ರಿಪ್ಪನ್ಪೇಟೆ : ಸಮುದಾಯವನ್ನು ಆಭಿವೃದ್ದಿಗೊಳಿಸುವ ಕಾರ್ಯಕ್ಕೆ ಯುವ ಜನತೆ ಮುಂದಾಗಬೇಕು. ಸಮಾಜವನ್ನು ಆರ್ಥಿಕವಾಗಿ ಗಟ್ಟಿಗೊಳಿಸುವ ಮೂಲಕ ಸಮಾಜದಲ್ಲಿ ಒಗ್ಗಟಿನಿಂದ ಗಟ್ಟಿಗೊಳಿಸುವುದರೊಂದಿಗೆ ಸಂಘಟನೆಗೊಳ್ಳ ಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದರು.
ರಿಪ್ಪನ್ಪೇಟೆಯ ವಿಶ್ವಮಾನವ ಸಭಾಭವನದಲ್ಲಿ ತಾಲ್ಲೂಕು ಗಂಗಾಮತಸ್ಥರ ಸಮಾಜ ಹಾಗೂ ತಾಲ್ಲೂಕು ಗಂಗಾಮತಸ್ಥರ ನೌಕರರ ಕ್ಷೇಮಾಭಿವೃದ್ದಿ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ 2023-24 ಹಾಗೂ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ. ಹೆಚ್ಚು ಅಂಕ ಪಡೆದು ತೇರ್ಗಡೆಯಾದ ಪ್ರತಿಭಾವಂತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಮಾಜ ಬಾಂಧವರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಸಮಾಜ ಹಿಂದುಳಿದರೆ ಅದನ್ನು ಮುಂಚೂಣಿಗೆ ತರುವ ಕಾರ್ಯವನ್ನು ಮಾಡುವುದು ಸಮುದಾಯದವರ ಕಾರ್ಯ ಕೀಳರಿಮೆ ಬಿಟ್ಟು ಸಮಾಜದ ಶ್ರೆಯೋಭಿವೃದ್ದಿಗೆ ಶ್ರಮಿಸುವಂತಾಗಿ ತಮ್ಮ ಸಮಾಜಕ್ಕೆ ಸಭಾಭವನಕ್ಕೆ ಜಾಗ ಕೇಳಿದ್ದೀರಿ ಎಲ್ಲಿ ಎಂಬುದನ್ನು ಗಟ್ಟಿ ಮಾಡಿಕೊಂಡು ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಸರ್ಕಾರದ ಮಟ್ಟದಲ್ಲಿ ಮಂಜೂರು ಮಾಡಿಸುವ ಮೂಲಕ ಸಭಾಭವನ ನಿರ್ಮಾಣಕ್ಕೆ ಆರ್ಥಿಕ ನೆರವು ಕೊಡಿಸುವ ಭರವಸೆ ನೀಡಿ, ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದೇ ಕಷ್ಟದಲ್ಲಿ ಶಾಲೆಗೆ ಹೋಗದೆ ಇರುವ ಮಗು ನನ್ನ ಬಳಿ ಬಂದರೆ ಆವರ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಹೇಳಿದರು.

ಹೊಸನಗರ ತಾಲ್ಲೂಕು ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ ಹೆಚ್.ಬಿ.ಚಿಂದಬರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಿಗುವ ಅಭಿವೃದ್ದಿ ಅವಕಾಶಗಳನ್ನು ಬಳಸಿ ಸಮಾಜದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದು ಹೇಳಿ, ವಿದ್ಯಾರ್ಥಿಗಳ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಪ್ರತಿ ವರ್ಷ ಪ್ರತಿಭಾ ಪುರಸ್ಕಾರವನ್ನು ಕಳೆದ ನಾಲ್ಕೈದು ವರ್ಷದಿಂದ ನಡೆಸಿಕೊಂಡು ಬರುತ್ತಿದ್ದೇವೆ. ಇದನ್ನು ಕೆಲವರು ಹಿಂದಿನಿಂದ ಅಪಪ್ರಚಾರ ಮಾಡುವ ಮೂಲಕ ಹಣ ಎಲ್ಲಿಂದ ಬಂತು? ಎಂಬುದರ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಆದರೆ ಹಣ ಎಲ್ಲಿಂದ ಬಂತು? ಹೇಗೆ ಸಂಗ್ರಹಿಸಿದರು? ಎಂಬುದು ಮುಖ್ಯವಾಗದೆ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಮಾಜ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಪದವಿ ಪರೀಕ್ಷೆಯಲ್ಲಿ ಶೇ. 80 ಕ್ಕಿಂತ ಹೆಚ್ಚು ಅಂಕಗಳಿಸಿ ತೇರ್ಗಡೆಯಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದ್ದು ಮುಂದಿನ ವರ್ಷದಿಂದ ಶೇ. 75 ಕ್ಕಿಂತ ಹೆಂಚು ಅಂಕ ಪಡೆದವರಿಗೂ ಈ ಸೌಲಭ್ಯವನ್ನು ಕಲ್ಪಿಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಹೇಳಿದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ಹೊಸನಗರ ತಾಲ್ಲೂಕು ಗಂಗಾಮತಸ್ಥರ ಸಮಾಜದ ಅಧ್ಯಕ್ಷ ಉಮೇಶ ಕೆ.ವೈ.ಕಾಳೇಶ್ವರ ವಹಿಸಿದ್ದರು.
ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಶಿವಮೊಗ್ಗ ಜಿಲ್ಲಾ ಗಂಗಾಮತಸ್ಥರ ಸಮಾಜದ ಜಿಲ್ಲಾಧ್ಯಕ್ಷ ಡಿ.ಬಿ.ಕೆಂಚಪ್ಪ, ಜಿಲ್ಲಾ ಗಂಗಾಮತಸ್ಥರ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಚಂದ್ರಶೇಖರ್, ಗಂಗಾಮತಸ್ಥರ ಸಮಾಜದ ಗೌರವಾಧ್ಯಕ್ಷ ರುಕ್ತೇಶ್ ಚಂದಳ್ಳಿ, ಗಂಗಾಮತಸ್ಥರ ತಾಲ್ಲೂಕು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಗಂಗಾಧರ,ಕೆ, ಗಂಗಾಮತಸ್ಥರ ತಾಲ್ಲೂಕು ನೌಕರರ ಕ್ಷೇಮಭಿವೃದ್ದಿ ಸಂಘದ ಗೌರವಾಧ್ಯಕ್ಷ ಅಧ್ಯಕ್ಷ ಎಂ.ಹೆಚ್.ಪಾಂಡುರಂಗ, ಸಮಾಜದ ಮುಖಂಡರಾದ ಬಾಲಚಂದ್ರ, ನಾಗೇಂದ್ರ ಹುಳಿಗದ್ದೆ, ಹಾಲೇಶಪ್ಪ, ಓಂಕೇಶ ಕೆಂಚನಾಲ, ರಮೇಶ್ ಅರಳಿಕೊಪ್ಪ, ಹೂವಪ್ಪ, ಮಂಜುನಾಥ್ ಬ್ಯಾಣದ, ಪಾಂಡುರಂಗ ಮಾದಾಪುರ, ಇಂದ್ರೇಶ್, ವಾದಾವತಿ, ಎಂ.ಹೆಚ್.ಸತ್ಯನಾರಾಯಣ, ಆನಂದ, ನಾಗೇಶ ಚಂದಳ್ಳಿ, ವಿನೋಧ ಹಿರಿಯಣ್ಣ, ಶಶಿಕಲಾ ಭೀಮರಾಜ್, ಗುರುಮೂರ್ತಿ, ರಮ್ಯ ಶಶಿಕುಮಾರ್ ಇನ್ನಿತರ ಸಮಾಜ ಬಾಂಧವರು ಹಾಜರಿದ್ದರು.
ಪ್ರಾಸ್ತಾವಿಕವಾಗಿ ಕೆ.ವೈ.ಉಮೇಶ್ ಮಾತನಾಡಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.