karnataka&pcampaignid=web_share

ಅಭಿನಂದನೆ ;

ಹೊಸನಗರ ತಾಲ್ಲೂಕು ಕೋಡೂರು ಗ್ರಾಮದ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು 5 ಚಿನ್ನದ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುವ ಇವರ ಈ ಸಾಧನೆಯನ್ನು ಕೋಡೂರು ಗ್ರಾಮದವರೇ ಆದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಚಂದ್ರಮೌಳಿ ದಂಪತಿಗಳು ಅಭಿನಂದಿಸಿದ್ದಾರೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!