ರಾಷ್ಟ್ರೀಯ ಅಹಿಂದ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಹೊಸನಗರ ಜಯರಾಮ್ ಶೆಟ್ಟಿ ಆಯ್ಕೆ

Written by Mahesha Hindlemane

Published on:

ಹೊಸನಗರ ; ರೈತ ಪರ ಹೋರಾಟಗಾರ ಜಯರಾಮ್ ಶೆಟ್ಟಿಯವರನ್ನು ಮುತ್ತಣ್ಣ ಎಸ್ ಶಿವಳ್ಳಿರವರ ನೇತೃತ್ವದ ಅಹಿಂದ ವರ್ಗದ ರೈತರ ಜನರ ರಕ್ಷಣೆಗಾಗಿ ನಿರ್ಮಿಸಿಕೊಂಡಿರುವ ರಾಷ್ಟ್ರೀಯ ಅಹಿಂದ ಸಂಘಟನೆಯ ರೈತ ಮೋರ್ಚಾದ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಹೊಸನಗರ ಜಯರಾಮ್ ಶೆಟ್ಟಿಯನ್ನು ಆಯ್ಕೆ ಮಾಡಲಾಗಿದೆ.

WhatsApp Group Join Now
Telegram Group Join Now
Instagram Group Join Now

ಜಯರಾಮ್ ಶೆಟ್ಟಿ ಈ ಹಿಂದೆ ರೈತರ ಪರವಾಗಿ ಅನೇಕ ಹೋರಾಟದಲ್ಲಿ ಭಾಗವಹಿಸುವುದರ ಜೊತೆಗೆ ನ್ಯಾಯ ಕೊಡಿಸಿದ್ದಾರೆ.
ಹಕ್ಕುಪತ್ರ ವಜಾ ಮಾಡಬೇಕು ಎಂದು ಸಾಗರದ ಉಪ ವಿಭಾಗದ ಕಛೇರಿಯಿಂದ ರೈತರಿಗೆ ನೋಟಿಸ್ ಬಂದ ತಕ್ಷಣ ಈ ಕುರಿತು ಮಲೆನಾಡು ರೈತ ಹೋರಾಟಗಾರರು ತೀ.ನಾ ಶ್ರೀನಿವಾಸ್‌ ಹಾಗೂ ಜಿಲ್ಲಾ ರೈತ ಒಕ್ಕೂಟದ ಅಧ್ಯಕ್ಷ ಜೊತೆಗೆ ರೈತರೊಂದಿಗೆ ಸಂವಾದನೆ ನಡೆಸಿ ರೈತರ ಆತ್ಮಸ್ಥೈರ್ಯ ಹೆಚ್ಚಿಸಿದವರು ಏನು ಮಾಡಬೇಕೆಂದು ತಿಳಿಯದ ಅಮಾಯಕ ರೈತರಿಗೆ ದಾರಿದೀಪದಂತೆ ನಿಂತು ಆಶ್ವಾಸನೆ ನೀಡಿದವರು ಇವರು ರೈತರಿಗೆ ಬೆನ್ನೆಲುಬಾಗಿ ನಿಂತು ಮಲೆನಾಡಿನ ಭಾಗದ ರೈತರಿಗೆ ಏನೇ ಅನ್ಯಾಯವಾದರೂ ಅವರ ಪರವಾಗಿ ನಿಂತು ಹೋರಾಟ ನಡೆಸುವುದರಲ್ಲಿ ಪ್ರಮುಖ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಲಾಗಿದೆ.

Leave a Comment