ಹೊಸನಗರ ; ವಾರಸುದಾರರ ಹಕ್ಕು ಬದಲಾವಣೆಯಾಗದಿರುವ ಪಹಣಿಗಳ ಇ-ಪೌತಿ ಅಭಿಯಾನವನ್ನು ಹೊಸನಗರ ತಾಲ್ಲೂಕಿನಾದ್ಯಂತ ಕಳೆದೊಂದು ವಾರದಿಂದ ಆರಂಭಿಸಿರುವುದಾಗಿ ತಹಸೀಲ್ದಾರ್ ರಶ್ಮಿ ಹಾಲೇಶ್ ಹೇಳಿದರು.
ಅವರು ತಾಲ್ಲೂಕು ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆದೇಶದಂತೆ ಮರಣ ಹೊಂದಿದ ಖಾತೆದಾರರ ಹೆಸರನ್ನು ತೆಗೆದು ಅದರ ಕಾನೂನು ಬದ್ದ ವಾರಸುದಾರರಿಗೆ ಹೆಸರನ್ನು ಸೇರಿಸಲು ಅವಕಾಶ ಕಲ್ಪಿಸಲಾಗಿದ್ದು ರೈತರು ಇದರ ಅನುಕೂಲವನ್ನು ಪಡೆದುಕೊಳ್ಳಬೇಕೆಂದರು.
ಇ-ಪೌತಿ ಮಾಡಿಸಲು ಮೃತರ ಖಾತೆದಾರರ ಮರಣ ಪ್ರಮಾಣಪತ್ರ, ಕುಟುಂಬದ ವಂಶವೃಕ್ಷ, ಆಧಾರ್ ಕಾರ್ಡ್, ಪಹಣಿಯೊಂದಿಗೆ ಸಂಬಂಧಿಸಿದ ಗ್ರಾಮ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದರು.
ಸರಿಪಡಿಸಿಕೊಳ್ಳದ ಪಹಣಿ ಮೇಲೆ ಬೆಳೆವಿಮೆ, ಪಿ.ಎಂ ಕಿಸಾನ್ ಯೋಜನೆ, ಬೀಜ-ಗೊಬ್ಬರ, ಮತ್ತು ಇತ್ಯಾದಿ ಸರ್ಕಾರದ ಸೌಲಭ್ಯಗಳು ದೊರಕುವುದಿಲ್ಲ ಇದರ ಜೊತೆಯಲ್ಲಿ ಬ್ಯಾಂಕ್ ಹಾಗೂ ಸೊಸೈಟಿಯಲ್ಲೂ ಸಾಲ ದೊರೆಯುವುದಿಲ್ಲ ಎಂದು ಹೇಳಿದ್ದು ಹೊಸನಗರ ತಾಲ್ಲೂಕಿನ ಎಲ್ಲಾ ಇ-ಪೌತಿ ಖಾತೆದಾರರು ತಕ್ಷಣ ನಿಮಗೆ ಸಂಬಂಧಪಟ್ಟ ಗ್ರಾಮ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಈ ಮುಲಕ ಕೇಳಿಕೊಂಡರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ರಾಕೇಶ್, ಶಿರಾಸ್ಥೆದಾರ್ ಕಟ್ಟೆ ಮಂಜುನಾಥ್, ಸುಧೀಂದ್ರ ಕುಮಾರ್, ಪ್ರಥಮ ದರ್ಜೆ ಗುಮಾಸ್ಥರಾದ ಚಿರಾಗ್, ರಾಘವೇಂದ್ರ, ಗ್ರಾಮ ಆಡಳಿತಾಧಿಕಾರಿ ಲೋಹಿತ್, ರೇಣುಕಯ್ಯ, ನವೀನ್, ಸಿದ್ದಪ್ಪ, ಬಸವರಾಜ್
ಮತ್ತಿತರರು ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.