ರಿಪ್ಪನ್‌ಪೇಟೆ ; ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವ ಶಕ್ತಿಯೇ ಗುರು. ಗುರುಶಕ್ತಿಯ ಯಾವ ರೂಪದಲ್ಲಿ ಬಂದು ಹೇಗೆ ನಮ್ಮನ್ನು ಉದ್ದರಿಸುತ್ತದೆ ಎನ್ನುವುದು ಅನೂಹ್ಯ. ವ್ಯಕ್ತಿರೂಪದಲ್ಲಿ ಪ್ರೇರಕನಾಗಿಯೋ ಸೂಚಕನಾಗಿಯೋ ದರ್ಶಕನಾಗಿಯೋ ವಾಚಕನಾಗಿಯೋ ಶಿಕ್ಷಕನಾಗಿಯೋ ಬೋಧಕನಾಗಿಯೋ ಬಂದು ಆಶೀರ್ವದಿಸುವ ಇವರೆಲ್ಲರಲ್ಲದೆ ನಮ್ಮೂಳಗಿನೊಳಗೆ ಅಂತರ್ಯಾಮಿ ಗುರುವಿರುತ್ತಾನೆ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು.
ಮೂಲೆಗದ್ದೆ ಸದಾನಂದ ಶಿವಯೋಗಾಸ್ರಮದಲ್ಲಿ ನಡೆದ ಗುರುಪೂರ್ಣಿಮೆ ದಿನದ ಅಂಗವಾಗಿ ಲಿಂ/ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಕರ್ತೃಗದ್ದುಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗುರ ಸ್ಮರಣೆ ನೆರವೇರಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಮಠದ ಸದ್ಬಕ್ತರು ಪಾಲ್ಗೊಂಡಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.