ರಿಪ್ಪನ್‌ಪೇಟೆಯಲ್ಲಿ ಕಾರ್ಗಿಲ್ ವಿಜಯೋತ್ಸವ

Written by Mahesh Hindlemane

Published on:

ರಿಪ್ಪನ್‌ಪೇಟೆ ; ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಹಿಂದೂ ಸಂಘಟನೆಯವರು  ವಿನಾಯಕ ವೃತ್ತದಲ್ಲಿ ಹುತಾತ್ಮ ಯೋಧರಿಗೆ ಪುಷ್ಪಾ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.

WhatsApp Group Join Now
Telegram Group Join Now
Instagram Group Join Now

ಪಿಎಸ್‌ಐ ರಾಜುರೆಡ್ಡಿ ಬೆನ್ನೂರು ಮಾತನಾಡಿ, ದೇಶ ಮತ್ತು ದೇಶವಾಸಿಗಳ ರಕ್ಷಣೆಗಾಗಿ ತಮ್ಮ ಅಮೂಲ್ಯ ಜೀವನನ್ನೇ ತ್ಯಾಗ ಮಾಡಿದ ಹಾಗೂ 26 ಕಾರ್ಗಿಲ್ ವಿಜಯೋತ್ಸವದ  ಅಂಗವಾಗಿ ಆಚರಿಸಲಾಗುವ ಈ ಸಂಭ್ರಮ ದೇಶಾಭಿಮಾನ ಸೈನಿಕರ ಗೌರವದ ಸಂಕೇತವಾಗಿದೆ ಎಂದು ಹೇಳಿ, ಹುತಾತ್ಮ ಸೈನಿಕರ ಭಾವಚಿತ್ರಕ್ಕೆ ಪುಷ್ಪಾಗೌರವ ಸಲ್ಲಿಸಿ ಸಶಸ್ತ್ರ ಪಡೆಗಳ ನಿರಂತರ ದೈರ್ಯ ಮತ್ತು ಸಮರ್ಪಣೆ, ರಾಷ್ಟ್ರೀಯ ಒಗ್ಗಟ್ಟು ಸೇವೆ ಮತ್ತು ಶಾಂತಿಯ ಮೌಲ್ಯಗಳು ಮತ್ತು ಭಾರತವನ್ನು ಸುರಕ್ಷಿತವಾಗಿಡುವ ನಿಜ ಜೀವನದ ವೀರರನ್ನು ನೆನಪಿಸಿಕೊಳ್ಳುವ ಮಹಾತ್ಮರ ದಿನವಾಗಿದೆ ಎಂದರು.

ಹಿಂದೂ ಜಾಗರಣ ವೇದಿಕೆ ಮುಖಂಡ ದೇವರಾಜ್ ಕೆರೆಹಳ್ಳಿ ಮಾತನಾಡಿ, ಕಾರ್ಗಿಲ್ ವಿಜಯೋತ್ಸವವು ಇಡೀ ಭಾರತೀಯರಿಗೆ ಹೆಮ್ಮೆಯ ದಿನವೂ ಹೌದು ಅದರ ಜೊತೆಗೆ ವೀರಯೋಧರನ್ನು ಕಳೆದುಕೊಂಡ ನೋವು ಇದೆ. ಈ ಯುದ್ದ ಸೌರಭ್ ಕಾಲಿಯಾ ವಿಕ್ರಮ್ ಭಾತ್ರ, ಜಸ್ವಂದರ್‌ಸಿಂಗ್, ಮನೋಜ್‌ಕುಮಾರ್ ಪಾಂಡೆಯವರಂತ 527 ವೀರಕಲಿಗಳನ್ನು ಕಳೆದುಕೊಂಡಿದ್ದೇವೆ ಈ ದಿನ ಅಂತಹ ಎಲ್ಲ ವೀರ ಯೋಧರ ಧೈರ್ಯವನ್ನು ಅವರ ಕುಟುಂಬಗಳ ತ್ಯಾಗವನ್ನು ಪ್ರತಿಯೊಬ್ಬರು ನೆನವು ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಕರ್ನಾಟಕ ಪ್ರಾಂತೀಯ ಹಿಂದು ಮಹಾಸಭಾ ಅಧ್ಯಕ್ಷ ಪಿ.ಸುಧೀರ್, ಕಾರ್ಯದರ್ಶಿ ಮುರುಳಿ, ಆರ್.ಎಸ್.ಎಸ್. ತಾಲ್ಲೂಕು ಸಹಕಾರ್ಯನಿರ್ವಾಹಕ ಕಾರ್ತೀಕ್ ಪ್ರಮುಖರಾದ ಮೆಣಸೆ ಆನಂದ, ಸುಂದರೇಶ್, ಪದ್ಮಾ ಸುರೇಶ, ನಾಗರತ್ನ ದೇವರಾಜ್, ರಾಘವೇಂದ್ರ, ಮಂಜುನಾಥ, ಲೋಹಿತ್, ಗಣೇಶ್, ಉದಯ, ಶಶಿಧರ, ರೇಖಾ, ರಮೇಶ, ಮಹಮದ್‌ಹುಸೇನ್, ಇನ್ನಿತರ ಹಲವರು ಪಾಲ್ಗೊಂಡಿದ್ದರು.


ರಿಪ್ಪನ್‌ಪೇಟೆ: ಕಾರ್ಗಿಲ್ ವಿಜಯ ದಿವಸ – ನಿವೃತ್ತ ಯೋಧರಿಗೆ ಗೌರವ ಸಮರ್ಪಣೆ

ರಿಪ್ಪನ್‌ಪೇಟೆ : 1999ರ ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜೇತವಾಗಿ ತನ್ನ ಶೌರ್ಯವನ್ನು ಸಾಬೀತುಪಡಿಸಿದ ಸ್ಮರಣಾರ್ಥವಾಗಿ ಪ್ರತಿ ವರ್ಷ ಜುಲೈ 26ರಂದು ಆಚರಿಸುವ ಕಾರ್ಗಿಲ್ ವಿಜಯ ದಿವಸವನ್ನು ಶ್ರದ್ಧಾ, ಗೌರವ ಹಾಗೂ ದೇಶಭಕ್ತಿಯ ನೋಟದಲ್ಲಿ ರಿಪ್ಪನ್‌ಪೇಟೆಯಲ್ಲಿ ಆಚರಿಸಲಾಯಿತು.

ಈ ಅಂಗವಾಗಿ ಭಾರತೀಯ ಸೇನೆಯಲ್ಲಿ ಅಪಾರ ಸೇವೆ ಸಲ್ಲಿಸಿ ನಿವೃತ್ತಿಯಾದ ರಿಪ್ಪನ್‌ಪೇಟೆಯ ಹೆಮ್ಮೆಯ ಯೋಧರಾದ  ರಾಘವೇಂದ್ರ ಆಚಾರ್, ಅಜಯ್ ಹಾಗೂ ಕಲ್ಲೂರಿನ ವೀರಭದ್ರಪ್ಪ ಗೌಡ ಇವರ ಮನೆಗೆ ಸ್ಥಳೀಯ ಮುಖಂಡರು ಭೇಟಿ ನೀಡಿ ಅವರನ್ನು ಗೌರವಿಸಿದರು.

ಭದ್ರತಾ ಪಡೆಗಳಲ್ಲಿ ಸೇವೆ ಸಲ್ಲಿಸುವುದು ಕೇವಲ ಉದ್ಯೋಗವಲ್ಲ, ಅದು ದೇಶದ ಸೇವೆಯ ಮಹಾ ಪವಿತ್ರ ಕರ್ತವ್ಯ. ಈ ಯೋಧರು ರಾಷ್ಟ್ರಕ್ಕಾಗಿ ತಮ್ಮ ಜೀವವನ್ನು ಪಣಕ್ಕಿಟ್ಟ ನಿಸ್ವಾರ್ಥ ಶ್ರಮಕ್ಕೆ ಪ್ರಶಂಸೆ ಸಲ್ಲಿಸಿ, ಅವರ ಸಮರ್ಪಣೆಯ ಹಿನ್ನೆಲೆಯನ್ನು ಜನತೆಗೂ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಯೋಧರ ಸೇವಾ ಕಾಲದ ಅನುಭವ, ಹೋರಾಟಗಳು, ಸೈನಿಕ ಜೀವನದ ಸವಾಲುಗಳು ಹಾಗೂ ಅವರು ಕಂಡ ಪಾಠಗಳನ್ನು ಅವರಿಂದಲೇ ಆಲಿಸಲಾಯಿತು. ಈ ಸಂದರ್ಶನವು ಯುವಜನತೆಗೆ ಸ್ಪೂರ್ತಿದಾಯಕವಾಗಿತ್ತು.

ಅವರ ಸೇವೆಗೆ ಗುರುತಾಗಿ  ಶಾಲು ಮತ್ತು ಪುಷ್ಪಗುಚ್ಛ ನೀಡಿ ವಿಶೇಷ ಗೌರವ ಸಲ್ಲಿಸಲಾಯಿತು. ಇವರ ತ್ಯಾಗ ಹಾಗೂ ಶ್ರೇಷ್ಠತೆಯ ಕುರಿತಾಗಿ ಕಾರ್ಯಕ್ರಮದ ಪ್ರಮುಖರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಎಂ.ಬಿ. ಮಂಜುನಾಥ್, ಅವರು ಮಾತನಾಡುತ್ತಾ, “ಈ ಮಣ್ಣಿನಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಸೈನಿಕರು ನಮ್ಮ ನಿಜವಾದ ರತ್ನಗಳು. ಅವರ ಸೇವೆಗೆ ನವೀನ ಪೀಳಿಗೆಯು ಸ್ಮರಣೆ ಸಲ್ಲಿಸಬೇಕಿದೆ,” ಎಂದು ಹೇಳಿದರು.

ಸುಧೀರ್,ರಾಮು ಬಳೆಗಾರ್, ಯುವ ಮೋರ್ಚಾ ತಾಲೂಕು ಕಾರ್ಯದರ್ಶಿ ಮುರುಳಿ ಕೆರೇಹಳ್ಳಿ, ಹೋಬಳಿ ಅಧ್ಯಕ್ಷ ರಾಜೇಂದ್ರ ಘಂಟೆ, ಸದಸ್ಯ ಹರೀಶ್ ಮತ್ತು ಇತರ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Leave a Comment