ರಿಪ್ಪನ್‌ಪೇಟೆ ; ಪಟ್ಟಣದ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ 5ನೇ ವರ್ಷದ ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ಬುಧವಾರ ನಡೆಯಿತು.
ಅಧ್ಯಕ್ಷರಾಗಿ ಜಿ.ಆರ್. ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿಗಳಾಗಿ ಹಸನಬ್ಬ ಬ್ಯಾರಿ ಮತ್ತು ಶ್ರೀಧರ್ ಚಿಗುರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ದೇವರಾಜ್ ಕೆ., ರಮೇಶ್ ಫ್ಯಾನ್ಸಿ, ಸಾಜಿದಾ ಹನೀಪ್, ವಾಣಿ ಗೋವಿಂದಪ್ಪ ಗೌಡ ಹಾಗೂ ಸಹಕಾರ್ಯದರ್ಶಿಯಾಗಿ ದೀಪಾ ನಾಗರಾಜ್ ಆಯ್ಕೆಗೊಂಡರು.
ನವೆಂಬರ್ 1ಕ್ಕೆ ಕನ್ನಡ ಧ್ವಜಾರೋಹಣ
ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1ರಂದು ವಿನಾಯಕ ವೃತ್ತದಲ್ಲಿ ಕನ್ನಡ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಜಿ. ಆರ್. ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ಗ್ರಾಮ ಪಂಚಾಯತ್ ಕುವೆಂಪು ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, “ಕನ್ನಡ ಭುವನೇಶ್ವರಿ ದೇವಿಯೊಂದಿಗೆ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಭಾಗವಹಿಸುವ ಮೆರವಣಿಗೆಯೂ ನಡೆಯಲಿದೆ. ವಿನಾಯಕ ವೃತ್ತದಲ್ಲಿ ಶಾಲಾ ಮಕ್ಕಳಿಗೆ ಸಿಹಿ ಹಂಚಲಾಗುತ್ತದೆ,” ಎಂದು ಹೇಳಿದರು.
ನವೆಂಬರ್ 14ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ
ಮಕ್ಕಳ ದಿನಾಚರಣೆಯ ಅಂಗವಾಗಿ ನವೆಂಬರ್ 14ರಂದು ಹಿಂದೂ ಮಹಾಸಭಾ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಅರ್. ಎ. ಚಾಬುಸಾಬ್, ಆನಂದ್ ಮೆಣಸೆ, ಉಪಾಧ್ಯಕ್ಷ ರಮೇಶ್ ಫ್ಯಾನ್ಸಿ, ದೇವರಾಜ್ ಕೆ., ಸಲಹಾ ಸಮಿತಿಯ ಆಸಿಫ್ ಭಾಷಾ, ಈಶ್ವರಪ್ಪಗೌಡ ಹಾಗೂ ಗಣ್ಯರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.