ಸಾಗರ : ಅರಣ್ಯ ಭೂಮಿ ವಿವಾದ- ಸಭೆಯಲ್ಲಿ ಅರಣ್ಯ ಅಧಿಕಾರಿಗಳಿಗೆ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ

Written by Koushik G K

Published on:

ಸಾಗರ :ತಾಲ್ಲೂಕಿನ ಬಳಸಗೋಡ ಪ್ರದೇಶದಲ್ಲಿ ಜನರು ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆಂಬ ಕಾರಣಕ್ಕಾಗಿ ಅರಣ್ಯ ಇಲಾಖೆಯವರು ನೋಟಿಸ್ ನೀಡಿದ್ದರು. ಈ ಕ್ರಮ ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿ ಪ್ರತಿಭಟನೆಗೂ ಕಾರಣವಾಗಿತ್ತು. ಈ ಹಿನ್ನೆಲೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಅರಣ್ಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಂದು ಸಾಗರದ ಪ್ರವಾಸಿ ಮಂದಿರದಲ್ಲಿ ನಡೆದ ಅರಣ್ಯಾಧಿಕಾರಿಗಳ ಸಭೆಯಲ್ಲಿ ಶಾಸಕ ಬೇಳೂರು ಅವರು, “ನನ್ನ ಗಮನಕ್ಕೆ ಬಾರದೇ ಜನರಿಗೆ ನೋಟಿಸ್ ನೀಡುವುದು ಸರಿಯಲ್ಲ” ಎಂದು ಅಧಿಕಾರಿಗಳನ್ನು ಖಡಕ್ ಎಚ್ಚರಿಸಿದರು. ಮುಂದಿನ ದಿನಗಳಲ್ಲಿ ಯಾವುದೇ ಸಂದರ್ಭದಲ್ಲೂ ಜನರ ವಿರುದ್ಧ ನೋಟಿಸ್ ಹೊರಡಿಸುವ ಮೊದಲು ತಮಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಬಳಸಗೋಡ ಪ್ರದೇಶದಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿ ನಿರ್ಮಾಣದ ಯೋಜನೆ ಇದೆ. ಇದಕ್ಕಾಗಿ 100 ಎಕರೆ ಭೂಮಿ ಅಗತ್ಯವಿದ್ದು, ಪ್ರಸ್ತುತ ಅಲ್ಲಿ ಕೇವಲ 80 ಎಕರೆ ಮಾತ್ರ ಲಭ್ಯವಿದೆ ಎಂದು ಅವರು ತಿಳಿಸಿದರು. “ಭೂಮಿ ಸಂಬಂಧ ಯಾವುದೇ ಗೊಂದಲಗಳು, ಒತ್ತುವರಿ ಪ್ರಕರಣಗಳು ನಡೆಯದಂತೆ ಇಲಾಖೆ ತಕ್ಷಣ ಕ್ರಮವಹಿಸಬೇಕು” ಎಂದು ಸೂಚಿಸಿದರು.

ಬೆಳ್ಳಂದೂರು ಅರಣ್ಯ ಭೂಮಿ ವಿಚಾರವನ್ನೂ ಅವರು ಸಭೆಯಲ್ಲಿ ಚರ್ಚಿಸಿದರು. “ಕಾನೂನು ಪ್ರಕಾರ ಗೇಣಿದಾರರಿಗೆ ಮೂರು ಎಕರೆ ಭೂಮಿಯನ್ನು ಬಗರ್ ಹುಕುಂ ಅಡಿಯಲ್ಲಿ ನೀಡಬಹುದು. ಈ ಹಂಚಿಕೆ ಪ್ರಕ್ರಿಯೆ ಸಂಪೂರ್ಣ ಕಾನೂನುಬದ್ಧವಾಗಿರಬೇಕು. ಆದರೆ ಸಾಗರ ತಾಲ್ಲೂಕಿನಲ್ಲೇ ಹೊಸದಾಗಿ ಅರಣ್ಯ ಭೂಮಿ ಒತ್ತುವರಿ ಆಗದಂತೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು” ಎಂದು ಬೇಳೂರು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಸಾಗರ ಡಿಎಫ್ಓ ಮೋಹನ್ ಕುಮಾರ್, ಎಸಿಎಫ್ ರವಿ ಕೆ., ರವೀಂದ್ರ ನಾಯಕ್, ವೈಲ್ಡ್ ಲೈಫ್ ಕಾರ್ಗಲ್ ಪ್ರಭಾರ ಉಪ ವಲಯ ಅರಣ್ಯಾಧಿಕಾರಿ ಸಿಂಧು, ಸಾಗರ ಆರ್‌ಎಫ್‌ಓ ಅಣ್ಣಪ್ಪ, ಕೂಗಾರು ಆರ್‌ಎಫ್‌ಓ ಮಹೇಶ್, ಅಂಬಾರಗೋಡ್ಲು ಆರ್‌ಎಫ್‌ಓ ಶಾಂತಪ್ಪ ಪೂಜಾರ್, ಹೊಸನಗರ ಆರ್‌ಎಫ್‌ಓ ಅನಿಲ್ ಕುಮಾರ್, ಕಾರ್ಗಲ್ ಆರ್‌ಎಫ್‌ಓ ರಾಘವೇಂದ್ರ ಅಗಸೆ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದ

ಪೌರ ಕಾರ್ಮಿಕರು, ರೈತರು, ಸೈನಿಕರು ದೇವರ ಸುಪುತ್ರರು ; ಬೇಳೂರು ಗೋಪಾಲಕೃಷ್ಣ

Leave a Comment