ಶಿವಮೊಗ್ಗದ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ

Written by Mahesha Hindlemane

Published on:

ಶಿವಮೊಗ್ಗ ; ಕರ್ನಾಟಕ ರಾಜ್ಯೋತ್ಸವದ ಮುನ್ನೋಟದಲ್ಲೇ ರಾಜ್ಯ ಸರ್ಕಾರವು ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳನ್ನು ಘೋಷಿಸಿದ್ದು, ಶಿವಮೊಗ್ಗ ಜಿಲ್ಲೆಯ ಮೂವರು ಗಣ್ಯರು ಈ ಬಾರಿ ಗೌರವಕ್ಕೆ ಅರ್ಹರಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಾಜ್ಯೋತ್ಸವಕ್ಕೂ ಕೇವಲ ಎರಡು ದಿನ ಬಾಕಿ ಇರುವಾಗ ಸರ್ಕಾರ ಪ್ರಶಸ್ತಿಗಳ ಪಟ್ಟಿ ಪ್ರಕಟಿಸಿದ್ದು, ಜಿಲ್ಲೆಯಿಂದ ಸಾಹಿತ್ಯ, ಜಾನಪದ ಮತ್ತು ಸಮಾಜಸೇವೆ ಕ್ಷೇತ್ರಗಳಲ್ಲಿ ಮೂವರು ಸಾಧಕರನ್ನು ಆಯ್ಕೆ ಮಾಡಿದೆ.

ಪ್ರಶಸ್ತಿ ಪಡೆದ ಶಿವಮೊಗ್ಗದ ಸಾಧಕರು:

  • ಸಾಹಿತ್ಯ ಕ್ಷೇತ್ರ: ಪ್ರೊ. ರಾಜೇಂದ್ರ ಚೆನ್ನಿ, ಹಿರಿಯ ಸಾಹಿತಿ
  • ಜಾನಪದ ಕ್ಷೇತ್ರ: ಬಿ. ಟಾಕಪ್ಪ ಕಣ್ಣೂರು, ಹಿರಿಯ ಜಾನಪದ ಕಲಾವಿದ
  • ಸಮಾಜಸೇವೆ ಕ್ಷೇತ್ರ: ಕೋಣಂದೂರು ಲಿಂಗಪ್ಪ, ಸಮಾಜಸೇವಕ

ರಾಜ್ಯ ಮಟ್ಟದಲ್ಲಿ ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಅನೇಕ ಗಣ್ಯರು ಗೌರವಕ್ಕೆ ಪಾತ್ರರಾಗಿದ್ದಾರೆ.

ಸಾಹಿತ್ಯ ಕ್ಷೇತ್ರದಿಂದ 6, ಜಾನಪದದಿಂದ 8, ಸಂಗೀತದಿಂದ 2, ನೃತ್ಯದಿಂದ 1, ಚಲನಚಿತ್ರ/ಕಿರುತೆರೆ ಕ್ಷೇತ್ರದಿಂದ 2, ಆಡಳಿತದಿಂದ 1, ವೈದ್ಯಕೀಯದಿಂದ 2, ಸಮಾಜಸೇವೆಯಿಂದ 5, ಸಂಕೀರ್ಣ ಕ್ಷೇತ್ರದಿಂದ 8, ಹೊರನಾಡ/ಹೊರದೇಶದಿಂದ 2, ಪರಿಸರದಿಂದ 2, ಕೃಷಿಯಿಂದ 2, ಮಾಧ್ಯಮದಿಂದ 4, ವಿಜ್ಞಾನ/ತಂತ್ರಜ್ಞಾನದಿಂದ 3, ಸಹಕಾರದಿಂದ 1, ಯಕ್ಷಗಾನದಿಂದ 3, ಬಯಲಾಟದಿಂದ 1, ರಂಗಭೂಮಿಯಿಂದ 5, ಶಿಕ್ಷಣದಿಂದ 4, ಕ್ರೀಡೆಗಳಿಂದ 3, ನ್ಯಾಯಾಂಗದಿಂದ 1, ಶಿಲ್ಪಕಲೆಗಳಿಂದ 2, ಚಿತ್ರಕಲೆಗಳಿಂದ 1, ಕರಕುಶಲದಿಂದ 1 ಸಾಧಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪ್ರತಿ ವರ್ಷ ಕರ್ನಾಟಕ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡಿದ ಗಣ್ಯರಿಗೆ ರಾಜ್ಯ ಸರ್ಕಾರದಿಂದ ನೀಡಲಾಗುವ ಗೌರವವಾಗಿದೆ.

Leave a Comment