ಶಿವಮೊಗ್ಗ: ಶಿವಮೊಗ್ಗದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಚೇರಿಗೆ ತಾತ್ಕಾಲಿಕವಾಗಿ ಒರ್ವ ಲಿಪಿಕ ಸಿಬ್ಬಂದಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿಯಾಗಲಿದ್ದು, ಲಿಖಿತ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
Read More :ರೈತರೆ ಗಮನಿಸಿ! ಈ ಯೋಜನೆಯಡಿ ಮಿನಿ ಟ್ರ್ಯಾಕ್ಟರ್‌ಗೆ ಶೇ.90ರಷ್ಟು ಸಬ್ಸಿಡಿ ಪಡೆಯಬಹುದು!
ಆರ್ಹ ಅಭ್ಯರ್ಥಿಗಳಿಗೆ ವಿಶೇಷ ಅವಕಾಶ:
- ನೇಮಕಾತಿ ಮಾಜಿ ಸೈನಿಕರಿಗೆ ಮೀಸಲಿರಿಸಲಾಗಿದ್ದು, ಅಭ್ಯರ್ಥಿಯ ವಯಸ್ಸು 60 ವರ್ಷಕ್ಕೆ ಮೀರಿರಬಾರದು.
- ಈ ಹುದ್ದೆ ಸರ್ಕಾರದ ಖಾಯಂ ಹುದ್ದೆಯಲ್ಲ ಹಾಗೂ ಸೇವಾ ಖಾಯಮಾತಿಗೂ ಅನ್ವಯಿಸುವುದಿಲ್ಲ.
ಅರ್ಹತಾ ಮಾನದಂಡಗಳು:
- ಅಭ್ಯರ್ಥಿಯು ಕೇಂದ್ರ ಸಶಸ್ತ್ರ ಸೇನೆಗಳ ಯಾವುದೇ ವಿಭಾಗದಲ್ಲಿ ಲಿಪಿಕರಾಗಿ ಸೇವೆ ಸಲ್ಲಿಸಿದ್ದಿರಬೇಕು.
- ನಿವೃತ್ತಿಯ ನಂತರ ಕನಿಷ್ಠ ಒಂದು ವರ್ಷವಷ್ಟು ಲಿಪಿಕನಾಗಿ ಕೇಂದ್ರ/ರಾಜ್ಯ ಸರ್ಕಾರದ ಕಛೇರಿಯಲ್ಲಿ ಕೆಲಸ ಮಾಡಿದ್ದರೆ ಆದ್ಯತೆ.
- ಕನ್ನಡ, ಹಿಂದಿ ಹಾಗೂ ಆಂಗ್ಲ ಭಾಷೆಗಳಲ್ಲಿ ಬರೆಯಲು, ಓದಲು ಮತ್ತು ಮಾತನಾಡಲು ಸಾಮರ್ಥ್ಯ ಅಗತ್ಯ.
- ಗಣಕಯಂತ್ರದಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಟೈಪಿಂಗ್ ಪ್ರಾವೀಣ್ಯತೆ ಅಗತ್ಯ.
ಅರ್ಜಿ ಸಲ್ಲಿಕೆ ವಿವರ:
ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವಹಸ್ತಾಕ್ಷರದ ಅರ್ಜಿ, ಅಗತ್ಯ ದಾಖಲೆಗಳು ಹಾಗೂ ಪೂರ್ಣ ಸ್ವವಿವರಗಳೊಂದಿಗೆ, ಕೆಳಕಂಡ ವಿಳಾಸಕ್ಕೆ 07.07.2025ರೊಳಗೆ ಸಲ್ಲಿಸಬೇಕು:
ಉಪನಿರ್ದೇಶಕರು,
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ,
ಶಿವಮೊಗ್ಗ.
Read More :ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ ? ಇಲ್ಲಿದೆ ಸಂಪೂರ್ಣ ಮಾಹಿತಿ