ಶಿವಮೊಗ್ಗ: ಮೋದಿ 11 ವರ್ಷದ ಸಾಧನೆ ಸಮಾರಂಭ -ಸಂತೋಷ್ ಗೇರ್‌ಗಲ್‌ (ರಜತ್ ಮೌರ್ಯ) ಅವರಿಗೆ ಗೌರವಾನ್ವಿತ ಸನ್ಮಾನ

Written by Koushik G K

Published on:

ಶಿವಮೊಗ್ಗ:ಪ್ರಧಾನಿ ನರೇಂದ್ರ ಮೋದಿ ಅವರ 11 ವರ್ಷದ ಸಾಧನೆಗೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ–ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಭಾಗದ ಬಿಜೆಪಿ ನಾಯಕರು ಉಪಸ್ಥಿತರಿದ್ದರು .

WhatsApp Group Join Now
Telegram Group Join Now
Instagram Group Join Now

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೇರ್‌ಗಲ್‌ ಮೂಲದ ಸಂತೋಷ್ ಗೇರ್‌ಗಲ್‌, (ರಜತ್ ಮೌರ್ಯ )ಅವರಿಗೆ ಸನ್ಮಾನ ನಡೆಯಿತು.

ಕಾನೂನು ಕ್ಷೇತ್ರದಲ್ಲಿ G.R. Associates ಮುಖಾಂತರ ವಕೀಲರಾಗಿ ಯಶಸ್ಸು ಕಂಡ ರಜತ್ ಮೌರ್ಯವೈಕುಂಠ ಸಮಾರಾಧನೆ” ಚಿತ್ರದಲ್ಲಿ ನಟನ ಜೊತೆಗೆ ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿದ್ದಾರೆ.ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಯಶಸ್ವಿಯಾಗಿರುವ ಇವರು ಸಾಮಾಜಿಕ ಸೇವೆ, ಕೃಷಿ ಹಾಗೂ ಕ್ರೀಡಾ ಹವ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಸಾಧನೆಗಾಗಿ ನಡೆದ ಸನ್ಮಾನ ಸಮಾರಂಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಮಾಜಿ ಗೃಹ ಸಚಿವ ಹಾಗೂ ಹಾಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

Leave a Comment