ಬಿಜೆಪಿ ಸಂಘಟನಾ ಶಕ್ತಿಯಿಂದ ದೇಶ ಅಭಿವೃದ್ಧಿ ಪಥದಲ್ಲಿ ; ಡಾ.ಧನಂಜಯ ಸರ್ಜಿ

Written by malnadtimes.com

Published on:

Hosanagara | ವಿಧಾನ ಪರಿಷತ್ ಚುನಾವಣೆಗಳಲ್ಲಿ (Legislative Council Election) ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿ ತಾವು ಗೆಲ್ಲುವು ವಿಶ್ವಾಸ ಹೊಂದಿದ್ದೇನೆ ಎಂದು ವಿಧಾನಪರಿಷತ್ ಚುನಾವಣೆ ಮೈತ್ರಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ (Dr. Dhananjaya Sarji) ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಸೀತಾರಾಮ ಸಭಾಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದ ಉದ್ದಗಲಕ್ಕೂ ಭೇಟಿ ನೀಡಿದ್ದೇನೆ. ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ರಾಜಕೀಯ ವಿರೋಧಿಗಳು ಕಡೆಯ ಅಸ್ತ್ರವಾಗಿ ಅಪಪ್ರಚಾರಕ್ಕೆ ಕೈ ಹಾಕಿದ್ದಾರೆ. ಆದರೆ ಮತದಾರರು ಪ್ರಜ್ಞಾವಂತರಿದ್ದು, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ತಮ್ಮ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಭೋಜೇಗೌಡರ ಗೆಲುವು ನಿಶ್ಚಿತ ಎಂದರು.

ಕಾರ್ಯಕರ್ತರ ಸಂಘಟನೆಯೇ ಬಿಜೆಪಿಯ ಶಕ್ತಿ. ಸದೃಢ ಸಂಘಟನೆಯ ಫಲವಾಗಿಯೇ ಇಂದು ಭಾರತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಸಿಎಎ ಜಾರಿ, 370ನೇ ವಿಧಿ ರದ್ದತಿಯಂತಹ ಮಹತ್ವದ ತೀರ್ಮಾನಗಳು ಜಾರಿಗೊಂಡಿವೆ ಎಂದರು.

ಡಾ.ಧನಂಜಯ ಸರ್ಜಿ
ಡಾ.ಧನಂಜಯ ಸರ್ಜಿ

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇದೆಯಾ ಎನ್ನುವ ಪ್ರಶ್ನೆ ಮೂಡುತ್ತಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾಂಗ್ರೆಸ್ ಮುಖಂಡರಿಗೆ ಅಧಿಕಾರ ಬೇಕಿತ್ತು. ಅದು ದೊರಕಿದೆ. ಅದು ಹೊರತುಪಡಿಸಿ ಆಡಳಿತದಲ್ಲಿರುವವರಿಗೆ ಜನಪರ ಕಾಳಜಿ ಕಿಂಚಿತ್ತೂ ಇಲ್ಲ ಎಂದು ಆರೋಪಿಸಿದರು.
ಮಾಜಿ ಶಾಸಕ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಮತ್ತಿಮನೆ ಸುಬ್ರಮಣ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸತೀಶ ಕಾಲಸಸಿ, ಜೆಡಿಎಸ್ ತಾಲೂಕು ಅಧ್ಯಕ್ಷ ವರ್ತೇಶ್ ಮುಖಂಡರಾದ ಗಣಪತಿ ಬೆಳಗೋಡು, ಎಂ.ವಿ.ಜಯರಾಂ, ಗುರುರಾಜ್ ಮಂಜುನಾಥ್ ಸಂಜೀವ, ಮಂಡಾನಿ ಮೋಹನ್, ಶ್ರೀಪತಿರಾವ್, ಎನ್.ಆರ್ ದೇವಾನಂದ್, ಕೋಣೆಮನೆ ಶಿವಕುಮಾರ್ ಸತ್ಯನಾರಾಯಣ ವಿ, ವಿಜಯಕುಮಾರ್ ಮತ್ತಿತರರು ಇದ್ದರು.

Read More

ತೆಂಗಿನ ಸಸಿಗಳನ್ನು ಕಡಿದು ವಿಕೃತಿ ಮೆರೆದ ಕಿಡಿಗೇಡಿಗಳು, ದಾಖಲಾಯ್ತು ದೂರು

Leave a Comment