ತೀರ್ಥಹಳ್ಳಿ : ಬ್ರಹ್ಮೋಸ್ ಗಣಪತಿ – ಹೊದಲದಲ್ಲಿ ವಿಶೇಷ ಆಕರ್ಷಣೆ

Written by Koushik G K

Published on:

ತೀರ್ಥಹಳ್ಳಿ :ತಾಲೂಕಿನ ಹೊದಲದ ಶ್ರೀ ಗಣಪತಿ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿರುವ 31ನೇ ವರ್ಷದ ಗಣೇಶೋತ್ಸವದಲ್ಲಿ ಈ ಬಾರಿ ವಿಶೇಷ ಆಕರ್ಷಣೆಯಾಗಿ “ಬ್ರಹ್ಮೋಸ್ ಗಣೇಶ” ಪ್ರತಿಷ್ಠಾಪನೆ ಮಾಡಲಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕುಶಲಕರ್ಮಿ ಹಾಗೂ ಕಲಾವಿದ ಉಪೇಂದ್ರ ಆಚಾರ್ಯ ಅವರ ಸೃಜನಾತ್ಮಕ ಚಿಂತನೆಯ ಫಲವಾಗಿ ಈ ಗಣಪತಿಯನ್ನು ಭಾರತೀಯ ಸೇನೆಯ ಅತ್ಯಾಧುನಿಕ ಕ್ಷಿಪಣಿ ಬ್ರಹ್ಮೋಸ್ ವಿನ್ಯಾಸದಲ್ಲಿ ರೂಪಿಸಲಾಗಿದೆ. ಪ್ರತಿಮೆ ನೋಡಲು ಆಗಮಿಸುತ್ತಿರುವ ಭಕ್ತರಿಗೆ ಇದು ವಿಶೇಷ ಕುತೂಹಲವನ್ನು ಮೂಡಿಸಿದೆ.

ಪ್ರತಿವರ್ಷವೂ ವಿಭಿನ್ನ ಆಲೋಚನೆಗಳಲ್ಲಿ ಗಣಪತಿಯನ್ನು ಅಲಂಕರಿಸುವ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ಸಮಿತಿಯವರು, ಈ ಬಾರಿ ದೇಶಾಭಿಮಾನ ಮತ್ತು ಆಧುನಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂದೇಶವನ್ನು ಒದಗಿಸುವ ಉದ್ದೇಶದಿಂದ ಈ ವಿನ್ಯಾಸವನ್ನು ಆಯ್ಕೆ ಮಾಡಿದ್ದಾರೆ.

ಸ್ಥಳೀಯರು ಹಾಗೂ ಭಕ್ತರು ಪ್ರತಿದಿನ ಹರಿದುಬರುತ್ತಿದ್ದು, ಈ ವಿನೂತನ ಬ್ರಹ್ಮೋಸ್ ಗಣೇಶವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆ, ಪೂಜೆ ಹಾಗೂ ಧಾರ್ಮಿಕ ಚಟುವಟಿಕೆಗಳೊಂದಿಗೆ ಸಾಗುತ್ತಿದೆ.

Leave a Comment