ರಿಪ್ಪನ್‌ಪೇಟೆ : ಭಾರತೀಯ ಸಂಸ್ಕೃತಿಯಲ್ಲಿ ಗುರು ಎಂಬ ಎರಡಕ್ಷರಕ್ಕೆ ಅತ್ಯುನ್ನತ ಸ್ಥಾನವಿದೆ. ಪ್ರತಿಯೊಂದು ಸಾಧನೆಯ ಹಿಂದೆ ಒಬ್ಬ ಗುರು ಇರುತ್ತಾನೆ. ಅಮ್ಮ-ಅಪ್ಪ ಎಂಬ ಪದಕ್ಕಿರುವಷ್ಟು ಶ್ರೇಷ್ಟ ಸ್ಥಾನದಲ್ಲಿ ನಿಲ್ಲುವ ಗುರುಗಳು ಎಂದು ನಿವೃತ್ತ ಉಪನ್ಯಾಸಕ ಶ್ರೀಧರಮೂರ್ತಿ ಹೇಳಿದರು.
ಸಮೀಪದ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬಿಜೆಪಿ ಹೊಸನಗರ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಏರ್ಪಡಿಸಲಾಗಿದ್ದ “ಗುರು ಪೂರ್ಣಿಮಾ’’ ಕಾರ್ಯಕ್ರಮದಲ್ಲಿ ಗುರುಪೂಜೆ ಸ್ವೀಕರಿಸಿ ಮಾತನಾಡಿ, ಶ್ರದ್ದಾಭಕ್ತಿಯಿಂದ ಈ ಗುರು ಪೂರ್ಣಿಮೆಯನ್ನು ನೆರವೇರಿಸುತ್ತಿರುವುದು ಮುಂದಿನ ಯುವ ಪೀಳಿಗಗೆ ಭಕ್ತಿ ಭಾವನೆ ಬೆಳಸಲು ಉತ್ತಮ ವೇದಿಕೆಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಮಟಗಾರು ಶಾಲೆಯ ಮುಖ್ಯ ಶಿಕ್ಷಕಿ ರಾಜ್ಯ ಪ್ರಶಸ್ತಿ ಪುರಸ್ಕೃತೆ ರತ್ನಕುಮಾರಿ ಮತ್ತು ತಾಲ್ಲೂಕು, ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿರುವ ಅಂಬಿಕಾ, ಸಹ ಶಿಕ್ಷಕರಾದ ದಿನೇಶ್, ಶಶಿಕಲಾ, ಶೋಭಾ, ಹಾಗೂ ರಿಪ್ಪನ್‌ಪೇಟೆಯ ನಿವೃತ್ತ ಪ್ರಾಂಶುಪಾಲ ಎಂ.ಎಸ್.ಕೃಷ್ಣಮೂರ್ತಿ ಗುರುಗಳಿಗೆ ಪಾದ ಪೂಜೆಯೊಂದಿಗೆ ಗೌರವ ಸಮರ್ಪಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮೋರ್ಚಾದ ಮಂಡಲ ಅಧ್ಯಕ್ಷೆ ಆಶಾ ರವೀಂದ್ರ ವಹಿಸಿದ್ದರು.

ಜಿಲ್ಲಾ ಮಹಿಳಾ ಮೋರ್ಚಾ ಖಜಾಂಚಿ ಪದ್ಮಸುರೇಶ್, ಕಾರ್ಯದರ್ಶಿ ಲೀಲಾ ಉಮಾಶಂಕರ್, ಗ್ರಾಮ ಪಮಚಾಯ್ತಿ ಮಾಜಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಜಿಲ್ಲಾ ಓಬಿಸಿ ಮೋರ್ಚಾ ಸದಸ್ಯೆ ರೇಖಾ ರವಿ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ನಾಗರತ್ನ ದೇವರಾಜ್, ಮಹಿಳಾ ಮೋರ್ಚಾ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ಶ್ರೀನಿವಾಸ್, ಮೀನಾಕ್ಷಿ, ಮಂಗಳ, ಸುಮಿತ್ರ, ಗುಲಾಬಿ, ಇನ್ನಿತರ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.