ಕೊಳವಳ್ಳಿ ಹಾಲಪ್ಪಗೌಡ ನಿಧನ !

Written by Mahesh Hindlemane

Published on:

ರಿಪ್ಪನ್‌ಪೇಟೆ ; ಹೆದ್ದಾರಿಪುರ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಕೊಳವಳ್ಳಿ ಪ್ರಗತಿಪರ ರೈತ ಹಾಲಪ್ಪಗೌಡ (95) ಅನಾರೋಗ್ಯದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಶಿವಮೊಗ್ಗದ ಖಾಸಗಿ ಅಸ್ಪತ್ರೆಯಲ್ಲಿ ನಿಧನ ಹೊಂದಿದರು.

WhatsApp Group Join Now
Telegram Group Join Now
Instagram Group Join Now

ಮೃತರು ಪತ್ನಿ, ಮೂರು ಪುತ್ರಿಯರು, ನಾಲ್ವರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಳವಳ್ಳಿ ಗ್ರಾಮದ ತಮ್ಮ ಜಮೀನಿನಲ್ಲಿ ವೀರಶೈವ ಲಿಂಗಾಯಿತ ಪದ್ದತಿಯಂತೆ ಶುಕ್ರವಾರ ಬೆಳಗ್ಗೆ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

ಸಂತಾಪ ;

ವೀರಶೈವ ಸಮಾಜದ ಹಿರಿಯ ಕೊಳವಳ್ಳಿ ಹಾಲಪ್ಪಗೌಡರವರ ನಿಧನಕ್ಕೆ ಆನಂದಪುರ ಮುರುಘಾರಾಜೇಂದ್ರಮಠದ ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿ, ಕೋಣಂದೂರು ಬೃಹನ್ಮಠದ ಶ್ರೀಪತಿಪಂಡಿತಾರಾಧ್ಯಶಿವಾಚಾರ್ಯ ಸ್ವಾಮಿಜಿ, ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಜಿ, ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಜಿ, ರಿಪ್ಪನ್‌ಪೇಟೆ ವೀರಶೈವ ಸಮಾಜದ ಅಧ್ಯಕ್ಷ ಡಾ.ಕೆ.ಬಿ.ಕಮಲಾಕ್ಷಶ್ವರಪ್ಪ, ಸಮಾಜ ಭಾಂದವರು ತೀವ್ರ ಸಂತಾಪ ವ್ಯಕ್ತಪಡಿಸಿ, ಭಗವಂತ ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕರುಣಿಸಲೆಂದು ಕೋರಿದ್ದಾರೆ‌.

Leave a Comment