ಶಿವಮೊಗ್ಗದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ: ಮೂವರು ಗಾಯ, ಮನೆಗೆ ಭಾರಿ ಹಾನಿ

Written by Koushik G K

Published on:

ಶಿವಮೊಗ್ಗ :ಶರಾವತಿ ನಗರದಲ್ಲಿರುವ ಸುನ್ನಿ ಮಾಸ್ಜಿದ್ ಏ ಶೆಹ್‌ಜಾದಿ ಅಸ್ಗರ್ ಮಸೀದಿ ಹತ್ತಿರದ ಓಣಿಯಲ್ಲಿರುವ ಪೀರಾನ್ ಸಾಬ್ ಅವರ ಮನೆಯಲ್ಲಿ ಇಂದು ಸಂಜೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಘಟನೆ ಸಂಭವಿಸಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸಿಗಂದೂರು ಭಕ್ತ ಮಂಡಳಿಯಿಂದ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ: ಸಚಿವರ ಹೇಳಿಕೆಯನ್ನು ತಿರುಚಿ ಭಕ್ತರ ಭಾವನೆ ಕೆರಳಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯ

ಸ್ಫೋಟದ ಪರಿಣಾಮ ಮನೆಮಾಲೀಕ ಎಂ.ಬಿ. ಪೀರಾನ್ ಸಾಬ್ (48), ಅವರ ಪತ್ನಿ ಸಾಹೇರಾ (40) ಮತ್ತು ಸೊಸೆ ಜಯೇಬಾ (22) ಗಾಯಗೊಂಡಿದ್ದಾರೆ. ಮೂವರನ್ನೂ ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೀರಾನ್ ಸಾಬ್ ಅವರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಸ್ಫೋಟದ ಶಬ್ದದಿಂದ ಸುತ್ತಮುತ್ತಲಿನ ನಿವಾಸಿಗಳು ತೀವ್ರ ಭೀತಿಗೆ ಒಳಗಾದರು. ಸಿಲಿಂಡರ್ ಸ್ಫೋಟದಿಂದ ಮನೆಯ ಛಾವಣಿ ಸಂಪೂರ್ಣವಾಗಿ ಹಾರಿ ಹೋಗಿದ್ದು,ಭಾರಿ ಹಾನಿಯಾಗಿದೆ.

ಘಟನೆಯ ಕುರಿತು ಮಾತನಾಡಿದ ಗಾಯಾಳುಗಳು, “ಮನೆಯ ಮುಂದೆ ಕುಳಿತಿದ್ದಾಗ ಬೆಂಕಿ ಕಾಣಿಸಿಕೊಂಡಿತು; ಕೆಲವೇ ಕ್ಷಣದಲ್ಲಿ ಸ್ಫೋಟವಾಯಿತು,” ಎಂದು ತಿಳಿಸಿದ್ದಾರೆ. ಪೀರಾನ್ ಸಾಬ್ ಅವರ ದೇಹದ ಹೆಚ್ಚಿನ ಭಾಗಗಳು ಸುಟ್ಟಿದ್ದು, ತೀವ್ರ ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಕೂಡಲೇ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಿಯಂತ್ರಿಸಿದರು ಹಾಗೂ ಪರಿಸ್ಥಿತಿ ಪರಿಶೀಲಿಸಿದರು. ಘಟನೆ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರೆಸಿದ್ದಾರೆ.

lpg gas blast in shivamogga

Leave a Comment