ಸುಮೇಧಾ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ₹ 30.50 ಲಕ್ಷ ನಿವ್ವಳ ಲಾಭ : ಪ್ರದೀಪ್

Written by Mahesha Hindlemane

Updated on:

ಹೊಸನಗರ : ಸುಮಾರು 13 ವರ್ಷಗಳ ಹಿಂದೆ ಸ್ಥಾಪನೆಯಾಗಿ ಅಡಿಕೆ ಬೆಳೆಗಾರರಿಗೆ, ರೈತರಿಗೆ ಬಡವರಿಗೆ, ಸಹಕಾರಿ ಸಂಘದ ಸದಸ್ಯರ ಷೇರುದಾರರಿಗೆ ಉತ್ತಮ ರೀತಿಯಲ್ಲಿ ಸುಮೇಧಾ ವಿವಿಧೋದ್ದೇಶ ಸಹಕಾರಿ ಸಂಘ ಸ್ಪಂದಿಸಿದ್ದು 2024-25ನೇ ಸಾಲಿನಲ್ಲಿ 30,50,206 ರೂ. ನಿವ್ವಳ ಲಾಭಾಂಶ ಪಡೆದಿದೆ ಎಂದು ಸಂಘದ ಅಧ್ಯಕ್ಷ ಪ್ರದೀಪ್ ಕೆ.ಆರ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಗಾಯತ್ರಿ ಮಂದಿರದ ಆವರಣದಲ್ಲಿ 2024-25ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಏರ್ಪಡಿಸಲಾಗಿದ್ದು ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2025-26ನೇ ಸಾಲಿನಲ್ಲಿ ಸುಮಾರು 19 ಸಾವಿರ ಅಡಿಕೆ ಮೂಟೆಗಳು ಅವಕವಾಗುವಂತೆ ನೋಡಿಕೊಳ್ಳುವುದು ಸಹಕಾರಿಗೆ ಇನ್ನೂ ಹೆಚ್ಚಿನ ಸದಸ್ಯರನ್ನು ಹೊಂದುವುದರ ಮೂಲಕ ಸಹಕಾರಿಯ ಸೇವೆಯನ್ನು ವಿಸ್ತರಿಸುವುದು, ಸದಸ್ಯರನ್ನು ಆರ್ಥಿಕವಾಗಿ ಮೇಲೆತ್ತಲು ಕಾರ್ಯಯೋಜನೆ ರೂಪಿಸುವುದು ಮತ್ತು ಸದಸ್ಯರಿಗೆ ಸಹಕಾರಿಯಿಂದ ವಿವಿಧ ಸೇವೆಗಳನ್ನು ನೀಡಲು ಕ್ರಮ ಕೈಗೊಳ್ಳುವ ಬಗ್ಗೆ ಚಿಂತಿಸುತ್ತಿದ್ದು ಇದಕ್ಕೆ ಸಹಕಾರಿ ಸದಸ್ಯರ ಸಹಕಾರ ಅತ್ಯಗತ್ಯವಾಗಿದೆ ಎಂದರು.

2022-23ನೇ ಸಾಲಿನಲ್ಲಿ ಸಾಮಾನ್ಯ ಸದಸ್ಯತ್ವವನ್ನು 3788 ಜನ ಷೇರುದಾರರು ಹಾಗೂ ಸಹ ಸದಸ್ಯತ್ವ 164 ಜನ ಪಡೆದಿದ್ದು ಷೇರು ಬಂಡವಾಳ 51,37,300 ರೂಪಾಯಿ ಇದ್ದು 2023-24ನೇ ಸಾಲಿನಲ್ಲಿ 4047 ಷೇರುದಾರರು 180 ಸಹ ಸದಸ್ಯರು ಸೇರ್ಪಡೆಯಾಗಿದ್ದು ಒಟ್ಟು ಷೇರು ಬಂಡವಾಳ 44,23,600 ಅದೇ ಪ್ರಕಾರವಾಗಿ 2024-25ನೇ ಸಾಲಿನಲ್ಲಿ 4351 ಸಾಮಾನ್ಯ ಸದಸ್ಯರು ಸಹ ಸದಸ್ಯರಾಗಿ 194 ಇದ್ದು 33,35,300 ಷೇರು ಬಂಡವಾಳವಿರುತ್ತದೆ ಎಂದು ಸಭೆಗೆ ತಿಳಿಸಿದರು.

2024-25ನೇ ಸಾಲಿನಲ್ಲಿ 10 ಆಡಳಿತ ಮಂಡಳಿ ಸಭೆಗಳನ್ನು ನಡೆಸಲಾಗಿದ್ದು ಷೇರುದಾರರ ಸಹಕಾರದೊಂದಿಗೆ ಸೌಹಾರ್ದ ಭಾಂದವ್ಯ ಹೊಂದಿದ್ದು 2024-25ನೇ ಸಾಲಿನಲ್ಲಿ 33,35,300 ರೂ. ಷೇರು ಬಂಡವಾಳದೊಂದಿಗೆ 17,93,56,658 ರೂ. ಠೇವಣಿಯೊಂದಿಗೆ ಒಟ್ಟು 30,50,206 ರೂ. ನಿವ್ವಳ ಲಾಭ ಗಳಿಸಿರುತ್ತದೆ ಎಂದು ಸಂತೋಷದಿಂದ ಸಭೆಗೆ ತಿಳಿಸಿದರು.

ಅಂದಾಜು ಆಯ-ವ್ಯಯದ ಬಗ್ಗೆ ಮಾತನಾಡಿ_ 2024-25ನೇ ಸಾಲಿನಲ್ಲಿ ಬಡ್ಡಿ 1,20,00,000 ರೂ. ಬ್ಯಾಂಕ್ ಠೇವಣಿ ಬಡ್ಡಿ 17,00,000 ರೂ. ಇತರೆ 5,00,000 ರೂ. ದಲ್ಲಾಳಿ ಕಮಿಷನ್ 65,00,000 ರೂ. ಒಟ್ಟು 2,07,00,000 ರೂ. 2024-25ನೇ ಸಾಲಿಗೆ ಆದಾಯ ಬಂದಿರುವುದು 147,77,762 ರೂ. ಬ್ಯಾಂಕ್ ಠೇವಣಿ ಬಡ್ಡಿ 46,45,706-00 ಇತರೆ 10,13,805 ರೂ. ದಲ್ಲಾಳಿ ಕಮಿಷನ್ 63,13,404 ರೂ. ಒಟ್ಟು 2,67,50,677 ರೂ. 2024-25ನೇ ಸಾಲಿಗೆ ಆದಾಯ ಮೀರಿದ್ದು ಬಡ್ಡಿ 27,77,762 ರೂ. ಬ್ಯಾಂಕ್ ಠೇವಣಿ ಬಡ್ಡಿ 29,45,706 ರೂ. ಇತರೆ 5,13,805 ರೂ. ಒಟ್ಟು 62,37,273 ರೂ. 2025-26ನೇ ಸಾಲಿನ ಅಂದಾಜು ಆದಾಯ ಬಡ್ಡಿ 1,65,00,000 ರೂ. ಬ್ಯಾಂಕ್ ಠೇವಣಿ ಬಡ್ಡಿ 35,00,000 ರೂ. ಇತರೆ 10,00,000 ರೂ. ದಲ್ಲಾಳಿ ಕಮಿಷನ್ 75,00,000 ರೂ. ಒಟ್ಟು 285,00,000 ರೂ. 2026-27ನೇ ಸಾಲಿನ ಅಂದಾಜು ಆದಾಯ 180,00,000 ರೂ. ಬ್ಯಾಂಕ್ ಠೇವಣಿ ಬಡ್ಡಿ 65,00,000 ರೂ. ಇತರೆ 16,00,000 ರೂ. ದಲ್ಲಾಳಿ ಕಮೀಷನ್ 75,00,000 ರೂ. ಒಟ್ಟು 3,36,00,000 ರೂ. ಎಂದು ಅಂದಾಜಿಸಲಾಗಿದೆ ಎಂದರು.

ಮೂರಂತಸ್ತಿನ ಗೋದಾಮು ಉದ್ಘಾಟನೆ ;

ಚರ್ಚ್ ರಸ್ತೆಯಲ್ಲಿರುವ ಮೂರಂತಸ್ಥಿನ ಗೋದಾಮು ಗಣಹೋಮದೊಂದಿಗೆ ಉದ್ಘಾಟಿಸಲಾಯಿತು.

ಇದೇ ಸಂದರ್ಭದಲ್ಲಿ ಷೇರುದಾರರ ಮಕ್ಕಳಿಗೆ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

ಈ ಸರ್ವಸದಸ್ಯರ ಸಭೆಯಲ್ಲಿ ಉಪಾಧ್ಯಕ್ಷ ಅನಂತಮೂರ್ತಿ ವಿ, ನಿರ್ದೇಶಕರಾದ ರಮಾನಂದ ಎಂ.ಸಿ, ವಿನಾಯಕ ಹೆಚ್.ಜಿ, ಉಮೇಶ್ ಬಿ.ಪಿ, ಸರೇಶ್ ಎಸ್‌.ಪಿ, ಸುನೀಲ್‌ಕುಮಾರ್ ಜಿ.ಎ, ಸುಬ್ರಹ್ಮಣ್ಯ ವಿ.ಎನ್, ಸುಬ್ರಮಣ್ಯ ಎನ್ ಭಟ್, ಅರವಿಂದ ಎಂ, ಅನಂತಪದ್ಮನಾಭ ಬಾಯಿರಿ, ಸುಜಾತ ಉಡುಪ, ಜ್ಯೋತಿ ಹರಿಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಎನ್.ವಿ ಶಾಖಾ ವ್ಯವಸ್ಥಾಪಕರಾದ ಸುನೀಲ್‌ಕುಮಾರ್ ಹೆಚ್.ಎನ್, ಮಧುಕರ, ಮಹೇಶ್, ನಾಗಲಿಂಗೇಶ, ಲಕ್ಷ್ಮಿ ಕುಮಾರಿ ಸೌಮ್ಯ, ಷೇರುದಾರರಾದ ಎನ್ ಶ್ರೀಧರ ಉಡುಪ, ಗುಬ್ಬಿಗ ಅನಂತ್‌ರಾವ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಚೀಟಿ ಎತ್ತುವುದರ ಮೂಲಕ 5 ಜನ ಷೇರುದಾರರಿಗೆ ಬಹುಮಾನ ವಿತರಿಸಲಾಯಿತು.

Leave a Comment