ಬಾಳೆಹೊನ್ನೂರು : ಭದ್ರಾ ನದಿಯಲ್ಲಿ ವ್ಯಕ್ತಿ ಬಿದ್ದು ಪ್ರಾಣಾಪಾಯ – ETF ತಂಡದಿಂದ ರಕ್ಷಣಾ ಕಾರ್ಯ

Written by Koushik G K

Published on:

Balehonnuru:ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಭದ್ರಾ ನದಿಯಲ್ಲಿ ವ್ಯಕ್ತಿಯೊಬ್ಬರು ಜಾರಿ ಬಿದ್ದು ಪ್ರಾಣಾಪಾಯಕ್ಕೆ ಒಳಗಾದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ. ಜೀವಕ್ಕಾಗಿ ಹೋರಾಡುತ್ತಿದ್ದ ವ್ಯಕ್ತಿಯು ನದಿಯ ಮಧ್ಯಭಾಗದಲ್ಲಿದ್ದ ಮರದ ಕೊಂಬೆ ಹಿಡಿದು ನಿಂತಿದ್ದ. “ಕಾಪಾಡಿ, ಕಾಪಾಡಿ!” ಎಂದು ಕೂಗುತ್ತಿದ್ದ ಅವರು ಕಂಡು ಬಂದ ಸ್ಥಳೀಯರು ,ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ETF (Elephant task force)ತಂಡಕ್ಕೆ ಗೊತ್ತಾಗಿದೆ .

WhatsApp Group Join Now
Telegram Group Join Now
Instagram Group Join Now

ಘಟನೆ ನಡೆದ ಸ್ಥಳಕ್ಕೆ ಗಸ್ತಿನಲ್ಲಿದ್ದ ETF ತಂಡದ ಅಭಿಜಿತ್ ತ್ವರಿತವಾಗಿ ಸ್ಪಂದನೆ ನೀಡಿ ತಕ್ಷಣವೇ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ .ಸ್ಥಳೀಯ ಸರ್ಪ ತಜ್ಞ ಅಲ್ಬೆರ್ಟ್ ಕೋಬ್ರಾ ಅವರನ್ನು ಸಂಪರ್ಕಿಸಿ ನಂತರ ETF ತಂಡದ NR ಪುರ ಘಟಕ ಸೂಕ್ತ ಸಾಧನಗಳೊಂದಿಗೆ ರಕ್ಷಣಾ ಕಾರ್ಯ ಆರಂಭಿಸಿತು.

ತೀವ್ರ ಮಳೆ ಹಾಗು ನದಿ ಪ್ರವಾಹದ ವೇಗದ ಕಾರಣದಿಂದಾಗಿ ಕಾರ್ಯಾಚರಣೆ ಸವಾಲಿನದಾಗಿತ್ತು ಆದರೂ, ಸ್ಥಳೀಯರ ಸಹಕಾರ ಹಾಗೂ ETF ತಂಡದ ಸಮರ್ಥ ನಿರ್ವಹಣೆಯಿಂದ ವ್ಯಕ್ತಿಯನ್ನು ಯಶಸ್ವಿಯಾಗಿ ನದಿಯಿಂದ ರಕ್ಷಣೆ ಮಾಡಲಾಯಿತು.

ರಕ್ಷಿತ ವ್ಯಕ್ತಿಯ ಹೆಸರು ಹಾಗೂ ಮೂಲ ಸ್ಥಳದ ವಿವರಗಳು ಇನ್ನಷ್ಟೇ ಪತ್ತೆಯಾಗಬೇಕಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದ , ETF ತಂಡದ ಕಾರ್ಯನಿರ್ವಹಣೆಗೆ ಮೆಚ್ಚುಗೆಗೂ ಕಾರಣವಾಗಿದೆ.

ರಕ್ಷಣಾ ಕಾರ್ಯದ ರೋಚಕ ವಿಡಿಯೋ ಇಲ್ಲಿದೆ

etf rescued man starined in bhadra

Leave a Comment