ರಿಪ್ಪನ್‌ಪೇಟೆ ; ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಜನತೆಯ ಸ್ವಾತಂತ್ರ್ಯವನ್ನೇ ಕಸಿದುಕೊಂಡ ಕಾಂಗ್ರೆಸ್ ಸರ್ಕಾರದ ಅಂದಿನ ಸರ್ವಾಧಿಕಾರಿ ಧೋರಣೆಯ ಆಡಳಿತವನ್ನು ಜನತೆ ಎಂದೂ ಮರೆಯಬಾರದು. ಅದೊಂದು ಕರಾಳ ದಿನವಾಗಿತ್ತು. ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ಮುಂದೆಂದೂ ಅಂತಹ ಕರಾಳ ಪರಿಸ್ಥಿತಿ ಬರಲು ಬಿಡುವುದಿಲ್ಲ ಎಂದು ಶಿವಮೊಗ್ಗ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ರಿಪ್ಪನ್‌ಪೇಟೆಯ ಶ್ರೀರಾಮ ಮಂದಿರದಲ್ಲಿ ಬಿಜೆಪಿ ಆಯೋಜಿಸಿದ್ದ ತುರ್ತು ಪರಿಸ್ಥಿತಿ 50 ವರ್ಷದ ಒಂದು ಕರಾಳ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟ ಮಾಡಿದ ಈ ಭೂಮಿಯಲ್ಲಿ ಸ್ವಾರ್ಥಸಾಧನೆಗಾಗಿ 1975 ರಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಈ ದೇಶಕ್ಕೆ ಮಾಡಿದ ಅವಮಾನ. ಈ ದೇಶದ್ದಲ್ಲ ಆ ಪಕ್ಷವನ್ನು ಹುಟ್ಟು ಹಾಕಿದವರು ಬ್ರಿಟೀಷ್ ಪ್ರಜೆ ಅತನಿಂದ ದೇಶಭಕ್ತಿ ಕಾಣಲು ಹೇಗೆ ಸಾಧ್ಯ ಎಂದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ಸಂವಿಧಾನ ಪರಿಚ್ಛೇದ 38 ಕ್ಕೆ ತಿದ್ದುಪಡಿ ತಂದು ತುರ್ತು ಪರಿಸ್ಥಿತಿ ಜಾರಿಗೊಳಿಸಿದರು. ಇದನ್ನು ಖಂಡಿಸಿದ ಅದೆಷ್ಟೋ ದೇಶ ಪ್ರೇಮಿಗಳನ್ನು ಕಾರಣವಿಲ್ಲದೆ ಜೈಲಿಗಟ್ಟಿದರು. ಕೈದಿಗಳಿಂದ ಹಲ್ಲೆ ಮಾಡಿಸಿದರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿದರು ಎಂದರು.
ಇಂದಿನ ಯುವ ಜನಾಂಗಕ್ಕೆ ಸ್ವಾತಂತ್ರ್ಯದ ಮತ್ತು ರಾಮ ಮಂದಿರದ ಹೋರಾಟದ ಬಗ್ಗೆ ಆರಿವು ಇಲ್ಲ ಹೋರಾಟದ ಬಗ್ಗೆ ಯುವಜನಾಂಗಕ್ಕೆ ತಿಳಿಸುವ ಕೆಲಸವನ್ನು ಮಾಡಬೇಕಾದ ಅನಿರ್ವಾತೆ ಎದುರಾಗಿದೆ ಎಂದು ಹೇಳಿ ದೇಶಭಕ್ತರನ್ನು ಹಿಡಿದು ಹಿಂಸೆ ಮಾಡಿ ಜೈಲಿಗೆ ಕಳುಹಿಸಿದ ಹೋರಾಟದ ಹಿಂದಿನ ನೆನಪುಗಳನ್ನು ನೆನಪಿಸಿಕೊಂಡರೆ ಈಗಲೂ ನಮಗೆ ರೋಮಾಚನವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿದ್ದ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆರೆಹಳ್ಳಿ-ಹುಂಚ ಹೋಬಳಿಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್ ವಹಿಸಿದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಮುಖಂಡರಾದ ಆರ್.ಟಿ.ಗೋಪಾಲ್, ಬೆಳ್ಳೂರು ತಿಮ್ಮಪ್ಪ, ಲೀಲಾ ಉಮಾಶಂಕರ, ಪದ್ಮಾಸುರೇಶ್, ನಾಗರತ್ನ ದೇವರಾಜ್, ದೇವೇಂದ್ರಪ್ಪಗೌಡ ನೆವಟೂರು, ಎಂ.ಬಿ.ಮಂಜುನಾಥ, ಎಂ.ಸುರೇಶಸಿಂಗ್, ಕಲ್ಲೂರು ನಾಗೇಂದ್ರ, ಗ್ರಾಮ ಪಂಚಾಯಿತ್ ಉಪಾಧ್ಯಕ್ಷ ಸುದೀಂದ್ರಪೂಜಾರಿ, ಇನ್ನಿತರರು ಪಾಲ್ಗೊಂಡಿದ್ದರು.
ಸುಧಾಗೌಡ, ನಾಗರತ್ನ, ಮೇಘನಾ ಪ್ರಾರ್ಥಿಸಿದರು. ಸುಂದರೇಶ ಸ್ವಾಗತಿಸಿದರು. ಸುಬ್ರಹ್ಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಸತೀಶ್ ವಂದಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.