ಪರಿಶಿಷ್ಟ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಆರೋಪ ; ಚಂದಾಳದಿಂಬ ಗ್ರಾಮಕ್ಕೆ ಅಧಿಕಾರಿಗಳ ತಂಡ ಭೇಟಿ

Written by Mahesh Hindlemane

Updated on:

ರಿಪ್ಪನ್‌ಪೇಟೆ ; ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಂದಾಳದಿಂಬ ಗ್ರಾಮದ ಪರಿಶಿಷ್ಟ ಮೋಚಿ ಜಾತಿಯ ರಂಜಿತಾ ಕೋಂ ಚಂದ್ರ ಇವರ ಕುಟುಂಬದವರಿಗೆ ಗ್ರಾಮ ಪಂಚಾಯ್ತಿಯಿಂದ ಕುಡಿಯುವ ನೀರು ಇನ್ನಿತರ ಮೂಲಭೂತ ಸೌಲಭ್ಯಗಳನ್ನು ನೀಡಬಾರದು ಎಂಬ ಪಂಚಾಯಿತಿ ನಿರ್ಣಯವನ್ನು ಆಧರಿಸಿ ಕುಟುಂಬದ ರಂಜಿತಾರ ಹೇಳಿಕೆಯಂತೆ ಮಲ್ನಾಡ್ ಟೈಮ್ಸ್ ನಲ್ಲಿ ಆ.03 ರಂದು ‘ಪರಿಶಿಷ್ಟ ಜನಾಂಗದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ; ಗಂಭೀರ ಆರೋಪ’ ಎಂಬ ಶೀರ್ಷಿಕೆ ಅಡಿ ಪ್ರಕಟಗೊಂಡ ವರದಿಗೆ ಕೂಡಲೇ ಸ್ಪಂದಿಸಿ ಇಂದು ತಹಸೀಲ್ದಾರ್ ರಶ್ಮಿ ಹಾಲೇಶ್ ಮತ್ತು ತೀರ್ಥಹಳ್ಳಿ ಡಿ.ವೈಎಸ್.ಪಿ. ಅರವಿಂದ ಕಲಗುಜ್ಜಿ, ಹೊಸನಗರ ವೃತ್ತ ನಿರೀಕ್ಷಕ ಗುರಣ್ಣ ಹೆಬ್ಬಾಳ್, ಪಿಎಸ್‌ಐ ರಾಜುರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಲ್ಲೇಶಪ್ಪ, ಸಮಾಜ ಕಲ್ಯಾಣ ಇಲಾಖೆಯ ಹೊಸನಗರ ಸಹಾಯಕ ನಿರ್ದೇಶಕಿ ಗೀತಾ, ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಈ ಜಾಗವು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಚಿದ್ದು ಮತ್ತು ವಿವಾದಿತ ಜಾಗವಾಗಿದೆ. ಭೂಕಬಳಿಕೆ ವ್ಯಾಜ್ಯ ನ್ಯಾಯಾಲಯದಲ್ಲಿರುವ ಕಾರಣದಿಂದಾಗಿ ಪಂಚಾಯ್ತಿಯವರು ಸಾಮಾನ್ಯ ಸಭೆಯಲ್ಲಿ ಪರಿಶಿಷ್ಟ ಜಾತಿ ಮೋಚಿ ಜನಾಂಗದ ರಂಜಿತಾ ಕೋಂ ಚಂದ್ರ ಇವರು ಅಕ್ರಮವಾಗಿ ಗುಡಿಸಲು ಕಟ್ಟಿರುತ್ತಾರೆ. ಈ ಜಾಗದಲ್ಲಿ ಈ ಜನಾಂಗಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವುದಿಲ್ಲ. ಆದರೆ ಪಂಚಾಯ್ತಿಯವರು ನಿರ್ಣಯದಲ್ಲಿ ಮೂಲಭೂತ ಸೌಲಭ್ಯಗಳನ್ನು ನೀಡಬಾರದು ಎಂದು ತಿಳಿಸಿ ಮನೆ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಥಳದ ದಾಖಲಾತಿಗಳನ್ನು ನೀಡಿದಲ್ಲಿ ಮುಂದಿನ ಕ್ರಮ ವಹಿಸಲಾಗುವುದೆಂದು ಗ್ರಾಮ ಪಂಚಾಯಿತಿಯವರು ಹಿಂಬರಹ ನೀಡಿರುವುದು ಕಂಡು ಬಂದಿದೆ. ಕೇಂದ್ರ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ ಯೋಜನೆಯಡಿ ಕಾಮಗಾರಿ ಪ್ರಗತಿಯಲ್ಲಿದ್ದು ತಕ್ಷಣ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲು ಸ್ಥಳದಲ್ಲಿದ್ದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ಸೂಚಿಸಿದರು. ಈ ಜಾಗವು ಅರಣ್ಯ ಇಲಾಖೆಯ ಜಾಗವಾಗಿರುವುದರಿಂದಾಗಿ ಉಳಿದಂತೆ ವಸತಿ ಸೌಲಭ್ಯಕ್ಕೆ ಸ್ವಂತ ನಿವೇಶನದ ದಾಖಲಾತಿಯನ್ನು ನೀಡಿದರೆ ವಸತಿ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿ ಮಾಧ್ಯಮದಲ್ಲಿ ಪ್ರಕಟಗೊಂಡ ಸಾಮಾಜಿಕ ಬಹಿಷ್ಕಾರ ವರದಿಯು ರಂಜಿತಾ ಕೋಂ ಚಂದ್ರ ನೀಡಿರುವ ಹೇಳಿಕೆ ಗ್ರಾಮ ಪಂಚಾಯಿತಿ ವಿರುದ್ದ ಮಾಧ್ಯಮಗಳ ಮೂಲಕ ಸುಳ್ಳು ಆರೋಪ ಮಾಡಿದ್ದಾರೆಂದು ತಹಸೀಲ್ದಾರ್ ರಶ್ಮಿ ಹಾಲೇಶ್ ಮತ್ತು ಡಿ.ವೈ.ಎಸ್‌ಪಿ ಅರವಿಂದ ಕಲಗುಜ್ಜಿ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮೇಲ್ವಿಚಾರಕ ರಾಘವೇಂದ್ರ, ಅರಣ್ಯ ಇಲಾಖೆಯ ಡಿಆರ್‌ಎಫ್ ಶೋಭಾ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಭರತ್, ಕಂದಾಯ ಇಲಾಖೆ ಆರ್.ಐ ಅಪ್ರೋಜ್ ಇನ್ನಿತರರು ಹಾಜರಿದ್ದರು.

Leave a Comment