ಅರಸಾಳು, ಕುಂಸಿ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ; ತಾತ್ಕಾಲಿಕ ರೈಲು ನಿಲುಗಡೆ ಮುಂದುವರಿಕೆ

Written by Koushik G K

Published on:

ಶಿವಮೊಗ್ಗ :ಹೊಸನಗರ, ಶಿವಮೊಗ್ಗ ಮತ್ತು ಶಿಕಾರಿಪುರ ತಾಲ್ಲೂಕಿನ ಅಕ್ಕಪಕ್ಕದ ಹೋಬಳಿಗಳ ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಅರಸಾಳು ಮತ್ತು ಕುಂಸಿ ರೈಲು ನಿಲ್ದಾಣಗಳಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಸುವ ನಿರ್ಧಾರವನ್ನು ರೈಲ್ವೆ ಮಂಡಳಿ ಕೈಗೊಂಡಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರೈಲ್ವೆ ಇಲಾಖೆಯ ಮಾಹಿತಿ ಪ್ರಕಾರ:

  • ರೈಲು ಸಂಖ್ಯೆ 16227/16228 ಮೈಸೂರು – ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್ ರೈಲು ಅರಸಾಳು ನಿಲ್ದಾಣದಲ್ಲಿ 1 ನಿಮಿಷ ನಿಲ್ಲಲಿದೆ.
  • ರೈಲು ಸಂಖ್ಯೆ 16205/16206 ಮೈಸೂರು – ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್ ರೈಲುಗಳು ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ತಲಾ 1 ನಿಮಿಷ ನಿಲ್ಲುತ್ತವೆ.

ಈ ನಿಲುಗಡೆಗಳು 24 ಆಗಸ್ಟ್ 2025 ರಿಂದ ಪ್ರಾರಂಭವಾಗಿ 23 ಫೆಬ್ರವರಿ 2026 ರವರೆಗೆ, ಅಂದರೆ ಸುಮಾರು ಆರು ತಿಂಗಳ ಕಾಲ ಮುಂದುವರಿಯಲಿವೆ. ಸಮಯದಲ್ಲಿ ಯಾವುದೇ ಬದಲಾವಣೆ ಆಗದೇ, ಈಗಿರುವ ವೇಳಾಪಟ್ಟಿಯಲ್ಲೇ ನಿಲುಗಡೆ ಜಾರಿಯಲ್ಲಿರುತ್ತದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

ಹೊಸನಗರ , ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರಯಾಣಿಕರಿಗೆ ಇದು ದೊಡ್ಡ ಅನುಕೂಲವಾಗಲಿದ್ದು, ಸ್ಥಳೀಯರ ಬಹುಕಾಲದ ಬೇಡಿಕೆ ರೈಲ್ವೆ ಇಲಾಖೆಯಿಂದ ಮನ್ನಣೆ ಪಡೆದಂತಾಗಿದೆ.

Leave a Comment