ಹೊಸನಗರ ; ಇಂದು ಬೆಂಗಳೂರು ಇಷ್ಟು ಬೆಳೆದು ನಿಂತಿದೆ ಎಂದರೇ ಅದರ ಕೊಡುಗೆ ಕೆಂಪೇಗೌಡರಿಗೆ ಸೇರಬೇಕು. ಅವರು ಮುಂದಿನ ಬೆಂಗಳೂರು ಭವಿಷ್ಯವನ್ನು ಯೋಚಿಸಿ ರೂಪಿಸಿ ಬೆಂಗಳೂರು ಸ್ಥಾಪನೆ ಮಾಡದ್ದರು ಎಂದು ಶಾಸಕ ಬೇಳೂರು ಗೋಪಾಲಕೃಷ್ಣರವರು ಹೇಳಿದರು.
ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಆಚರಿಸಲು ಉಪಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಣಯಗೊಳ್ಳಲಾಗಿದ್ದು ಈ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯದ ಪ್ರತಿ ತಾಲೂಕು ಮಟ್ಟದಲ್ಲಿ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ನಾಡಪ್ರಭು ಕೆಂಪೇಗೌಡರ ಸಾಧನೆ ಮತ್ತು ಚರಿತ್ರೆಯನ್ನು ನಾಡಿನ ಮನೆ ಮನೆಗೆ ಮುಟ್ಟಿಸಲು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು ಸ್ಪರ್ಧಿಗಳಿಗೆ ಬಹುಮಾನಗಳನ್ನು ಕೆಂಪೇಗೌಡರ ಬಗ್ಗೆಯೇ ಮಾಹಿತಿಗನ್ನೊಳಗೊಂಡ ಪುಸ್ತಕಗಳನ್ನು ನೀಡಲು ಆದೇಶ ಹೊರಡಿಸಲಾಗಿದ್ದು, ಅದರಂತೆ ಶಿಕ್ಷಣ ಇಲಾಖೆಯ ವತಿಯಿಂದ 2025ರ ಆ.5 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಹೊಸನಗರ ಈ ಶಾಲೆಯಲ್ಲಿ ಕೆಂಪೇಗೌಡ ಚರಿತ್ರೆ ಮತ್ತು ಸಾಧನೆಗಳ ಬಗ್ಗೆ ನಾಲ್ಕು ವಿಭಾಗದಲ್ಲಿ ತಾಲ್ಲೂಕಿನ ವಿವಿಧ ಶಾಲಾ ಕಾಲೇಜುಗಳ ಮಕ್ಕಳಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಆಶುಭಾಷಣ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭವನ್ನು ಹೊಸನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದು ಬಹುಮಾನ ವಿತರಿಸಿ ಮಾತನಾಡಿದರು.

ಕರ್ನಾಟಕವು ಶೂರರು ಜ್ಞಾನಿಗಳು ಮತ್ತು ಜನಪರ ಆಡಳಿತಗಾರರ ಸಾಹಸ ಖಾತೆಗಳಿಂದ ತುಂಬಿದೆ ಅವರಲ್ಲಿ ಶಾಶ್ವತ ಸ್ಥಾನವನ್ನು ಪಡೆದವರು ಮತ್ತು ಬೆಂಗಳೂರು ನಗರವನ್ನು ಸ್ಥಾಪಿಸಿದವರು ನಾಡಪ್ರಭು ಕೆಂಪೇಗೌಡರು, ಭಾರತದ ತಂತ್ರಜ್ಞಾನದ ರಾಜಧಾನಿಯಾದ ಬೆಂಗಳೂರಿನವರಿಗೆ ಅಡಿಪಾಯವನ್ನು ಹಾಕಿದವರು ಈ ಮಹಾನೀಯರು. ಇವರು ಕೇವಲ ಶೂರರಲ್ಲ ದೂರದೃಷ್ಠಿಯ ಯೋಜಕರು ಕಲ್ಯಾಣಮಯ ಆಡಳಿತಗಾರ ಜನಮನಗಳನ್ನು ಗೆದ್ದ ನಾಯಕ ಕೆಂಪೆಗೌಡರ ದೂರ ದೃಷ್ಟಿಯ ನಾಯಕತ್ವವೇ ಇಂದಿನ ಕರ್ನಾಟಕದ ಹೆಮ್ಮೆಯ ಬೆಂಗಳೂರು ನಗರವಾಗಿದೆ ಅವರ ಸಾಧನೆಗಳು ಮತ್ತು ಅವರ ನೆನಪುಗಳು ನಮಗೆ ಸದಾ ಸ್ಮರಣೀಯ. ಅವರ ಸಾಧನೆಗಳನ್ನು ಮತ್ತು ಅವರ ಆದರ್ಶಗಳನ್ನು ಮನೆ-ಮನೆಗೆ ತಲುಪಿಸಲು ನಮ್ಮ ಸರ್ಕಾರವು ಬದ್ದವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಪಿ ಚಿದಂಬರ, ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ, ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ವ್ಯವಸ್ಥಾಪಕ ಶಿವಕುಮಾರ್, ಬಿಇಒ ಚೇತನ ಆರ್.ಪಿ, ಕಾರ್ಯಕ್ರಮದ ನೋಡಲ್ ಅಧಿಕಾರಿ ದೈಹಿಕ ಶಿಕ್ಷಣ ಪರಿವೀಕ್ಷಕ ವಿನಯ್ ಹೆಗ್ಡೆ, ಶಿಕ್ಷಣ ಸಂಯೋಜಕರಾದ ಕರಿಬಸಪ್ಪ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹರೀಶ್, ಸೋಮಶೇಖರ, ಶೇಷಾಚಲ ಜಿ. ನಾಯ್ಕ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.