Shivamogga | ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಲಾಡ್ಜ್ ಮೇಲೆ ಪೊಲೀಸರ ದಾಳಿ ; ಇಬ್ಬರು ಕಾಲೇಜ್ ವಿದ್ಯಾರ್ಥಿಗಳು ಪತ್ತೆ !
ಶಿವಮೊಗ್ಗ : ಅನೈತಿಕ ಚಟುವಟಿಕೆ ನಡೆಯುತ್ತಿದ್ದ ಲಾಡ್ಜ್ (Lodge) ಮೇಲೆ ಪೊಲೀಸರು (Police) ದಾಳಿ (Raid) ನಡೆಸಿದ್ದಾರೆ. ಲಾಡ್ಜ್ ಕೊಠಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳೂ (College Students) ಪತ್ತೆಯಾಗಿದ್ದಾರೆ.
ಶಿವಮೊಗ್ಗ (Shivamogga)ದ ಕೆ.ಆರ್.ಪುರಂ ರಸ್ತೆಯಲ್ಲಿರುವ ಬ್ಲೂ ಕ್ರಿಸ್ಟಲ್ ಲಾಡ್ಜ್ ಮೇಲೆ ಪೊಲೀಸರು ದಾಳಿ ಮಾಡಿದ್ದು ಈ ವೇಳೆ ಇಬ್ಬರೂ ವಿದ್ಯಾರ್ಥಿಗಳೂ ಇದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಅನೇಕ ಯುವಕ, ಯುವತಿಯರು ಲಾಡ್ಜ್ಗೆ ಬಂದು ಹೋಗುವುದನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದು ಮಾಹಿತಿ ನೀಡಿದ್ದರು.
ಇನ್ನು ವಿದ್ಯಾರ್ಥಿಗಳು ಪರಸ್ಪರ ಒಪ್ಪಿಗೆ ಮೇರೆಗೆ ಲಾಡ್ಜ್ಗೆ ಬಂದಿದ್ದರಂತೆ. ಹೀಗಾಗಿ ಲಾಡ್ಜ್ ಪರವಾನಗಿ ರದ್ದುಪಡಿಸುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದರು.