Gold Price:ಚಿನ್ನದ ಬೆಲೆ ಪ್ರತಿ ದಿನವೂ ಏರಿಕೆಯಿಂದ ತಲೆನೋವಿಗೆ ಕಾರಣವಾಗುತ್ತಿದ್ದರೆ, ಈಗ ಈ ಸುದ್ದಿ ಆಭರಣ ಪ್ರಿಯರಿಗೆ ಖುಷಿಯ ವಿಚಾರ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಒಂದು ಘೋಷಣೆಯಿಂದ ಜಾಗತಿಕ ಬಂಗಾರದ ಮಾರುಕಟ್ಟೆಯಲ್ಲಿ ಬೃಹತ್ ಪಾತಾಳ ಕುಸಿತವಾಗಿದ್ದು, ಭಾರತದ ಬಂಗಾರದ ಬೆಲೆಯೂ ಒಂದೇ ದಿನದಲ್ಲಿ ₹3,000ರಷ್ಟು ಇಳಿದಿದೆ.
ಟ್ರಂಪ್ ಅಮೆರಿಕದ ಆರ್ಥಿಕ ನೀತಿಗಳ ಕುರಿತು ನೀಡಿರುವ ಭರವಸೆಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೇಡಿಕೆಗೆ ಹೊಡೆತ ನೀಡಿವೆ. ಈ ಮಾತುಗಳ ಪರಿಣಾಮವಾಗಿ ಬಂಗಾರದ ದರವು ತಕ್ಷಣವೇ ಕುಸಿಯತೊಡಗಿತು.
ಹೊಸ ಬೆಲೆ ?
ಒಂದು ತೋಳ ಬಂಗಾರದ ದರ ₹3,000ರಷ್ಟು ಕುಸಿದಿದ್ದು, ಮದುವೆ ಸೀಸನ್‌ಗೆ ಸಿದ್ಧರಾಗುತ್ತಿರುವ ಗ್ರಾಹಕರಿಗೆ ಇದು ದೊಡ್ಡ ಅನುಕೂಲವಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ದರ ₹66,500 ರಿಂದ ₹63,500 ರವರೆಗೆ ಇಳಿದಿದೆ.
ಆಭರಣ ವ್ಯಾಪಾರಿಗಳು ಏನು ಹೇಳುತ್ತಾರೆ?
ವ್ಯಾಪಾರಿಗಳ ಪ್ರಕಾರ, ಈ ಕುಸಿತದ ಪ್ರಯೋಜನವನ್ನು ಹೆಚ್ಚಾಗಿ ಮಹಿಳಾ ಗ್ರಾಹಕರು ತೆಗೆದುಕೊಳ್ಳುತ್ತಿದ್ದಾರೆ. ಮದುವೆ, ಉಡುಗೊರೆ ಹಾಗೂ ಹೂಡಿಕೆಯ ನಿಟ್ಟಿನಲ್ಲಿ ಚಿನ್ನ ಖರೀದಿ ಗರಿಗೆದರುತ್ತಿದೆ.
Read more :UPI ಬಳಕೆದಾರರಿಗೆ ಸಿಹಿ ಸುದ್ದಿ: ಜಾರಿ ಆಯ್ತು ಈ ಹೊಸ ನಿಯಮ !