ಮಧ್ಯವರ್ತಿಗಳಿಗೆ ಅಡಿಕೆ ಹಾಕದಿರಿ ; ಆರ್.ಎಂ. ಮಂಜುನಾಥಗೌಡ

Written by Mahesha Hindlemane

Published on:

ಹೊಸನಗರ ; ಯಾವುದೇ ಸಂಘ-ಸಂಸ್ಥೆಗಳಲ್ಲಿ ಉನ್ನತ ಸ್ಥಾನ ಪಡೆದ ಅಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಸರಿಯಿದ್ದರೆ ಆ ಸಂಸ್ಥೆ ಅತೀ ಎತ್ತರಕ್ಕೆ ಬೆಳೆದು ಏಳಿಗೆ ಕಾಣಲು ಸಾಧ್ಯ. ತುಂಗಾ ಅಡಿಕೆ ಮಂಡಿ ಆರು ವರ್ಷ ಪೂರೈಸಿ ಏಳನೇ ವರ್ಷಕ್ಕೆ ಕಾಲಿಟ್ಟಿದ್ದು ಇಷ್ಟು ಬೇಗ ಯಶಸ್ವಿಯಾಗಲೂ ಸಂಘದ ಅಧ್ಯಕ್ಷ, ಸದಸ್ಯರ ಪಾತ್ರ ಹಿರಿದಾಗಿದೆ ಎಂದು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಎಪಿಎಂಸಿ ಯಾರ್ಡ್ ಆವರಣದಲ್ಲಿ ತುಂಗಾ ಅಡಿಕೆ ಮಂಡಿಯ 7ನೇ ವರ್ಷದ ಸರ್ವ ಸದಸ್ಯರ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೊಸನಗರ ತಾಲ್ಲೂಕಿನ ಅಡಿಕೆಗಳು ಸುರಕ್ಷಿತವಾಗಿದ್ದು ಪ್ರತಿಯೊಬ್ಬ ಅಡಿಕೆ ಬೆಳೆಗಾರರು ಅಡಿಕೆ ಮಂಡಿಗಳಿಗೆ ಅಡಿಕೆ ಹಾಕಿರಿ. ನೀವು ಮಧ್ಯವರ್ತಿಗಳಿಗೆ ಅಡಿಕೆ ನೀಡುತ್ತಿರುವುದರಿಂದ ಅವರು ಕಲಬೆರಕೆ ಮಾಡಿ ವ್ಯಾಪಾರ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೊರ ರಾಷ್ಟ್ರಗಳಿಗೆ ಅಡಿಕೆ ಕಳುಹಿಸಿದಾಗ ಅಡಿಕೆ ಗುಣಮಟ್ಟ ಸರಿಯಿಲ್ಲ ಎಂದು ವಾಪಾಸು ಕಳುಹಿಸುವುದರಿಂದ ನೀವು ಬೆಳೆದ ಅಡಿಕೆಗೆ ಬೆಲೆಯಿಲ್ಲದಂತಾಗಿ ಅಡಿಕೆ ಧಾರಣೆ ಕುಂಠಿತವಾಗುತ್ತದೆ. ಇದರ ಜೊತೆಗೆ ಪುನಃ ಎಲೆಚುಕ್ಕಿ ರೋಗ ಕಾಣಿಸಿಕೊಳ್ಳುತ್ತಿದೆ ಇದರಿಂದ ಮತ್ತೆ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಎದರುರಾಗಲಿದೆ ಎಂದರು.

ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಡಿ :

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವಾಗ ಎಚ್ಚರಿಕೆ ಇರಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ಕೇಳುವ ಪರಿಸ್ಥಿತಿಯಲ್ಲಿದೆ ಎಚ್ಚರಿಕೆಯಿಂದ ಹೆಜ್ಜೆ ಇಡಿ ಎಂದರು.

ತುಂಗಾ ಅಡಿಕೆ ಮಂಡಿಗೆ 42,05,347 ಲಾಭ ;

ಸುಮಾರು 7 ವರ್ಷಗಳ ಹಿಂದೆ ಪ್ರಾರಂಭವಾಗಿರುವ ತುಂಗಾ ಅಡಿಕೆ ಮಂಡಿಯಲ್ಲಿ 2024-25ನೇ ಸಾಲಿನಲ್ಲಿ 42,05,347 ರಷ್ಟು ಲಾಭಾಂಶವಾಗಿದೆ ಎಂದು ತುಂಗಾ ಅಡಿಕೆ ಮಂಡಿಯ ಅಧ್ಯಕ್ಷ ದುಮ್ಮ ವಿನಯಕುಮಾರ್‌ ಸಭೆಯಲ್ಲಿ ತಿಳಿಸಿದರು.

ನಾವು ತುಂಗಾ ಅಡಿಕೆ ಮಂಡಿಯನ್ನು ಪ್ರಾರಂಭಿಸುವಾಗ 582 ಜನ ಸದಸ್ಯರಿದ್ದು 2024-25ನೇ ಸಾಲಿನಲ್ಲಿ 1357 ಸದಸ್ಯರ ಬಲ ಹೊಂದಿದೆ. 2020-21ರಲ್ಲಿ 83,10,018 ರೂಪಾಯಿ ಠೇವಣಿ ಸಂಗ್ರಹವಾಗಿದ್ದು 2024-25ನೇ ಸಾಲಿನಲ್ಲಿ 7,71,91,231 ರೂಪಾಯಿ ಸಂಗ್ರಹವಾಗಿದೆ. 2020-21ರಲ್ಲಿ 173 ಸದಸ್ಯರಿಗೆ 2,00,10,993 ಸಾಲವನ್ನು ನೀಡಲಾಗಿದ್ದು 2024-25ನೇ ಸಾಲಿನಲ್ಲಿ 415 ಸದಸ್ಯರಿಗೆ 9,32,12,553 ರೂಪಾಯಿ ಸಾಲವನ್ನು ನೀಡಲಾಗಿದೆ ಎಂದರು.

2024-25ನೇ ಸಾಲಿನಲ್ಲಿ ಸುಮಾರು 10,000 ಅಡಿಕೆ ಮೂಟೆಗಳು ಅವಕವಾಗುವಂತೆ ನೋಡಿಕೊಳ್ಳುವುದು ಸಹಕಾರಿಗೆ ಹೆಚ್ಚಿನ ಸದಸ್ಯರನ್ನು ಹೊಂದುವುದು ಹಾಗೂ ಸಹಕಾರಿಯ ಸೇವೆಯನ್ನು ವಿಸ್ತರಿಸುವುದು ಸಹಕಾರಿ ಗುಣಮಟ್ಟದ ಅಡಿಕೆ ಅವಕವಾಗುವಂತೆ ಕ್ರಮವಿಡುವುದು ಹಾಗೂ ರೈತ ಸದಸ್ಯರಿಗೆ ಗುಣಮಟ್ಟದ ಅಡಿಕೆ ಬಗ್ಗೆ ಅರಿವು ಮೂಡಿಸುವುದು ಸದಸ್ಯರನ್ನು ಆರ್ಥಿಕವಾಗಿ ಮೇಲೆತ್ತಲು ಕಾರ್ಯಯೋಜನೆ ರೂಪಿಸುವುದು ಹಾಗೂ ನಮ್ಮ ಸಂಸ್ಥೆಯ ರೈತ ಬೆಳೆಗಾರರಿಗೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಕಷ್ಟ ಕಾಲದಲ್ಲಿ ಕೈಜೋಡಿಸುವುದರ ಜೊತೆಗೆ ಆರ್ಥಿಕ ನೆರವು ನೀಡವ ಉದ್ದೇಶದಿಂದ ತುಂಗಾ ಅಡಿಕೆ ಮಂಡಿಯನ್ನು ಏಳು ವರ್ಷಗಳ ಹಿಂದೆ ಸ್ಥಾಪಿಸಲಾಗಿದ್ದು ಮುಂದಿನ ದಿನದಲ್ಲಿ ಅಡಿಕೆ ಬೆಳೆಗಾರರ ಜೊತೆಗೆ ನಾವಿದ್ದೇವೆ ಎಂದರು.

ಈ ಸಭೆಗೆ ಮುಖ್ಯ ಅತಿಥಿಯಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಆಗಮಿಸಿ ಅಡಿಕೆ ಬೆಳೆಗಾರರ ಕಷ್ಟ ಸುಖಗಳ ಬಗ್ಗೆ ಮಾತನಾಡಿದರು.

ಈ ಸರ್ವ ಸದಸ್ಯರ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಮಾಲತೇಶ್, ದಿನೇಶ್ ಹೆಚ್.ಎಸ್, ನಾಗೇಶ್ ಹೆಚ್.ಟಿ, ರವಿ ಜಿ.ಎಸ್ ಗುಬ್ಬಿಗಾ, ಜಯದೇವಪ್ಪ ನವೀನ್‌ಕುಮಾರ್, ಮಹೇಶ್, ಸುಧೀರ್‌ಕುಮಾರ್, ಹೆಚ್.ಎಂ.ಬಷೀರ್ ಅಹಮ್ಮದ್, ಕೆ.ಎಸ್ ಶಿವಪ್ಪ, ವಿನಾಯಕ ಸಿ, ವೀರಮ್ಮ, ಹೇಮಾ, ನಾನ್ಯಾನಾಯ್ಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರಸ್ವಾಮಿ ಹೆಚ್‌.ಎಸ್ ಗುಬ್ಬಿಗಾ ಅನಂತರಾವ್, ಗುಬ್ಬಿಗಾ ಸುನೀಲ್, ಚಂದ್ರಮೌಳಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment