ಶಕ್ತಿ ಯೋಜನೆಯ ಸಾಧನೆ: ಸಾಗರ ಡಿಪೋ ಚಾಲಕರಿಗೆ ಶಾಸಕರಿಂದ ಸನ್ಮಾನ!

Written by Koushik G K

Published on:

ಸಾಗರ: ಕರ್ನಾಟಕ ಸರ್ಕಾರ ಜಾರಿಗೆ ತಂದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ ರಾಜ್ಯದಾದ್ಯಂತ ಲಕ್ಷಾಂತರ ಮಹಿಳೆಯರು ಉಚಿತ ಬಸ್ ಸೇವೆಗಳನ್ನು ಪಡೆಯುತ್ತಿರುವುದು ಹೆಮ್ಮೆಪಾತ್ರ ಸಂಗತಿ. ಈ ಯೋಜನೆಯು ಮಹಿಳೆಯರಿಗಾಗಿ ಸಮಾಜದಲ್ಲಿ ಸಮಾನ ಅವಕಾಶಗಳನ್ನು ಒದಗಿಸುವಲ್ಲಿ ದಿಕ್ಕು ತೋರಿಸುತ್ತಿದೆ. ಈ ಸ0ದರ್ಭದಲ್ಲಿ ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಶಕ್ತಿ ಯೋಜನೆಯ ಯಶಸ್ಸಿಗೆ ಕಾರಣರಾದ ಬಸ್ ಚಾಲಕರು ಮತ್ತು ನಿರ್ವಾಹಕರನ್ನು ಸಾಗರ KSRTC ಬಸ್ ನಿಲ್ದಾಣದಲ್ಲಿ ಗೌರವಿಸಿ ಸನ್ಮಾನಿಸಿದರು.

WhatsApp Group Join Now
Telegram Group Join Now
Instagram Group Join Now

ಶಾಸಕರು ಮಾತನಾಡುತ್ತಾ, “2023ರ ಜೂನ್ 11 ರಂದು ಶಕ್ತಿ ಯೋಜನೆ ಜಾರಿಗೆ ಬಂದು, ಕೇವಲ ಎರಡು ವರ್ಷಗಳಲ್ಲಿ ರಾಜ್ಯದಾದ್ಯಂತ 500 ಕೋಟಿ ಉಚಿತ ಟಿಕೆಟ್‌ಗಳನ್ನು ಮಹಿಳೆಯರಿಗೆ ವಿತರಣೆ ಮಾಡಿರುವುದು ಅಭೂತಪೂರ್ವ ಸಾಧನೆ,” ಎಂದು ಹೇಳಿದರು. ಶಕ್ತಿ ಯೋಜನೆಯ ಈ ಸಾಧನೆ ಸರ್ಕಾರದ ಮಹಿಳಾ ಸಬಲೀಕರಣ ನಿಲುವಿಗೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಸಮಿತಿ, ಸಾಗರ ಆಯೋಜಿಸಿತ್ತು. ಶಾಸಕರಿಂದ ಅಭಿನಂದನೆ ಪಡೆದ ಚಾಲಕರು ಹಾಗೂ ನಿರ್ವಾಹಕರು ತಮ್ಮ ಸೇವೆಯನ್ನು ಸರ್ಕಾರ ಮತ್ತು ಜನತೆಗೆ ಮೀಸಲಿಟ್ಟಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ಮಲೆನಾಡಿನಲ್ಲೂ ಈ ಯೋಜನೆಯು ಬಲವಾಗಿ ಜಾರಿಯಾಗಿದ್ದು, ಸಾವಿರಾರು ಮಹಿಳೆಯರು ಪ್ರತಿದಿನವೂ ಅದರ ಲಾಭ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆಯಂತಹ ಜನಪರ ಯೋಜನೆಗಳು ಗ್ರಾಮೀಣ ಪ್ರದೇಶದ ಮಹಿಳೆಯರ ಸಂಚಾರ ಸುರಕ್ಷತೆ ಮತ್ತು ಸ್ವಾತಂತ್ರ್ಯವನ್ನು ಹೆಚ್ಚಿಸಲು ಮಾರ್ಗದರ್ಶಕವಾಗುತ್ತವೆ.ಸಾಗರ ಡಿಪೋದಿಂದ 1 ಕೋಟಿ 4 ಲಕ್ಷ ಜನ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ.

ಅಧಿಕಾರಿಗಳ ವಿರುದ್ಧ ಏಕವಚನದಲ್ಲಿ ನಿಂದಿಸುವ ಜ್ಞಾನೇಂದ್ರರ ಧೋರಣೆ ಕೆಟ್ಟದಾಗಿದೆ : ಕಿಮ್ಮನೆ ರತ್ನಾಕರ್

Leave a Comment