ಹೊಸನಗರ

ಹೊಸನಗರ ; ಬೈಕ್ ಸವಾರರೇ ಗಮನಿಸಿ, ಇನ್ಮುಂದೆ ಹೆಲ್ಮೆಟ್ ಹಾಕದೆ ಬೈಕ್ ಚಲಾಯಿಸಿದರೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ದಂಡದ ರಸೀದಿ !

ಹೊಸನಗರ ; ಪಟ್ಟಣದಲ್ಲಿ ವಾಹನ ಸಾವರರಿಗೆ ಸರ್ಕಲ್ ಇನ್ಸ್‌ಪೆಕ್ಟರ್ ಗೌಡಪ್ಪ ಗೌಡರ್‌ರವರ ಆದೇಶದ ಮೇರೆಗೆ ಸಬ್‌ಇನ್ಸ್‌ಪೆಕ್ಟರ್ ಶಂಕರ ಗೌಡ ಪಾಟೀಲ್‌ರ ನೇತೃತ್ವದಲ್ಲಿ ದ್ವಿಚಕ್ರ ವಾಹನ ಸಾವರರು ಹೆಲ್ಮೆಟ್ ಹಾಕದಿದ್ದರೆ ತಮ್ಮ ಮನೆಯ ಬಾಗಿಲಿಗೆ ದಂಡ ರಸೀದಿಯನ್ನು ಕಳುಹಿಸಲಾಗುವುದು ಎಂದು ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಈಗಾಗಲೇ ರಾಜ್ಯ, ಜಿಲ್ಲೆಯಲ್ಲಿ ಹಾಗೂ ಕೆಲವು ತಾಲ್ಲೂಕುಗಳಲ್ಲಿ ದ್ವಿಚಕ್ರ ವಾಹನ ಸಾವರರು ಹೆಲ್ಮೆಟ್ ಹಾಕದವರನ್ನು ಗುರುತಿಸಿ ದಂಡದ ರಸೀದಿ ಕಳುಹಿಸಲಾಗುತ್ತಿದ್ದು ಅದರಂತೆ ಹೊಸನಗರ ಪಟ್ಟಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಈ ಹಿಂದೆ ರಸ್ತೆಗಳ ಮಧ್ಯೆ ಹಾಗೂ ಸರ್ಕಲ್‌ಗಳಲ್ಲಿ ಹೆಲ್ಮೆಟ್ ಹಾಗೂ ವಾಹನ ತಪಾಸಣೆ ನಡೆಸುತ್ತಿದ್ದೆವು ಅದರ ಬದಲಾಗಿ ಮೊಬೈಲ್ ಮೂಲಕ ಫೋಟೋ ತೆಗೆದು ಹೆಲ್ಮೆಟ್ ರಹಿತವಾಗಿ ವಾಹನ ಚಲಾಯಿಸುವವರನ್ನು ಗುರುತಿಸಿ ಅವರ ಮನೆಯ ವಿಳಾಸಕ್ಕೆ ದಂಡದ ನೋಟಿಸ್ ಕಳುಹಿಸಲಾಗುವುದು ಎಂದರು.

ಹೊಸನಗರ ಪಟ್ಟಣದಲ್ಲಿ ಈಗಾಗಲೇ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ರಹಿತವಾಗಿ ಓಡಾಟ ನಡೆಸುವವರನ್ನು ಗುರುತಿಸಿ ನೋಟಿಸ್ ನೀಡಲಾಗಿದ್ದು ಮುಂದಿನ ದಿನದಲ್ಲಿ ತ್ವರಿತವಾಗಿ ಈ ಕಾರ್ಯಗತವಾಗಿ ನಡಸುತ್ತೇವೆಂದರು.

ಒಂದೆರಡು ತಿಂಗಳಲ್ಲಿ ಅತೀ ಹೆಚ್ಚಾಗಿ ವಾಹನ ಅಪಘಾತವಾಗುತ್ತಿದೆ ಅದರಲ್ಲಿ ಹೆಚ್ಚಾಗಿ ಬೈಕ್ ಸವಾರರೇ ಅಸುನೀಗುತ್ತಿದ್ದು ಯುವಕರೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ತಂದೆ-ತಾಯಿಗಳಿಗೆ ಆಸರೆಯಾಗ ಬೇಕಾಗಿದ್ದು ಯುವಕರು ಈ ರೀತಿ ಅಪಘಾತದಲ್ಲಿ ಬಲಿಯಾಗುವುದನ್ನು ನೋಡಲು ಅಸಾಧ್ಯವಾಗುತ್ತಿದೆ. ಕುಟುಂಬ ಇವರನ್ನು ನಂಬಿ ಬದುಕುತ್ತಿದೆ ಪ್ರತಿಯೊಬ್ಬರು ಜಾಗೃತೆಯಿಂದ ವಾಹನ ಚಾಲಾಯಿಸಿ ನಿಮ್ಮ ಕುಟುಂಬ ವರ್ಗದವರಿಗೆ ಆಸರೆಯಾಗಿ ಜೀವನ ನಡೆಸಿ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಸುಪ್ರೀಂಕೋರ್ಟ್ ಸೂಚನೆಯಂತೆ ವಾಹನ ಚಲಾಯಿಸುವಾಗ ಪ್ರತಿಯೊಬ್ಬರು ಹೆಲ್ಮೆಟ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು ಹಾಗೂ 4 ಚಕ್ರದ ವಾಹನ ಚಲಾಯಿಸುವಾಗ ಶೀಟ್‌ಬೆಲ್ಟ್ ಕಡ್ಡಾಯವಾಗಿ ಹಾಕಿಕೊಂಡು ವಾಹನ ಚಾಲಾಯಿಸಿಬೇಕು. ಆದೇಶ ಪಾಲನೆ ಮಾಡುವುದರಿಂದ ನಿಮ್ಮ ಕುಟುಂಬಕ್ಕೆ ನೀವು ದಾರಿ ದೀಪವಾಗುತ್ತೀರಿ ಎಂದರು.

ಪ್ರತಿಯೊಬ್ಬರು ಸರಿಯಾದ ವೇಗದಲ್ಲಿ ಸರಿಯಾದ ದಿಕ್ಕಿನಲ್ಲಿ ರಸ್ತೆ ನಿಯಮಗಳನ್ನು ಅನುಸರಿಸಿ ಹೆಲ್ಮೆಟ್ ಧರಿಸಿ ಮತ್ತು ವಾಹನಗಳನ್ನು ನಿಯಂತ್ರಣದಲ್ಲಿ ವಾಹನವನ್ನು ಚಾಲಯಿಸಿ ಎಂದು ಸಲಹೆ ನೀಡಿದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!